ಸನಾತನದ ‘ಮನೆಮನೆಗಳಲ್ಲಿ ಕೈದೋಟ ಅಭಿಯಾನ

ಕೃಷಿ ಕೆಲಸದಲ್ಲಿ ಮನೆಯವರೆಲ್ಲರೂ ಪಾಲ್ಗೊಳ್ಳಬೇಕು !

‘ಮನೆಯಲ್ಲೇ ಹಣ್ಣು, ಕಾಯಿಪಲ್ಲೆಗಳ ಕೃಷಿ ಮಾಡುವಾಗ ಅದರಲ್ಲಿ ಮನೆಯ ಕಿರಿಯರು-ಹಿರಿಯರು ಎಲ್ಲ ಸದಸ್ಯರೂ ಭಾಗವಹಿಸಬೇಕು. ಹೀಗೆ ಮಾಡುವುದರಿಂದ ‘ಒಂದು ಪಲ್ಯವು ತಟ್ಟೆಯಲ್ಲಿ ಬರುವ ಮೊದಲು ಅದನ್ನು ಹೇಗೆ ನೆಡುತ್ತಾರೆ ? ಅದು ಎಷ್ಟು ದಿನಗಳಲ್ಲಿ ಸಿದ್ಧವಾಗುತ್ತದೆ ?, ಹೀಗೆ ಅನೇಕ ಸಣ್ಣ ಸಣ್ಣ ಮಾಹಿತಿಗಳು ಎಲ್ಲರ ಗಮನಕ್ಕೆ ಬರುತ್ತವೆ. ಎಲ್ಲರೂ ಕಷ್ಟಪಟ್ಟು ಬೆಳೆಸಿದ ಕಾಯಿಪಲ್ಲೆಯನ್ನು ತಿನ್ನುವಾಗ ಬೇರೆಯೇ ಆದ ಸಮಾಧಾನ ಸಿಗುತ್ತದೆ ಹಾಗೂ ‘ಪ್ರತಿದಿನ ತಟ್ಟೆಯಲ್ಲಿ ಬಡಿಸಿದ ಪದಾರ್ಥಗಳ ಪೋಷಕಾಂಶ ಮತ್ತು ಅದರ ಔಷಧೀಯ ಗುಣಧರ್ಮ, ಇವುಗಳ ಅರಿವು ಹೆಚ್ಚುತ್ತದೆ. ಅದರಿಂದ ಭೂಮಾತೆ ಮತ್ತು ನಿಸರ್ಗದೇವತೆಯ ಬಗ್ಗೆ ಕೃತಜ್ಞತಾಭಾವವು ತಾನಾಗಿಯೇ ಮೂಡುತ್ತದೆ.

ಸೌ. ರಾಘವಿ ಕೊನೆಕರ

ಸಸಿಗಳ ಮೇಲೆ ಸ್ವಲ್ಪ ಹುಳ ಹಿಡಿದರೆ ಕೇವಲ ನೀರನ್ನು ಸಿಂಪಡಿಸಿ ತೊಳೆದು ಹೋಗಲಾಡಿಸಬೇಕು !

‘ಸಸಿಗಳ ಮೇಲೆ ಮಾವಾ, ಬೆಳ್ಳನೆಯ ನೊಣ ಇಂತಹ ಹುಳಗಳ ಸಂಸರ್ಗವು ಕಡಿಮೆ ಇದ್ದಾಗಲೇ ನೀರನ್ನು ಸಿಂಪಡಿಸಿ ಸಸಿಯ ಆ ಭಾಗವನ್ನು ತೊಳೆದು ಹಾಕಬೇಕು. ಇದಕ್ಕಾಗಿ ಹನಿ ಸಿಂಚನೆಯ (ಸ್ಪ್ರೇ) ಬಾಟಲಿಯನ್ನು ಬಳಸಬೇಕು. ಮೇಲ್ಪದರಿನಲ್ಲಿನ ಘಟಕವು ಬಹಳ ಜಿಗುಟಾಗಿದ್ದರೆ, ಹಲ್ಲು ತಿಕ್ಕುವ ಹಳೆಯ ಬ್ರಶ್‌ನಿಂದ (ಟೂಥ್‌ಬ್ರಶ್‌ನಿಂದ) ಅದನ್ನು ತಿಕ್ಕಿ ತೆಗೆದು ಹಾಕಬೇಕು. ಕೆಲವೊಮ್ಮೆ ಈ ಸುಲಭ ಉಪಾಯದಿಂದಲೂ ಹುಳಗಳನ್ನು ನಿಯಂತ್ರಣಕ್ಕೆ ತರಬಹುದು ಮತ್ತು ಬೇರೇನು ಸಿಂಪಡಿಸುವು ಅವಶ್ಯಕತೆಯು ಬೀಳುವುದಿಲ್ಲ.

ಬಳ್ಳಿಜಾತಿಯ ತರಕಾರಿಗಳ ಉತ್ತಮ ಬೆಳೆಯಾಗಲು ಬಳ್ಳಿಗಾಗಿ ಚಪ್ಪರ ಕಟ್ಟಬೇಕು !

‘ಹಾಲಕುಂಬಳಕಾಯಿ, ಹಾಗಲಕಾಯಿ, ಪಡವಲಕಾಯಿ ಮೊದಲಾದ ಬಳ್ಳಿ ಜಾತಿಯ ತರಕಾರಿಗಳನ್ನು ನೆಟ್ಟ ಬಳಿಕ ಅವುಗಳ ಉತ್ತಮ ಬೆಳೆಯಾಗಲು ಬಳ್ಳಿಯು ಎತ್ತರದ ವರೆಗೆ ಏರುವುದು ಆವಶ್ಯಕವಾಗಿರುತ್ತದೆ. ಚಪ್ಪರವನ್ನು ಕಟ್ಟಿದರೆ ಬಳ್ಳಿಯು ಸರಿಯಾಗಿ ಹರಡಿ ಅದಕ್ಕೆ ಅನೇಕ ಟೊಂಗೆಗಳು ಬರುತ್ತವೆ ಅದರ ಪರಿಣಾಮವಾಗಿ ಹೆಚ್ಚು ಉತ್ಪನ್ನಸಿಗುತ್ತದೆ.  ಆದ್ದರಿಂದ ಬಳ್ಳಿಯನ್ನು ಏರಿಸಲು ಚಪ್ಪರವನ್ನು ಕಟ್ಟಬೇಕು.

– ಸೌ. ರಾಘವೀ ಮಯೂರೇಶ ಕೊನೆಕರ, ಢವಳೀ, ಫೊಂಡಾ, ಗೋವಾ. (೩೦.೧.೨೦೨೩)

ನಿಮಗೆ ಈ ಲೇಖನಮಾಲೆ ಹೇಗೆನಿಸಿತು, ಅದನ್ನು ನಮಗೆ ತಿಳಿಸಿರಿ ! : [email protected]