ಮುಂಬಯಿ – ಕಳೆದ 3 ತಿಂಗಳಿನಲ್ಲಿ ಅಂದರೆ ಜನವರಿಯಿಂದ ಮಾರ್ಚ ಈ ಕಾಲಾವಧಿಯಲ್ಲಿ ಮುಂಬಯಿಯಿಂದ 383 ಯುವತಿಯರು ನಾಪತ್ತೆಯಾಗಿದ್ದಾರೆ. ಇದನ್ನು ಮಹಾರಾಷ್ಟ್ರ ಪೊಲೀಸರು ತಮ್ಮ ವೆಬ್ ಸೈಟ್ ನಲ್ಲಿ ಪ್ರಸಾರ ಮಾಡಿದ್ದಾರೆ.
`ಮಹಿಳೆಯರು ಮತ್ತು ಯುವತಿಯರು ನಾಪತ್ತೆಯಾಗಿರುವ ಅಂಕಿ-ಅಂಶಗಳು ಕಳವಳಕಾರಿಯಾಗಿದ್ದು, ಗೃಹ ಇಲಾಖೆಯು ಇದರ ವಿಚಾರಣೆ ನಡೆಸಲು ಸಮಿತಿಯನ್ನು ರಚಿಸಬೇಕು. ಇಲಾಖೆಯು ಪತ್ತೆ ಕಾರ್ಯಾಚರಣೆ ನಡೆಸಿ ಕಾರ್ಯಾಚರಣೆಯ ವರದಿಯನ್ನು ಪ್ರತಿ 15 ದಿನಗಳಿಗೊಮ್ಮೆ ಆಯೋಗಕ್ಕೆ ಹಾಜರು ಪಡಿಸಬೇಕು’ ಎಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ರೂಪಾಲಿ ಚಾಕಣಕರ ಇವರು ಹೇಳಿದ್ದಾರೆ.
Highest no of missing women is from Mumbai#MumbaiPolice #Mumbai #MumbaiNewshttps://t.co/OtfbQP98nj
— Mid Day (@mid_day) May 17, 2023
ಸಂಪಾದಕರ ನಿಲುವು* ಮುಂಬಯಿ ಸುರಕ್ಷಿತವೆಂದು ತಿಳಿಯುವವರು, ಹಾಗೆಯೇ `ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ವಿರೋಧಿಸುವವರು ಈ ಘಟನೆಯ ವಿಷಯದಲ್ಲಿ ಏನಾದರೂ ಮಾತನಾಡುವರೇ ? * ಮುಂಬಯಿಯಂತಹ ಮಹಾನಗರದಿಂದಲೂ ಯುವತಿಯರು ನಾಪತ್ತೆಯಾಗುತ್ತಾರೆ. ಇದರ ಅರ್ಥ ಹಿಂದಿನ ಕಾರಣವನ್ನು ಗಂಭೀರವಾಗಿ ಶೋಧಿಸಿ ಕ್ರಮ ಜರುಗಿಸಬೇಕಾಗಿದೆ ! |