ಕೇರಳದಲ್ಲಿ 25 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥ ಜಪ್ತು!

ಕೊಚ್ಚಿ (ಕೇರಳ)- ಭಾರತೀಯ ನೌಕಾದಳ ಮತ್ತು ನಾರ್ಕೊಟಿಕ್ಸ ಕಂಟ್ರೋಲ್ ಬ್ಯುರೋ(ಎನ್.ಸಿ.ಬಿ) ಇವರು 3 ದಿನಗಳ ಹಿಂದೆ ಕೇರಳದ ಸಮುದ್ರ ದಂಡೆಯಲ್ಲಿ 2 ಸಾವಿರ 525 ಕೇಜಿ ಉತ್ತಮ ದರ್ಜೆಯ `ಮೆಥಾಮಫೆಟಾಮಾಯಿನ್’ ಎಂಬ ಹೆಸರಿನ ಅಮಲು ಪದಾರ್ಥವನ್ನು ಜಪ್ತು ಮಾಡಿದ್ದರು. ಆರಂಭದಲ್ಲಿ ಇದರ ಮೌಲ್ಯವು 12 ರಿಂದ 15 ಸಾವಿರ ಕೋಟಿ ರೂಪಾಯಿಗಳಷ್ಟು ಇದೆಯೆಂದು ಹೇಳಲಾಗಿತ್ತು; ಆದರೆ ಇದರ ಮೌಲ್ಯ 25 ಸಾವಿರ ಕೋಟಿ ರೂಪಾಯಿ ಇದೆ ಎಂಬ ಮಾಹಿತಿಯನ್ನು ನೌಕಾದಳ ಮತ್ತು ಎನ್.ಸಿ.ಬಿ.ಯವರು ನೀಡಿದ್ದಾರೆ. ಎನ್.ಸಿ.ಬಿ. ಸಹಾಯಕ ಮಹಾನಿರ್ದೇಶಕರಾದ ಸಂಜಯಕುಮಾರ ಸಿಂಹರು ಮಾತನಾಡುತ್ತ `ಮೌಲ್ಯದ ದೃಷ್ಟಿಯಿಂದ ಇದು ಭಾರತದ ಎಲ್ಲಕ್ಕಿಂತಲೂ ದೊಡ್ಡ ಅಮಲು ಪದಾರ್ಥಗಳ ಜಪ್ತು’ಎಂದು ಹೇಳಿದ್ದಾರೆ.

ಎನ್.ಸಿ.ಬಿ. ಹೇಳಿಕೆಯಂತೆ ಈ ಅಮಲು ಪದಾರ್ಥ ಪಾಕಿಸ್ತಾನದ್ದಾಗಿದೆ. ಅದನ್ನು ಇರಾನ ಚಾಬಹಾರ ಬಂದರಿನಿಂದ ಹಡಗಿನ ಮೂಲಕ ತರಲಾಗುತ್ತಿತ್ತು. ಭಾರತವನ್ನು ಹೊರತುಪಡಿಸಿ ಶ್ರೀಲಂಕಾ ಮತ್ತು ಮಾಲ್ಡೀವ್ ಈ ದೇಶಗಳಲ್ಲಿಯೂ ಅವುಗಳ ಪೂರೈಕೆಯಾಗಲಿತ್ತು. ಈ ಹಡಗು ಸಮುದ್ರದಲ್ಲಿ ಕೆಲವು ಸ್ಥಳಗಳಲ್ಲಿ ನಿಲ್ಲುವುದರಲ್ಲಿತ್ತು. ಅಲ್ಲಿ ವಿವಿಧ ದೇಶಗಳಿಂದ ಸಣ್ಣ-ದೊಡ್ಡ ಹಡಗುಗಳು ಬಂದು ಅಮಲು ಪದಾರ್ಥಗಳನ್ನು ತೆಗೆದುಕೊಂಡು ಹೋಗಲಿದ್ದವು. ಇದಕ್ಕೂ ಮೊದಲೇ ಈ ಹಡಗನ್ನು ಕೇರಳದ ಕೊಚ್ಚಿ ಸಮುದ್ರ ದಂಡೆಯ ಬಳಿ ತಡೆಯಲಾಯಿತು. ಈ ಅಮಲು ಪದಾರ್ಥದೊಂಡಿಗೆ ಓರ್ವ ಪಾಕಿಸ್ತಾನಿ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದೆ.

ಸಂಪಾದಕರ ನಿಲುವು

ಜಪ್ತು ಮಾಡಲಾಗಿರುವ ಅಮಲು ಪದಾರ್ಥದ ಮೌಲ್ಯವೇ ಇಷ್ಟಿದ್ದರೆ, ಇಲ್ಲಿಯವರೆಗೆ ಜಪ್ತು ಮಾಡದಿರುವ ಅಮಲು ಪದಾರ್ಥದ ಮೌಲ್ಯ ಎಷ್ಟಿರಬಹುದು ಎಂಬುದರ ಕಲ್ಪನೆಯೂ ಅಸಾಧ್ಯ.