ಭಾರತದ ಅಧ್ಯಕ್ಷತೆಯಲ್ಲಿ ಜಿ20 ಈ 20 ದೇಶಗಳ ಸೂಮುಹದ ಅಡಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಸಿ 20 ಅಂದರೆ ‘ಸಿವಿಲ್ 20 ’ ಈ ಅಂಗಸಂಸ್ಥೆಯ ಗುಂಪು ನಿರ್ಮಿಸಲಾಗಿದೆ. ಬರುವ ಮೇ 27 ರಂದು ಗೋವಾದ ವಾಸ್ಕೋದಲ್ಲಿ ನಡೆಯಲಿರುವ ಸಿ20 ಸಮ್ಮೇಳನವನ್ನು ಗೋವಾ ಸರಕಾರ ಸೇರಿದಂತೆ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ (ಗೋವಾ)’, ‘ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್’ ಮತ್ತು ‘ಭಾರತೀಯ ವಿದ್ಯಾ ಭವನ (ನವದೆಹಲಿ) ಈ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ’.
ಈ ಸಿ20 ಸಮ್ಮೇಳನದ ಅಡಿಯಲ್ಲಿ ದೇಶಾದ್ಯಂತ ಆರೋಗ್ಯ, ಪರಿಸರ, ಶಿಕ್ಷಣ, ತಂತ್ರಜ್ಞಾನ, ಸಾಂಪ್ರದಾಯಿಕ ಕಲೆಗಳು, ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಯಂತಹ ವಿವಿಧ 14 ವಿಷಯಗಳ ಕುರಿತು ಸಮ್ಮೇಳನವನ್ನು ಆಯೋಜಿಸಲಾಗಿದೆ. ಪ್ರತಿ ವಿಷಯಕ್ಕೆ ಪ್ರತ್ಯೇಕ ಅಧ್ಯಯನ ಗುಂಪನ್ನು ಸ್ಥಾಪಿಸಲಾಗಿದೆ. ‘ವಸುಧೈವ ಕುಟುಂಬಕಂ : ದ ವರ್ಲ್ಡ್ ಇಸ್ ಒನ್ ಪ್ಯಾಮಿಲಿ’ ಈ ವಿಷಯದ ಮೇಲೆ ಗೋವಾದ ಸಿ20 ಸಮ್ಮೇಳನವು ನಡೆಯಲಿದೆ. ಪ್ರಧಾನಮಂತ್ರಿ ಮಾನ್ಯ ನರೇಂದ್ರ ಮೋದಿಯವರು ಈ ಸಿ20 ಸಮ್ಮೇಳನದಲ್ಲಿನ ನೀತಿಗಳು ಆಧ್ಯಾತ್ಮಿಕ ದೃಷ್ಟಿಕೋನಗಳನ್ನು ಅಳವಡಿಸಿಕೊಂಡು ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ‘ಮಾತಾ ಅಮೃತಾನಂದಮಯಿ ಮಠ’ದ ಸಂಸ್ಥಾಪಕರಾದ ಮಾತಾ ಅಮೃತಾನಂದಮಯಿ ಅವರನ್ನು ಸಿ20ಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಗೋವಾದಲ್ಲಿ ನಡೆಯಲಿರುವ ಸಿ20 ಸಮ್ಮೇಳನದಲ್ಲಿ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ವಿಷಯಗಳ ಕುರಿತು ದೇಶ-ವಿದೇಶಗಳಲ್ಲಿನ ಗಣ್ಯರು ಮತ್ತು ವಿದ್ವಾಂಸರು ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಗೋವಾದ ಮುಖ್ಯಮಂತ್ರಿ ಶ್ರೀ. ಪ್ರಮೋದ್ ಸಾವಂತ್, ಪ್ರವಾಸೋದ್ಯಮ ಸಚಿವ ಶ್ರೀ. ರೋಹನ್ ಖಾವಂಟೆ ಮತ್ತು ಸಾಂಸ್ಕೃತಿಕ ಮಂತ್ರಿ ಶ್ರೀ. ಗೋವಿಂದ ಗಾವಡೆ ಇವರ ಪ್ರಮುಖ ಉಪಸ್ಥಿತಿಯಿರಲಿದೆ.