ಬದ್ರಿನಾಥ್ ಮತ್ತು ಕೇದಾರನಾಥವನ್ನು ಇಸ್ಲಾಮಿಕ್ ಸ್ಥಳವೆಂದು ಹೇಳಿದ ಕಪಟ ಸಾಧು ವಿರುದ್ಧ ದೂರು ದಾಖಲು !

ಸ್ವಾಮಿ ಅದೃಶ್ಯನಂದ

ಚಮೋಲಿ (ಉತ್ತರಾಖಂಡ) – ಇಲ್ಲಿನ ಬದ್ರಿನಾಥ ಮತ್ತು ಕೇದಾರನಾಥ ಯಾತ್ರಾಸ್ಥಳಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಕಪಟ ಸಾಧುವಿನ ವಿರುದ್ಧ ಪೊಲೀಸರು ಅಪರಾಧ ದಾಖಲಿಸಿದ್ದಾರೆ. ಈ ತಥಾಕತಿತ ಸಾಧುವಿನ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸ್ವಾಮಿ ಅದೃಶ್ಯನಂದ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈ ಸಾಧುವಿನ ಹೆಸರನ್ನು ಶಾಂತನು ವಿಶ್ವಾಸ ಎಂದು ಹೇಳಲಾಗುತ್ತದೆ. ಈ ವೀಡಿಯೋದಲ್ಲಿ ತಥಾಕತಿತ ಸಾಧು ಬದ್ರಿನಾಥನನ್ನು ‘ಬದರುದ್ದೀನ್’ ಮತ್ತು ಕೇದಾರನಾಥವನ್ನು ‘ಕೇದಾರುದ್ದೀನ್’ ಎಂದು ಕರೆಯುವ ಮೂಲಕ ಅಲ್ಲಿ ನಮಾಜ ಮಾಡುವುದಾಗಿ ಹೇಳಿದ್ದಾರೆ.

ಸಂಪಾದಕರ ನಿಲುವು

ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಿ !