೧. ಮತಾಂಧರ ವಿ?ಯದಲ್ಲಿ ನ್ಯಾಯಾಧೀಶರ ಕಳವಳ ?
‘ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದ್ವೇಷಪೂರಿತ ಹೇಳಿಕೆಗಳನ್ನು ನೀಡಿ ಅಪಮಾನಿಸಿದ ಬಗ್ಗೆ ಮೊಕದ್ದಮೆಗಳು ನಡೆದಿವೆ. ೨೦೧೮ ರಲ್ಲಿ ಇದೇ ರೀತಿಯ ಕೆಲವು ಮೊಕದ್ದಮೆಗಳು ನಡೆದಿದ್ದವು. ಅವುಗಳಲ್ಲಿ ಆಗಿನ ಮುಖ್ಯನ್ಯಾಯಮೂರ್ತಿ ದೀಪಕ ಮಿಶ್ರಾ ಇವರ ನ್ಯಾಯಪೀಠವು ತೀರ್ಪನ್ನು ನೀಡಿದೆ. ಆ ಸಮಯದಲ್ಲಿ ಅವರು ದಂಗೆಗಳಾಗಬಹುದು ಮತ್ತು ಮತಾಂಧರ ಭಾವನೆಗಳಿಗೆ ಧಕ್ಕೆಯಾಗಬಹುದು. ಪೊಲೀಸರು ಮತ್ತು ಸರಕಾರ ಸೂಕ್ತ ಕ್ರಮ ಕೈಕೊಂಡು ಇದನ್ನು ನಿಯಂತ್ರಿಸಬೇಕು, ಎಂದು ಹೇಳಿದ್ದರು.
ಈ ಪ್ರಕರಣಗಳಲ್ಲಿ ಅರ್ಜಿದಾರನು ಮತಾಂಧನಾಗಿದ್ದನು. ಆದುದರಿಂದ ನ್ಯಾಯಾಲಯಕ್ಕೆ ಅವನ ಸಂವಿಧಾನಾತ್ಮಕ ಅಧಿಕಾರಗಳು ಇತ್ಯಾದಿಗಳ ರಕ್ಷಣೆಯನ್ನು ಮಾಡಲೇಬೇಕಲ್ಲವೇ ? ತದನಂತರ ಕೆಲವು ಅಪಮಾನದ ಅರ್ಜಿಗಳನ್ನು ಗಾಂಧಿವಾದಿಗಳು ಮಾಡಿದರು. ಈ ಅರ್ಜಿಗಳು ಯಾರ ಹಿತರಕ್ಷಣೆಗಾಗಿ ಇದ್ದವು ಎನ್ನುವುದು ಅರ್ಜಿದಾರರ ಹೆಸರುಗಳಿಂದಲೇ ತಿಳಿಯುತ್ತದೆ. ಸದ್ಯದ ನ್ಯಾಯಮೂರ್ತಿಗಳ ಪೀಠವು ಪೊಲೀಸರಿಗೆ ಕಠಿಣ ಕ್ರಮ ಕೈಕೊಳ್ಳುವಂತೆ ಆದೇಶಿಸಿತು ಮತ್ತು ವಿಚಾರಣೆಯ ಬೇಸರಬರುವ ಮಾತುಗಳನ್ನು ಹಾಗೆಯೇ ಮುಂದುವರಿಸಿತು. ನಡುವೆ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳಾದ ನರಿಮನ್ ಇವರು “ಅರೇ ಮುಸಲ್ಮಾನರು ಕೂಡ ಭಾರತದ ನಾಗರಿಕರೇ ಆಗಿದ್ದಾರೆ ಎಂಬುದು ಗಮನದಲ್ಲಿರಲಿ ಎಂದು ಪೊಲೀಸರಿಗೆ ಹೇಳಿದ್ದರು.
೨. ಎಲ್ಲ ಹಿಂದೂ ಪ್ರತಿಭಟನೆಗಳ ವಿರುದ್ಧದಲ್ಲಿನ ಅರ್ಜಿಗಳಿಗೆ ಅಡ್ವೊಕೇಟ ಜನರಲ್ ತು?ರ ಮೆಹತಾ ಇವರ ಪ್ರತಿವಾದ
ಇತ್ತೀಚೆಗೆ ಕೇರಳದಲ್ಲಿನ ಮತಾಂಧ ಶಾಹೀನ ಅಬ್ದುಲ್ಲಾ ಇವಳು ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ಸಲ್ಲಿಸಿದ್ದಾಳೆ. ಅದರಲ್ಲಿ ಅವಳು ‘ಮಹಾರಾಷ್ಟ್ರದಲ್ಲಿ ಹಿಂದೂಗಳು ನಡೆಸಿದ ಎಲ್ಲ ೫೦ ಪ್ರತಿಭಟನೆಗಳ ಮೆರವಣಿಗೆಗಳಲ್ಲಿ ದ್ವೇಷಪೂರಿತ ಭಾಷಣಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾಳೆ. ಇದರಿಂದ ನ್ಯಾಯಾಲಯಕ್ಕೆ ಬಹಳ ದುಃಖವಾಗಿ ನ್ಯಾಯಾಲಯ ಕೂಡಲೇ ಕೇಂದ್ರ ಸರಕಾರವನ್ನು ಕರೆಸಿಕೊಂಡು ಈ ಭಾಷಣಗಳ ಬಗ್ಗೆ ವಿಚಾರಿಸಿತು. ಆಗ ಕೇಂದ್ರ ಸರಕಾರದ ವತಿಯಿಂದ ಅಡ್ವೊಕೇಟ ಜನರಲ್ ತುಷಾರ ಮೆಹತಾ ಇವರು ಯಾಚಿಕೆದಾರಳ ಉದ್ದೇಶ ಶುದ್ಧವಾಗಿಲ್ಲ ಎಂದು ಹೇಳಿದರು. ಅಡ್ವೊಕೇಟ ಜನರಲ್ ತುಷಾರ ಇವರು ತಮ್ಮ ಹೇಳಿಕೆಯಲ್ಲಿ ‘ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕೇವಲ ಹಿಂದೂ ಮತ್ತು ಬ್ರಾಹ್ಮಣರನ್ನು ಗುರಿ ಮಾಡಲಾಗುತ್ತದೆ. ಕೇವಲ ಹಿಂದೂಗಳನ್ನು ದೂಷಿಸುವುದೇ ಅರ್ಜಿದಾರಳ ಉದ್ದೇಶವಾಗಿದೆ ಹಾಗೆಯೇ ಮತಾಂಧ ಮುಸಲ್ಮಾನರು ಹಿಂದೂಗಳ ವಿರುದ್ಧ ಯಾವ ರೀತಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡು ತ್ತಾರೆ ಎನ್ನುವುದು ಕೇರಳದ ಮಾನನೀಯ ನ್ಯಾಯಮೂರ್ತಿ ಜೋಸೆಫ್ ಇವರಿಗೆ ಗೊತ್ತಿದೆ. ಈ ವಿಷಯವನ್ನು ನ್ಯಾಯಾಲಯ ಸ್ವಯಂಸ್ಫೂರ್ತಿಯಿಂದ ದಾಖಲಿಸಿಕೊಳ್ಳಬೇಕು. ಕಾನೂನನ್ನು ಮಾಡುವುದಿದ್ದರೆ, ಎಲ್ಲರಿಗಾಗಿ ಒಂದೇ ರೀತಿಯ ಕಾನೂನು ಮಾಡಬೇಕು ಮತ್ತು ಎಲ್ಲರ ವಿರುದ್ಧ ಒಂದೇ ರೀತಿಯ ಕ್ರಮ ಕೈಕೊಳ್ಳಬೇಕು. ಈ ಅರ್ಜಿಯಲ್ಲಿ ಅರ್ಜಿದಾರಳು ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿನ ಪ್ರಕರಣಗಳನ್ನೂ ಜೋಡಿಸಬೇಕು. ಆ ಸರಕಾರಗಳಿಗೆ ನೊಟೀಸು ಕಳುಹಿಸಿ ಅವರ ಹೇಳಿಕೆಗಳನ್ನು ಕೂಡ ಕೇಳಬೇಕು. ಕೇವಲ ಒಂದೇ ಆಯ್ದ ರಾಜ್ಯದಿಂದ ಪ್ರತಿಕ್ರಿಯೆಯನ್ನು ಏಕೆ ಕೇಳುತ್ತಿದ್ದೀರಿ ? ಎಂದು ಪಾಟೀ ಸವಾಲು ಮಾಡಿದರು. ಈ ಸಮಯದಲ್ಲಿ ಅಡ್ವೊಕೇಟ ಜನರಲ್ ಮೆಹತಾ ಇವರು ನ್ಯಾಯಾಲಯಕ್ಕೆ ಕೇರಳ ಮತ್ತು ತಮಿಳುನಾಡಿನಲ್ಲಿ ಮಾಡಲಾಗಿದ್ದ ಪ್ರಚೋದಾತ್ಮಕ ಭಾಷಣಗಳ ಕೆಲವು ಧ್ವನಿಸುರಳಿಗಳನ್ನು ಆಲಿಸಲು ನ್ಯಾಯಾಲಯಕ್ಕೆ ನೀಡಿದರು ಮತ್ತು ಈ ಸಂದರ್ಭದಲ್ಲಿ ‘ಸ್ವತಃ ದೂರನ್ನು ದಾಖಲಿಸಿಕೊಳ್ಳಬೇಕು ಎಂದು ವಿನಂತಿಸಿದರು.
ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವು “ಇದು ಕಾನೂನಿನ ಕೆಲಸವಾಗಿದೆ. ಇಲ್ಲಿ ನಾಟಕಗಳು ಬೇಡ. ಆ ಲೇಖನವನ್ನು ನೀವು ಇಟ್ಟುಕೊಳ್ಳಬಹುದು. ಅರ್ಜಿದಾರರಿಗೆ ಏಕೆ ? ಎಂದಿತು. ಅರ್ಥಾತ್ ನ್ಯಾಯಾಲಯವು ಈ ಎರಡು ರಾಜ್ಯಗಳಲ್ಲಿ ಹಿಂದೂ ಮತ್ತು ಬ್ರಾಹ್ಮಣರ ವಿರುದ್ಧ ನಡೆಯುತ್ತಿರುವ ಪ್ರಚೋದನಾತ್ಮಕ ಭಾಷಣಗಳ ವಿರುದ್ಧ ಯಾವುದೇ ಕ್ರಮ ಕೈಕೊಳ್ಳಲಿಲ್ಲ, ಅಲ್ಲದೇ ಅರ್ಜಿದಾರಳಿಗೂ ಅವಳ ಅರ್ಜಿಯಲ್ಲಿ ಈ ಅಂಶಗಳನ್ನು ಸೇರಿಸುವಂತೆ ಹೇಳಲಿಲ್ಲ. ಈ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು “ರಾಜ್ಯ ಸರಕಾರಗಳು ನಪುಂಸಕ ಮತ್ತು ದುರ್ಬಲವಾಗಿವೆ. ಅವರು ಮಹಾರಾಷ್ಟ್ರದಲ್ಲಿ ಇಂತಹ ಹೇಳಿಕೆಗಳ ಮೇಲೆ ಯಾವುದೇ ಕ್ರಮ ಕೈಕೊಳ್ಳಲಿಲ್ಲ. ಹೀಗಿರುವಾಗ ರಾಜ್ಯಗಳ ಆವಶ್ಯಕತೆಯೇನಿದೆ ? ಎಂದಿತು.
೩. ನ್ಯಾಯಾಲಯವು ಹಿಂದೂಗಳ ಮೇಲಿನ ಅನ್ಯಾಯಗಳ ಕಡೆಗೆ ಯಾವಾಗ ಗಮನ ಹರಿಸುವುದು ?
ಮಹಾರಾಷ್ಟ್ರದಲ್ಲಿನ ಛತ್ರಪತಿ ಸಂಭಾಜಿನಗರ, ಬಿಹಾರ, ಬಂಗಾಲ ಹೀಗೆ ವಿವಿಧ ಸ್ಥಳಗಳಲ್ಲಿ ಗಲಭೆಗಳು ನಡೆದವು. ಈ ವಿಷಯದಲ್ಲಿ ನ್ಯಾಯಾಲಯಕ್ಕೆ ಮತಾಂಧರ ವಿಷಯದಲ್ಲಿ ಬಹಳಷ್ಟು ದಯೆ ಇರುವುದು ಕಂಡು ಬಂದಿತು. ದೇಶಾದ್ಯಂತ ಮತಾಂಧರು ವಿವಿಧ ವಿಷಯಗಳ ಕುರಿತು ಪ್ರತಿಭಟನೆ ನಡೆಸಿ ಸರಕಾರವನ್ನು ಅಡಚಣೆಯಲ್ಲಿ ತರುತ್ತಾರೆ. ಆಗ ನ್ಯಾಯಾಲಯಗಳು ದುರ್ಬಲವಾಗುತ್ತವೆ. ಹಿಂದೂಗಳ ಎಲ್ಲ ಹಬ್ಬಗಳ ಸಮಯದಲ್ಲಿ ಮತಾಂಧರು ಉದ್ದೇಶಪೂರ್ವಕವಾಗಿ ದಂಗೆಗಳನ್ನು ಮಾಡುತ್ತಾರೆ. ಅವುಗಳಲ್ಲಿ ಬಾಂಬ್‌ಸ್ಫೋಟಗಳನ್ನು ಕೂಡ ಮಾಡುತ್ತಾರೆ. ಇದು ನ್ಯಾಯಾಲಯಕ್ಕೆ ಕಾಣಿಸುವುದಿಲ್ಲವೇ ? ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಬಂಧಿಸಲಾದ ಮತಾಂಧ ಗಲಭೆಕೋರರು ತಮ್ಮ ಸಾಕ್ಷಿಯಲ್ಲಿ ‘ದೇವಸ್ಥಾನದ ಹತ್ತಿರ ಹಿಂದೂ ಯುವಕರು ‘ಜಯ ಶ್ರೀರಾಮ ಎಂದು ಘೋಷಣೆ ಕೂಗುತ್ತಿದ್ದರು. ಆಗ ಅವರು ‘ಹಿಂದೂಗಳು ನಮ್ಮ ಹುಡುಗರಿಗೆ ಹೊಡೆದರು, ಅವರ ಮೇಲೆ ಸೇಡು ತೀರಿಸಿಕೊಳ್ಳಿರಿ ಎಂಬ ಸುಳ್ಳು ಸಂದೇಶವನ್ನು ಕಳುಹಿಸಿದರು ತದನಂತರ ದಂಗೆಗಳು ನಡೆದವು ಎಂದು ಹೇಳಿದರು.
‘ಹಿಂದೂಗಳು ಪ್ರಚೋದನಾತ್ಮಕ ಭಾಷಣಗಳನ್ನು ಮಾಡುವಂತಿಲ್ಲ; ಆದರೆ ಮತಾಂಧರು ಸುಳ್ಳು ಸಂದೇಶಗಳನ್ನು ಕಳುಹಿಸಿ ಗಲಭೆಗಳನ್ನು ಮಾಡಬಹುದು, ಪೊಲೀಸರ ವಾಹನಗಳನ್ನು ಸುಡಬಹುದು ಮತ್ತು ಪೊಲೀಸರ ಮೇಲೆ ಮಾರಣಾಂತಿಕ ಆಕ್ರಮಣಗಳನ್ನು ಮಾಡಬಹುದು ಈ ವಿಷಯಗಳನ್ನು ಮತಾಂಧ ಅರ್ಜಿದಾರಳು ತನ್ನ ಮನವಿ ಪತ್ರದಲ್ಲಿ ಹಾಕಬಹುದೇ ? ಎಂಬುದೇ ಪ್ರಶ್ನೆಯಾಗಿದೆ
೪. ಪ್ರಜಾಪ್ರಭುತ್ವದ ನಾಲ್ಕೂ ಸ್ತಂಭಗಳು ಮತಾಂಧರಿಗೆ ವಿಶೇ? ನಿಲುವನ್ನು ತೋರುತ್ತಿರುವುದರ ಬಗ್ಗೆ ಹಿಂದೂಗಳಿಗೆ ತಿಳಿದಿದೆ
ನ್ಯಾಯಮೂರ್ತಿ ಜೋಸೆಫ ಇವರ ವರ್ತನೆಯಿಂದ (ನೀಡಿದ ಹೇಳಿಕೆಗಳಿಂದ) ದೇಶಾದ್ಯಂತ ಅವರ ವಿರುದ್ಧ ಆಕ್ರೋಶ ಅಲೆಗಳೆದ್ದವು. ಜನರು ಅವರಿಗೆ ಬಹಿರಂಗವಾಗಿ ಪತ್ರಗಳನ್ನು ಬರೆದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಇಷ್ಟೇ ಅಲ್ಲ, ಅವರನ್ನು ವಜಾಗೊಳಿಸುವಂತೆಯೂ ಕೋರಿದ್ದರು; ಆದರೆ ಸ್ವಲ್ಪ ದಿನಗಳಲ್ಲಿಯೇ ಅವರ ನಿವೃತ್ತಿ ಆಗಲಿದೆ. ಈಗ ಒಂದು ವಿಷಯ ನಿಶ್ಚಿತವಾಗಿದೆ. ಪ್ರಜಾಪ್ರಭುತ್ವದ ನಾಲ್ಕೂ ಸ್ತಂಭಗಳು ಮತಾಂಧರಿಗಾಗಿ ವಿಶೇಷ ನಿಲುವನ್ನು ತೋರುತ್ತವೆ ಮತ್ತು ಇದು ಹಿಂದೂಗಳ ಗಮನಕ್ಕೆ ಬರುತ್ತಿದೆ. ಹಿಂದೂಗಳಿಗೆ ಈಗ ಯಾರ ಆಧಾರ ಉಳಿದಿಲ್ಲ. ಆದುದರಿಂದ ಈಗ ಹಿಂದೂಗಳು ಇತರ ಹಿಂದೂವಿಗೆ ತೊಂದರೆಯಾದರೆ, ನನಗೇನು ಅದರದ್ದು ?, ಅಥವಾ ನಾನೊಬ್ಬನೇ ಏನು ಮಾಡಲಿ ? ಎನ್ನುವಂತಹ ಹೇಳಿಕೆಗಳನ್ನು ಬಿಟ್ಟು ಹಿಂದೂಗಳ ಮೇಲೆ ನಡೆಯುವ ಪ್ರತಿ ಯೊಂದು ಅನ್ಯಾಯದ ವಿರುದ್ಧ ನ್ಯಾಯೋಚಿತ ಮಾರ್ಗದಿಂದ ಧ್ವನಿಯೆತ್ತುವುದು ಆವಶ್ಯಕವಾಗಿದೆ.
|| ಶ್ರೀಕೃಷ್ಣಾರ್ಪಣಮಸ್ತು ||
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೫.೪.೨೦೨೩)