ಅವತಾರಿ ಯುಗಪುರುಷ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಮೇ ೧೧ ವೈಶಾಖ ಕೃಷ್ಣ ಸಪ್ತಮಿಯಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮದಿನ ! ಇದು ‘ಅವತರಣದ ದಿನವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಿಚಯದ ಎಲ್ಲ ಸಂತರು ಅವರನ್ನು ‘ಅವರು ಅವತಾರಿ ಪುರುಷರಾಗಿದ್ದಾರೆ, ಎಂದೇ ಹೇಳಿದ್ದಾರೆ. ಅದೇ ರೀತಿ ಜೀವನಾಡಿಪಟ್ಟಿಯಲ್ಲಿಯೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಭಗವಾನ ಶ್ರೀವಿಷ್ಣುವಿನ ಅವತಾರವೆಂದು ಸಪ್ತರ್ಷಿಗಳು ಹೇಳಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಯಾವತ್ತೂ ತಮ್ಮನ್ನು ‘ತಾವು ಅವತಾರಿ ಪುರುಷರು ಎಂದು ಹೇಳಿಕೊಳ್ಳಲಿಲ್ಲ. ಅವರು ಯಾವಾಗಲೂ ‘ನಾನು ಬಾಬಾರವರ (ಪ.ಪೂ. ಭಕ್ತರಾಜ ಮಹಾರಾಜರ) ಶಿಷ್ಯನಾಗಿದ್ದೇನೆ, ಎಂದೇ ಹೇಳಿದ್ದಾರೆ. ಶ್ರೀಮದ್ಭಗವದ್ಗೀತೆಯಲ್ಲಿ ಭಗವಾನ ಶ್ರೀಕೃಷ್ಣನು ಹೇಳಿದ್ದಾನೆ, ‘ಯಾವಾಗ ಯಾವಾಗ ಪೃಥ್ವಿಯ ಮೇಲೆ ಅಧರ್ಮ ಹೆಚ್ಚಾಗುತ್ತದೆಯೋ, ಆಗ ನಾನು ಅವತಾರ ತಾಳಿ ಧರ್ಮದ ಪುನರ್ಸ್ಥಾಪನೆ ಮಾಡುತ್ತೇನೆ. ಕಾಲಾನುಸಾರ ಭಗವಂತನ ಅವತಾರಿ
ಕಾರ್ಯದಲ್ಲಿ ವ್ಯತ್ಯಾಸವಿರುತ್ತದೆ, ಅದರ ಸ್ವರೂಪ ಬೇರೆ ಬೇರೆ ಇರುತ್ತದೆ. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅವತಾರಿ ಕಾರ್ಯ ಹೇಗೆ ನಡೆಯುತ್ತಿದೆ ?, ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಭಗವಾನ ಶ್ರೀವಿಷ್ಣುವಿನ ಬಹಳಷ್ಟು ಅವತಾರಗಳಲ್ಲಿ ಶಸ್ತ್ರಗಳಿದ್ದವು ಹಾಗೂ ಅವರು ದುಷ್ಟರನ್ನು ಸಂಹಾರ ಮಾಡಿ ಸಾಧಕರು, ಭಕ್ತರು, ಸಂತರು ಮುಂತಾದವರನ್ನು ರಕ್ಷಣೆ ಮಾಡಿದ್ದಾರೆ. ಹೀಗಿದ್ದರೂ ಕಾಲಾನುಸಾರ ಅವತಾರಿ ಕಾರ್ಯದಲ್ಲಿ ಭಿನ್ನತೆ ಇರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಾರ್ಯ ಸಮಾಜಕ್ಕೆ ಅಧ್ಯಾತ್ಮಶಾಸ್ತ್ರ ವನ್ನು ಹೇಳಿ ಅವರನ್ನು ಸಾಧನೆಯ ಕಡೆಗೆ ಹೊರಳಿಸುವುದು ಹಾಗೂ ಧರ್ಮವನ್ನು ಪುನರ್ಸ್ಥಾಪನೆ ಮಾಡುವುದಾಗಿದೆ. ಅದಕ್ಕಾಗಿ ಅವರು ‘ಗ್ರಂಥನಿರ್ಮಾಣವನ್ನೇ ಮುಖ್ಯ ಶಸ್ತ್ರವನ್ನಾಗಿ ಬಳಸಿದ್ದಾರೆ, ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಸಂತ ಜ್ಞಾನೇಶ್ವರರು ಸಂಸ್ಕೃತದಲ್ಲಿನ ಶ್ರೀಮದ್ಭಗವದ್ಗೀತೆಯನ್ನು ಆ ಕಾಲದಲ್ಲಿ ಸಾಮಾನ್ಯ ಜನರ ಭಾಷೆಯಾಗಿದ್ದ ಪ್ರಾಕೃತ ಭಾಷೆಯಲ್ಲಿ ಬರೆದರು. ಅದರ ಆಧಾರದಲ್ಲಿ ಕಳೆದ ೮೦೦ ವರ್ಷಗಳಲ್ಲಿ ಕೋಟಿಗಟ್ಟಲೆ ಜೀವಗಳು ಸಾಧನೆ ಮಾಡಿ ಆಧ್ಯಾತ್ಮಿಕ ಪ್ರಗತಿ ಮಾಡಿಕೊಂಡಿವೆ. ಆ ಕಾಲದ ತುಲನೆಯಲ್ಲಿ ಇಂದಿನ ಧರ್ಮದ ಸ್ಥಿತಿ ಅತ್ಯಂತ ದಯನೀಯವಾಗಿದೆ. ಆದ್ದರಿಂದ ಕಾಲಾನುಸಾರ ಸಮಾಜಕ್ಕೆ ಅಧ್ಯಾತ್ಮಶಾಸ್ತ್ರವನ್ನು ಹೇಳುವುದು ಆವಶ್ಯವಾಗಿತ್ತು. ಸದ್ಯದ ವಿಜ್ಞಾನಯುಗದಲ್ಲಿ ಸಮಾಜಕ್ಕೆ ವಿಜ್ಞಾನದ ಆಧಾರದಲ್ಲಿ ‘ವಿಜ್ಞಾನದ ಮಿತಿ ಹಾಗೂ ಅಧ್ಯಾತ್ಮಶಾಸ್ತ್ರದ ಶ್ರೇಷ್ಠತೆಯನ್ನು ತೋರಿಸಿಕೊಡುವ ಕಾರ್ಯವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡುತ್ತಿದ್ದಾರೆ. ಇಂತಹ ಕಾರ್ಯವನ್ನು ಯಾರು ಕೂಡ ಮಾಡಿರು ವುದು ಕಾಣಿಸುವುದಿಲ್ಲ. ಇಂತಹ ಮಾರ್ಗದರ್ಶನದಿಂದಲೇ ಇಂದಿನ ವಿಜ್ಞಾನವಾದಿ ಪೀಳಿಗೆ ಸಾಧನೆ ಮಾಡಲು ಆರಂಭಿಸಿದ್ದು ಅವರಲ್ಲಿ ಅನೇಕ ಜನರು ಜನನ-ಮರಣದ ಚಕ್ರದಿಂದ ಮುಕ್ತರೂ ಆಗಿದ್ದಾರೆ ಹಾಗೂ ಆಗುತ್ತಿದ್ದಾರೆ. ಕೆಲವರು ಸಂತಪದವಿಯನ್ನೂ ತಲುಪಿದ್ದಾರೆ. ಇಂತಹ ಚಮತ್ಕಾರವನ್ನು ಕೇವಲ ಅವತಾರಿ ವ್ಯಕ್ತಿಯೇ ಮಾಡಲು ಸಾಧ್ಯ. ಭೌತಿಕ ಹಾಗೂ ಲೌಕಿಕ ಚಮತ್ಕಾರ ಮಾಡುವವರು ಜಗತ್ತಿನಲ್ಲಿ ಅನೇಕರಿರಬಹುದು, ಆದರೆ ಒಂದೇ ಬಾರಿ ಅನೇಕರ ಆಧ್ಯಾತ್ಮಿಕ ಪ್ರಗತಿ ಮಾಡಿಸಿಕೊಳ್ಳುವುದು ಹಾಗೂ ಅವರನ್ನು ಕೆಲವೇ ವರ್ಷಗಳ ಸಾಧನೆಯಿಂದ ಜನನ-ಮರಣದ ಚಕ್ರದಿಂದ ಮುಕ್ತಗೊಳಿಸುವವರು ಬಹಳ ವಿರಳವಾಗಿದ್ದಾರೆ !

ದೇವತೆಗಳ ತತ್ತ್ವ ಹೆಚ್ಚು ಪ್ರಮಾಣದಲ್ಲಿರುವ ಚಿತ್ರಗಳು !

ಆಧ್ಯಾತ್ಮಿಕ ಸ್ತರದಲ್ಲಿ ಸಮಾಜದ ರಜ-ತಮದ ಪ್ರಭಾವವನ್ನು ನಷ್ಟಗೊಳಿಸಿ ಅಲ್ಲಿ ಸತ್ತ್ವಗುಣವನ್ನು ವೃದ್ಧಿಸಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ದೇವತೆಗಳ ಹೆಚ್ಚೆಚ್ಚು ತತ್ತ್ವವಿರುವ ಚಿತ್ರಗಳನ್ನು ಸಾಧಕರ ಮೂಲಕ ನಿರ್ಮಿಸಿದರು. ಕಲಿಯುಗದಲ್ಲಿ ಯಾವುದೇ ದೇವತೆಯ ಚಿತ್ರದಲ್ಲಿ ಶೇ. ೩೦ ರಷ್ಟು ತತ್ತ್ವ ಬರಲು ಸಾಧ್ಯವಿದೆ. ಸನಾತನ-ನಿರ್ಮಿತ ದೇವತೆಗಳ ಚಿತ್ರಗಳಲ್ಲಿ ಶೇ. ೩೧ ರಷ್ಟು ದೇವತೆಯ ತತ್ತ್ವ ಬಂದಿದೆ. ಇಂತಹ ಚಿತ್ರಗಳು ಹಿಂದೂಗಳ ಮನೆ-ಮನೆ ಗಳಿಗೆ ಹೋದಾಗ ಅವರಿಗೆ ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗಿ ಸಮಾಜದ ಸಾತ್ತ್ವಿಕತೆ ಹೆಚ್ಚಾಗುವುದು. ಮನೆಗಳ ಶುದ್ಧೀಕರಣವಾಗು ವುದು, ಇಂತಹ ಕಾರ್ಯವನ್ನು ಇದುವರೆಗೆ ಯಾರೂ ಮಾಡಿಲ್ಲ. ಮುಂದೆ ಇಂತಹ ದೇವತೆಗಳ ಮೂರ್ತಿಯನ್ನೂ ತಯಾರಿಸಲಾಗುವುದು.

ಆಧ್ಯಾತ್ಮಿಕ ಸಂಶೋಧನೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆಧ್ಯಾತ್ಮಿಕ ಸಂಶೋಧನೆಯ ಮೂಲಕ ಅಧ್ಯಾತ್ಮಶಾಸ್ತ್ರದ ಮಹತ್ವವನ್ನು ಹೇಳುವ ಅಭೂತಪೂರ್ವ ಪ್ರಯತ್ನವನ್ನು ಮಾಡಿ ಹಿಂದೂ ಧರ್ಮದ, ಸನಾತನ ವೈದಿಕ ಧರ್ಮದ ಮಹಾತ್ಮೆಯನ್ನು ವಿದೇಶದ ಜನರಿಗೂ ತಲುಪಿಸಿದ್ದಾರೆ ಹಾಗೂ ಅವರನ್ನು ಸಾಧನೆಯ ಮಾರ್ಗಕ್ಕೆ ತಂದಿದ್ದಾರೆ. ಈಗ ಅನೇಕ ವಿದೇಶಿ ನಾಗರಿಕರು ಸಾಧನೆ ಮಾಡುತ್ತಿದ್ದಾರೆ ಹಾಗೂ ಸಂತ, ಸದ್ಗುರು ಮಟ್ಟಕ್ಕೆ ತಲುಪಿದ್ದಾರೆ. ವಿಜ್ಞಾನದ ಯಂತ್ರದ ಮೂಲಕ ಸೂಕ್ಷ್ಮಜಗತ್ತು, ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ವಿಧ ಮತ್ತು ಅವುಗಳಿಂದಾಗುವ ಪರಿಣಾಮ ಹಾಗೂ ಕೆಟ್ಟ ಶಕ್ತಿಗಳ ಪ್ರಭಾವವನ್ನು ದೂರಗೊಳಿಸಲು ಮಾಡಬೇಕಾದ ನಾಮಜಪಾದಿ ಉಪಾಯ, ವಿವಿಧ ದೇವತೆಗಳ ನಾಮಜಪದಿಂದಾಗುವ ಪರಿಣಾಮ, ಮಾರಕ ಮತ್ತು ತಾರಕ ಜಪಗಳಿಂದಾಗುವ ಪರಿಣಾಮ, ಸ್ಥೂಲದೇಹ, ಮನೋದೇಹ, ಕಾರಣದೇಹ, ಮಹಾಕಾರಣದೇಹ ಇವುಗಳಿಂದಾಗುವ ಪರಿಣಾಮ ಇತ್ಯಾದಿಗಳ ಬಗ್ಗೆ ಸುಲಭ ಭಾಷೆಯಲ್ಲಿ ವಿವರಿಸಿ ಸಮಾಜದಲ್ಲಿನ ವ್ಯಕ್ತಿಗಳ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲಾಗುತ್ತಿದೆ. ಇಷ್ಟರ ವರೆಗೆ ಇಂತಹ ಕಾರ್ಯವನ್ನು ಯಾರು ಕೂಡ ಮಾಡಿಲ್ಲ. ಇದನ್ನು ಮಾಡುವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಯಾರಿಗೂ ವ್ಯಾವಹಾರಿಕ ಸಮಸ್ಯೆಗಳನ್ನು ನಿವಾರಿಸಲು ಮಾರ್ಗದರ್ಶನ ನೀಡಲಿಲ್ಲ. ಸಕಾಮ ಸಾಧನೆ ಮಾಡುವ ಬದಲು ನಿಷ್ಕಾಮ ಸಾಧನೆ ಮಾಡಬೇಕೆಂದೇ ಮಾರ್ಗದರ್ಶನ ಮಾಡಿದರು. ‘ನಿಷ್ಕಾಮವಾಗಿರುವ ನನ್ನ ಭಕ್ತನ ಎಲ್ಲ ಇಚ್ಛೆಗಳನ್ನು ಪೂರ್ಣಗೊಳಿಸುವೆನು, ಎಂದು ಶ್ರೀಮದ್ಭಗವದ್ಗೀತೆ ಯಲ್ಲಿ ಭಗವಾನ ಶ್ರೀಕೃಷ್ಣನು ಹೇಳಿದ್ದಾನೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾಧನೆ ಮಾಡುವ ಸಾಧಕರು ಇದರ ಅನುಭೂತಿಯನ್ನು ಪ್ರತಿದಿನ ಪಡೆಯುತ್ತಿದ್ದಾರೆ.

ರಾಮರಾಜ್ಯದ ಸ್ಥಾಪನೆ !

ಹಿಂದೂ ರಾಷ್ಟವನ್ನು ಸ್ಥಾಪನೆ ಮಾಡಲು ಹಿಂದೂಗಳನ್ನು ಜಾಗೃತಗೊಳಿಸುವುದೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಎಲ್ಲಕ್ಕಿಂತ ಮಹತ್ವದ ಕಾರ್ಯವಾಗಿದೆ ! ೧೯೯೮ ರಲ್ಲಿಯೆ ‘೨೦೨೫ ರಲ್ಲಿ ದೇಶದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿಕ್ಕಿದೆ ಎಂದು ಹೇಳಿ ಅದಕ್ಕಾಗಿ ಹಂತಹಂತವಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಿ ಅದಕ್ಕನುಸಾರ ಹಿಂದೂಗಳಲ್ಲಿ ಜಾಗೃತಿಯನ್ನು ಮೂಡಿಸಿದರು. ದೇಶದಲ್ಲಿ ಕ್ರಾಂತಿ ಅಲ್ಲ, ಉತ್ಕ್ರಾಂತಿ ಮಾಡಲಿಕ್ಕಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಅಧ್ಯಾತ್ಮದ ದೃಷ್ಟಿಯಲ್ಲಿ ಅಮೂಲ್ಯವಾದ ಬದಲಾವಣೆ ಮಾಡಲಿಕ್ಕಿದೆ. ಅದನ್ನು ಸಾಧ್ಯಗೊಳಿಸುವ ಆಧ್ಯಾತ್ಮಿಕ ಸ್ತರದಲ್ಲಿನ ಕಾರ್ಯವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡುತ್ತಿದ್ದಾರೆ. ಸದ್ಯ ಸಮಾಜ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮುಂದಿಡುತ್ತಿದೆ. ಇದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೂರದೃಷ್ಟಿಯ ಅರಿವಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಅವತಾರಿ ಕಾರ್ಯದ ಸ್ವರೂಪವನ್ನು ಸಂಕ್ಷಿಪ್ತದಲ್ಲಿ ನೋಡಲು ಪ್ರಯತ್ನಿಸಲಾಯಿತು. ಇಂತಹ ಕಾರ್ಯವು ಈ ಹಿಂದೆ ನಡೆದಿರಲಿಲ್ಲ. ಈ ಕಾರ್ಯದಿಂದ ಮುಂದಿನ ಹಲವಾರು ವರ್ಷಗಳಲ್ಲಿ ಪೃಥ್ವಿಯ ಮೇಲೆ ಧರ್ಮರಾಜ್ಯ ಅಂದರೆ ರಾಮರಾಜ್ಯ ಸ್ಥಾಪನೆಯಾಗಲಿಕ್ಕಿದೆ. ಈ ಕಾಲ ಸತ್ಯಯುಗದ ಕಾಲವಾಗಿರುವುದು. ಕೇವಲ ಅವತಾರಿ ಯುಗಪುರುಷರೇ ಯುಗ ನಿರ್ಮಾಣ ಮಾಡಲು ಸಾಧ್ಯ !