ಸೊಪ್ಪುತರಕಾರಿಗಳು : ತಿಳುವಳಿಕೆ ಮತ್ತು ತಪ್ಪುತಿಳುವಳಿಕೆ !

ಪಾಲಕ್ ಸೊಪ್ಪು

‘ನಮಗೆ ಸೊಪ್ಪುತರಕಾರಿಗಳ ಬಗ್ಗೆ ಉದ್ದೇಶಪೂರ್ವಕವಾಗಿ ಬಹಳಷ್ಟು ಪ್ರಮಾಣದಲ್ಲಿ ಅಥವಾ ಪ್ರತಿದಿನ ತಿನ್ನುವ ಆವಶ್ಯಕತೆ ಇರುವುದಿಲ್ಲ. ಯಾವಾಗ ತಿನ್ನುವುದಿರುತ್ತದೆಯೋ, ಆಗಲೂ ಮೊದಲು ಹಬೆಕೊಟ್ಟು (ಬೇಯಿಸಿ) ಅದನ್ನು ಹಿಂಡಿ ನೀರು ತೆಗೆದು, ಎಣ್ಣೆ ಅಥವಾ ತುಪ್ಪದ ಒಗ್ಗರಣೆಯನ್ನು ಕೊಟ್ಟೇ ತಿನ್ನಬೇಕು, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೆ ನೋಡಿದರೆ ಸೊಪ್ಪಿನ ಆಯುಷ್ಯ ಬಹಳ ಕಡಿಮೆ ಇರುತ್ತದೆ. ಅವು ಶರೀರದಲ್ಲಿ ಹೋಗಿ ತಮ್ಮಂತೆಯೇ ಅಲ್ಪಜೀವಿ ಘಟಕಗಳನ್ನು ತಯಾರಿಸುತ್ತವೆ. ಆದುದರಿಂದ ಸೊಪ್ಪುತರಕಾರಿಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದು ಅನಾರೋಗ್ಯಕರವಾಗಿದೆ.

ವೈದ್ಯೆ ಸುಚಿತ್ರಾ ಕುಲಕರ್ಣಿ

೧. ಸೊಪ್ಪುಗಳನ್ನು ಸೇವಿಸಿದರೆ ಜೀವಸತ್ವಗಳು ಸಿಗುತ್ತವೆ, ಎಂಬ ಅಂಧಶ್ರದ್ಧೆ !

ಸೌ. ಕುಲಕರ್ಣಿ ಮತ್ತು ಅವರ ಮಗಳು ಒಂದು ಸಲ ತರಕಾರಿ ಮಾರುಕಟ್ಟೆಯಲ್ಲಿ ಭೇಟಿಯಾದರು. ಎಂಟನೇಯ ತಿಂಗಳು ತುಂಬಿ ಒಂಭತ್ತನೇಯ ತಿಂಗಳು ಆರಂಭವಾದುದರಿಂದ ಮಗಳ ನಡಿಗೆ ಮಂದವಾಗಿತ್ತು. ಮೊದಲೇ ಕೆಂಪು ಬಣ್ಣ ಮತ್ತು ಅದರ ಮೇಲೆ ಈಗ ತೇಜ ಬಂದು ಇನ್ನೂ ಚೆನ್ನಾಗಿ ಕಾಣಿಸುತ್ತಿದ್ದಳು. ಮುಖ ಪ್ರಸನ್ನ ಮತ್ತು ನಸುನಗೆಯಿಂದ ಕೂಡಿತ್ತು. ಸೌ. ಕುಲಕರ್ಣಿಯವರು ನನಗೆ ಅಭಿಮಾನದಿಂದ, “ಪ್ರತಿದಿನ ಸಾಯಂಕಾಲ ಒಂದು ಸುತ್ತು ತಿರುಗಾಡಿ ಬರ ಬೇಕು ಎಂದು ನಾನು ಅವಳಿಗೆ ಹೇಳಿದ್ದೇನೆ. ಸಾಯಂಕಾಲದ ಭೋಜನದಲ್ಲಿ ಒಳ್ಳೆಯ ಸೊಪ್ಪುತರಕಾರಿ ಮತ್ತು ಕೊಸಂಬರಿಯನ್ನು ಅವಳಿಗೆ ಪ್ರತಿನಿತ್ಯ ಕೊಡುತ್ತೇನೆ. ‘ವಿಟಾಮಿನ್ಸ್ (ಜೀವಸತ್ವಗಳು) ಮತ್ತು ‘ಆಯರ್ನ್ (ಲೋಹ) ಇವುಗಳ ಯಾವುದೇ ಆವಶ್ಯಕತೆ ಬೀಳುವುದಿಲ್ಲ. ಆಧುನಿಕ ವೈದ್ಯರೂ (ಡಾಕ್ಟರ್) “ನೀವು ನಿಮ್ಮ ಮಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿರುವಿರಿ ! ಎಂದು ಹೇಳಿದ್ದಾರೆ ಎಂದರು.

ತಾತ್ಪರ್ಯ : ಗರ್ಭಿಣಿಗೆ ಪ್ರತಿದಿನ ಸೊಪ್ಪುತರಕಾರಿಗಳನ್ನು ತಿನ್ನಲು ಕೊಟ್ಟು ಕುಲಕರ್ಣಿ ಕಾಕೂ ಆನಂದದಲ್ಲಿದ್ದರು.

ಎರಡನೇಯ ಪ್ರತಿನಿಧಿಕ ಪ್ರಸಂಗ ! ಪರಾಗ ಮತ್ತು ಪ್ರಣಿತಾ ಇವರು ತಮ್ಮ ೫ ವರ್ಷದ ಮಗಳನ್ನು ಕರೆದುಕೊಂಡು ಬಂದರು. ಮೊದಲು ಕಾಯಿಲೆಯ ಚರ್ಚೆಯಾಯಿತು. ಅನಂತರ ನಾನು ಪಥ್ಯವನ್ನು ಹೇಳತೊಡಗಿದೆ. ಮಧ್ಯದಲ್ಲಿಯೇ ಪ್ರಣಿತಾ, “ಇವಳು ಸೊಪ್ಪುಗಳನ್ನು ಸ್ವಲ್ಪ ಸಹ ತಿನ್ನುವುದಿಲ್ಲ, ಇವಳಿಗೆ ನೀವು ಸ್ವಲ್ಪ ಹೇಳಿರಿ, ಅಂದರೆ ಅವಳು ಕೇಳಬಹುದು ಎಂದರು. ಸೊಪ್ಪುಗಳಲ್ಲಿ ಶಕ್ತಿ ಇರುತ್ತದೆಯಲ್ಲ ? ಎಂದಳು. ಸೊಪ್ಪುತರಕಾರಿಗಳ ಬಗ್ಗೆ ಆಯುರ್ವೇದದಲ್ಲಿ ಏನೆಲ್ಲ ಹೇಳಲಾಗಿದೆಯೋ, ಅದನ್ನು ನಾನು ಅವಳಿಗೆ ಹೇಳಿದೆ. ಅದನ್ನು ಕೇಳಿ ಅವಳಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ !

೨. ಜೀರ್ಣವಾಗಲು, ಜಡ, ರುಕ್ಷ ಮತ್ತು ಮಲಬದ್ಧತೆ ಉಂಟು ಮಾಡುವ ಎಲ್ಲ ತರಕಾರಿಗಳಿಂದ ಶರೀರದಲ್ಲಿ ವಾತ ಮತ್ತು ಮಲ ತಯಾರಾಗುತ್ತದೆ !

ರೋಹನ ಗಾಯಕವಾಡ, ಅವನ ತಂದೆ ಮತ್ತು ಅವನ ಅಜ್ಜ ಹೀಗೆ ಮೂರು ಜನರು ರೋಹನನ ಆರೋಗ್ಯವನ್ನು ತೋರಿಸಲು ನನ್ನ ಬಳಿ ಬಹಳ ದೂರದಿಂದ ಬಂದರು. “ಈ ನನ್ನ ಮೊಮ್ಮಗ ರೋಹನ ೮ ನೇ ತರಗತಿಯಲ್ಲಿದ್ದಾನೆ ಮತ್ತು ಅವನ ಆರೋಗ್ಯ ಸ್ವಲ್ಪವೂ ಸುಧಾರಿಸುತ್ತಿಲ್ಲ ಮತ್ತು ಅವನಿಗೆ ಹೊಟ್ಟೆಯ ತೊಂದರೆಯೂ ಇದೆ, ಎಂದು ಅವರು ಹೇಳಿದರು. ನಾನು “ಏನು ತೊಂದರೆಯಾಗುತ್ತದೆ ಹೊಟ್ಟೆಯಲ್ಲಿ ?, ಎಂದು ರೋಹನನಿಗೆ ಕೇಳಿದೆ. “ಯಾವಾಗಲೂ ಹೊಟ್ಟೆ ತುಂಬಿದಂತೆ ಇರುತ್ತದೆ. ದಿನದಲ್ಲಿ ೪-೫ ಬಾರಿ ಶೌಚವಾಗುತ್ತದೆ. ಅತಿಸಾರವಾಗುವುದಿಲ್ಲ; ನಿತ್ಯದಂತೆ ಶೌಚವಾಗುತ್ತದೆ ಮತ್ತು ಹಸಿವೆಯೇ ಆಗುವುದಿಲ್ಲ, ಎಂದು ರೋಹನನು ಚುರುಕಾಗಿ ಉತ್ತರಿಸಿದನು. “ಹೊಟ್ಟೆಯಲ್ಲಿ ಉರಿಯುವುದು, ಹೊಟ್ಟೆ ತೊಳೆಸಿದಂತಾಗುವುದು ಮತ್ತು ವಾಂತಿ ಹೀಗೇನಾದರೂ ಆಗುತ್ತದೆಯೇ ?, ಎಂದು ನಾನು ಕೇಳಿದಾಗ ಅವನು ‘ಇಲ್ಲ ಎಂದನು. “ಆರೋಗ್ಯ ಸುಧಾರಿಸುತ್ತಿಲ್ಲ ಎಂದರೇನು ? ತೂಕ ಅಥವಾ ದಪ್ಪತನ ಹೆಚ್ಚಾಗುತ್ತಿಲ್ಲವೇ ? ಎಂದು ಕೇಳಿದೆ ಅದಕ್ಕೆ “ಹಾಗೇನಿಲ್ಲ ಮೇಡಮ್ ! ನಮ್ಮ ಮನೆಯಲ್ಲಿ ಎಲ್ಲರದ್ದೂ ತೆಳ್ಳಗಿನ ಪ್ರಕೃತಿ; ಆದರೆ ಇವನು ಬಹಳ ತೆಳ್ಳಗಿದ್ದಾನೆ ಮತ್ತು ಬಹಳ ಅಶಕ್ತನಾಗಿದ್ದಾನೆ. ಯಾವಾಗಲೂ ಕಾಯಿಲೆ ಬೀಳುತ್ತಾನೆ ಮತ್ತು ಅವನಲ್ಲಿ ಶಕ್ತಿಯೂ ಕಡಿಮೆ ಇದೆ. ನಮ್ಮ ಊರಲ್ಲಿ ಇವನ ವಯಸ್ಸಿನ ಮಕ್ಕಳು ಎಷ್ಟು ಕೆಲಸ ಮಾಡುತ್ತಾರೆ, ಭಾರದ ವಸ್ತುಗಳನ್ನು ಎತ್ತುತ್ತಾರೆ ! ಇವನಿಗೆ ಅದು ಆಗುವುದಿಲ್ಲ, ಅಭ್ಯಾಸದಲ್ಲಿ ಹೇಳಬೇಕೆಂದರೆ ಇವನಿಗೆ ಪರೀಕ್ಷೆಯಲ್ಲಿ ಏನೂ ನೆನಪಾಗುವುದಿಲ್ಲ. ಇವನ ಕೂದಲುಗಳೂ ಬಿಳಿಯಾಗತೊಡಗಿವೆ. ಅರೆ, ಇವನಿಗೆ ಸಾದಾ ವೇಗದಿಂದ ಓಡಲು ಆಗುವುದಿಲ್ಲ. ಒಂದು ವರ್ಷದ ಹಿಂದೆ ಆರೋಗ್ಯದಿಂದ ಇದ್ದನು. ಒಂದು ವರ್ಷವಾಯಿತು, ಇವನ ಹೊಸ ಹೊಸ ಗೋಳುಗಳು (ತಕರಾರುಗಳು) ನಡೆದೇ ಇರುತ್ತವೆ, ಎಂದು ಹೇಳಿದರು.

ಅಜ್ಜನವರು ಎಷ್ಟೊಂದು ವಿವಿಧ ರೀತಿಯ ಲಕ್ಷಣಗಳನ್ನು ಹೇಳಿದರೆಂದರೆ, ಅವುಗಳಲ್ಲಿ ಯಾವುದೇ ಹೊಂದಾಣಿಕೆಯೇ ಆಗುತ್ತಿರಲಿಲ್ಲ, ಯಾವುದಕ್ಕೆ ಯಾವುದೇ ಸಂಬಂಧವಿರಲಿಲ್ಲ. (ಎಲ್ಲವೂ ಅಸ್ಪಷ್ಟ) ಲಕ್ಷಣಗಳು ! ಯಾವುದೇ ಒಂದು ರೋಗದಲ್ಲಿ ಕಾಣಿಸದಿರುವ ಲಕ್ಷಣಗಳು. ‘ಈಗ ಇವುಗಳ ಕಾರಣಗಳನ್ನು ಕಂಡು ಹಿಡಿಯಬೇಕು, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ನಡೆದಿರುವಾಗಲೇ ರೋಹನನ ತಂದೆ, “ನಾವು ಇವನ ಬಹಳ ಕಾಳಜಿ ತೆಗೆದುಕೊಳ್ಳುತ್ತೇವೆ ! ಚಿಕ್ಕಂದಿನಿಂದಲೇ ಅವನಿಗೆ ಬದಾಮಿ ಕೊಡುತ್ತೇವೆ, ಮನೆಯ ಭಾರತೀಯ (ದೇಸಿ) ಹಸುವಿನ ತುಪ್ಪವನ್ನು ಕೊಡುತ್ತೇವೆ. ಇವನ ತಾಯಿ ಆಹಾರಶಾಸ್ತ್ರದ (ಡೈಯಟಿಶೀಯನ್) ಒಂದು ಕೋರ್ಸ್‌ನ್ನೇ ಮಾಡಿದ್ದಾಳೆ. ಇವನು ೬ ವರ್ಷದವನಿದ್ದಾಗಿನಿಂದಲೇ ಅವಳು ಪ್ರತಿದಿನ ಸೊಪ್ಪಿನ ಸೂಪ್ ಅಥವಾ ಸೊಪ್ಪಿನ ಪಲ್ಯವನ್ನು ಕೊಡುತ್ತಾಳೆ, ಎಂದು ಹೇಳಿದರು. “ಏನು ? ಪ್ರತಿದಿನ ಸೊಪ್ಪಿನ ಸೂಪ್ ? ಅದು ಸಹ ಇಷ್ಟು ವರ್ಷ  ?  ನನಗೆ ರೋಹನನ ಬಗ್ಗೆ ಕರುಣೆ ಬಂತು, ಆದರೆ ಇವನು ತಿನ್ನಲು ಕಿರಿಕಿರಿ ಮಾಡುತ್ತಾನೆ; ಇವನ ತಾಯಿ ಅವುಗಳನ್ನು ಬಲವಂತವಾಗಿ  ಕೊಡುತ್ತಾಳೆ. ನೀವೇ ಇವನಿಗೆ ತಿಳಿಸಿ ಹೇಳಿ, ಎಂದರು ಗಾಯಕವಾಡರು.

ತಕ್ಷಣ ನನ್ನ ಕಣ್ಣುಗಳೆದುರು ‘ಭಾವಪ್ರಕಾಶ ಎಂಬ ನಮ್ಮ  ಗ್ರಂಥದಲ್ಲಿನ ತರಕಾರಿಗಳ ಬಗೆಗಿನ ಶ್ಲೋಕವು ನನ್ನ ಕಣ್ಣುಗಳೆದುರಿಗೆ ಬಂದಿತು. ಅದರಲ್ಲಿ, ಎಲ್ಲ ತರಕಾರಿಗಳು ಜೀರ್ಣವಾಗಲು ಜಡ, ರೂಕ್ಷ ಮತ್ತು ಮಲಬದ್ಧತೆಯನ್ನುಂಟು ಮಾಡುತ್ತವೆ. ಅವು ಹೊಟ್ಟೆಯಲ್ಲಿ ಬಹಳಷ್ಟು ವಾತ ಮತ್ತು ಮಲವನ್ನು ತಯಾರು ಮಾಡುತ್ತವೆ. ಮೂಳೆ, ರಕ್ತ, ಶುಕ್ರ (ಸಂತಾನೋತ್ಪತ್ತಿ ಮಾಡುವ ಶರೀರದಲ್ಲಿನ ಧಾತು) ವರ್ಣ, ದೃಷ್ಟಿ, ಚುರುಕುತನ ಮತ್ತು ಸ್ಮರಣಶಕ್ತಿಯನ್ನು ನಾಶ ಮಾಡುತ್ತವೆ. ಅತೀ ಹೆಚ್ಚು ಪ್ರಮಾಣದಲ್ಲಿ ತರಕಾರಿಗಳನ್ನು ತಿನ್ನುವುದರಿಂದ ಕೂದಲುಗಳು ಬೆಳ್ಳಗಾಗುತ್ತವೆ. ಶರೀರದ ಗತಿ (ವೇಗ) ಕಡಿಮೆಯಾಗುತ್ತದೆ. ತರಕಾರಿಗಳಲ್ಲಿ ಎಲ್ಲ ರೋಗಗಳ ವಾಸವಿರುತ್ತದೆ. ತರಕಾರಿಗಳು ಶರೀರದ ಭೇದನ (ಶರೀರಧಾತುಗಳ ಹೆಚ್ಚಳದಲ್ಲಿ ಅಡಚಣೆಗಳನ್ನು ತರುತ್ತವೆ.) ಮಾಡುತ್ತವೆ. ಆದುದರಿಂದ ಬುದ್ಧಿವಂತ ಮನುಷ್ಯನು ತರಕಾರಿಗಳನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನಬಾರದು, ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ರೋಹನನ ಲಕ್ಷಣಗಳು ತರಕಾರಿಗಳ ದುಷ್ಟರಿಣಾಮಕ್ಕೆ ಸರಿಯಾಗಿ ಹೊಂದುತ್ತಿದ್ದವು. ೬ ವರ್ಷಗಳ ಕಾಲ ಪ್ರತಿದಿನ ಸೊಪ್ಪು ತರಕಾರಿ ತಿನ್ನುವುದರ ಕಾರಣವು ಸ್ಪಷ್ಟವಾಗಿ ಎದುರಿಗೆ ಬಂದಿತ್ತು. ಅದು ಸೊಪ್ಪುಗಳ ಕೊಡುಗೆಯಾಗಿತ್ತು ! ಅಂದರೆ ರೋಹನನ ಒಟ್ಟು ಸಮಸ್ಯೆಯ ಮೂಲ ಸಿಕ್ಕಿತು; ಆದರೆ ಗಾಯಕವಾಡ ಇವರಿಗೆ ಅದನ್ನು ತಿಳಿಸಿ ಹೇಳುವುದು ಕಠಿಣ ಕೆಲಸವಾಗಿತ್ತು. (ಇಂತಹ ಬಹಳ ಕಠಿಣ ಕೆಲಸಗಳನ್ನು ನಮ್ಮ ವೈದ್ಯರು ಅವರ ಆಸ್ಪತ್ರೆಗಳಲ್ಲಿ ಕಷ್ಟಪಟ್ಟು ಮಾಡುತ್ತಿರುತ್ತಾರೆ.) ಯಾವ ಅರ್ಥದಲ್ಲಿ ಇಷ್ಟು ವರ್ಷಗಳ ವರೆಗೆ ರೋಹನನಿಗೆ ಸತತವಾಗಿ ಸೊಪ್ಪು ತರಕಾರಿಗಳನ್ನು ಕೊಡಲಾಗುತ್ತಿತ್ತೋ, ಆ ಅರ್ಥದಲ್ಲಿ ಈ ಜನರಲ್ಲಿ ‘ಸೊಪ್ಪುಗಳ ಬಗ್ಗೆ ನಿಜವಾಗಿಯೂ ಅಂಧಶ್ರದ್ಧೆ ಇರಬಹುದು, ಇದು ನಿಶ್ಚಿತ ! ಅದರಿಂದ ರೋಗಿಯನ್ನು ಹೊರ ತರುವುದು ಕಠಿಣವೇ ಆಗಿದೆ; ಆದರೆ ಆ ಕೆಲಸವನ್ನು ಮಾಡಲೇಬೇಕಿತ್ತು.

೩. ಸೊಪ್ಪಿನ ಜೊತೆಗೆ ದ್ವಿದಳಧಾನ್ಯಗಳ ಸೇವನೆ ಒಳ್ಳೆಯದು !

ನಾನು ಇದೆಲ್ಲವನ್ನೂ ತಿಳಿಸಿ ಹೇಳಿದ ಕೂಡಲೇ ಅಜ್ಜನವರು, “ಅರೆ, ನಾವು ರೈತರು, ನಾವು ಜೀವನದಾದ್ಯಂತ ನಮ್ಮ ಹೊಲದಲ್ಲಿ ಏನು ಬೆಳೆದೆವೋ, ಅದನ್ನೇ ತಿನ್ನುತ್ತಾ ಬಂದಿದ್ದೇವೆ. ಪ್ರತಿದಿನದ ಊಟದಲ್ಲಿ ನಾವು ಬೇಳೆ-ಅನ್ನ, ಸಾರು-ರೊಟ್ಟಿ, ಝುಣಕ-ರೊಟ್ಟಿ, ಎಳ್ಳಿನ, ಶೇಂಗಾ, ಬೆಳ್ಳುಳ್ಳಿಯ ಅಥವಾ ಅಗಸೆಯ ಚಟ್ನಿ, ಮನೆಯ ಹಸುವಿನ ಹಾಲಿನ ಮೊಸರು, ಇಲ್ಲದಿದ್ದರೆ ಮಜ್ಜಿಗೆ ಇಷ್ಟೇ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿದ್ದೆವು. ತರಕಾರಿ ಪ್ರತಿದಿನ ಇರುತ್ತಿರಲಿಲ್ಲ. ಒಂದು ದಿನ ಬಿಟ್ಟು ಒಂದು ದಿನ ಇರುತ್ತಿದ್ದವು, ಬೇಳೆ ಅಥವಾ ದ್ವಿದಳ ಧಾನ್ಯಗಳು ಮಾತ್ರ ಪ್ರತಿದಿನ ಇರುತ್ತಿದ್ದವು. ಸೊಪ್ಪುತರಕಾರಿಗಳು ಯಾವಾಗಲಾದರೊಮ್ಮೆ ೧೫ ದಿನಗಳಿಗೊಮ್ಮೆ  ವಿಶೇಷವಾಗಿ ಮಳೆಗಾಲದಲ್ಲಿ ಇರುತ್ತಿತ್ತು. ಇಂದಿಗೂ ನಾವು ಚೆನ್ನಾಗಿ ಗಟ್ಟಿಮುಟ್ಟಾಗಿದ್ದೇವೆ. ಇಂದಿಗೂ ಹೊಲದಲ್ಲಿ ೮ ಗಂಟೆ ಕೆಲಸ ಮಾಡುತ್ತೇವೆ. ನನ್ನ ಕೂದಲನ್ನು ನೋಡಿ ಇನ್ನೂ ಕಪ್ಪಾಗಿವೆ. ಇವರು ನಮ್ಮ ಮಾತುಗಳನ್ನು ಕೇಳುವುದಿಲ್ಲ ? ಯಾಕೆ ಯಾರಿಗೆ ಗೊತ್ತು ? ಕೂದಲು ಬೆಳ್ಳಗಾಗಿದ್ದರೆ, ನನ್ನ ಕೂದಲು ಸುಮ್ಮನೇ ಬೆಳ್ಳಗಾಗಿಲ್ಲ ! ಎಂದಾದರು  ಹೇಳಬಹುದಾಗಿತ್ತು. ಅಜ್ಜನವರು ತಮ್ಮ ಮಾತುಗಳನ್ನು ಯಾರೂ ಕೇಳದ ಬಗ್ಗೆ ದುಃಖವನ್ನು ಸೌಮ್ಯವಾಗಿ ವ್ಯಕ್ತಪಡಿಸಿದರು. “ಹೌದು, ಆದರೆ ಡಾಕ್ಟರರು ಹೆಚ್ಚಾಗಿ ಸೊಪ್ಪು ತರಕಾರಿಗಳನ್ನು ತಿನ್ನಿರಿ ಎಂದು ಹೇಳುತ್ತಾರೆ ಮತ್ತು ನೀವು ತಿನ್ನಬೇಡಿ ಎಂದು ಹೇಳುತ್ತಿರಿ. ನಾವು ಜನಸಾಮಾನ್ಯರು ಯಾರ ಮಾತು ಕೇಳಬೇಕು ?, ರೋಹನನ ತಂದೆಯವರು ಸಾಮಾನ್ಯ ಪ್ರಶ್ನೆ ಕೇಳಿದರು.  “ಯಾರ ಕೇಳಬೇಕು ಎಂದರೆ ? ಇದೇನು ಪ್ರಶ್ನೆಯೇ ? ಅಜ್ಜನವರು ತಮ್ಮ ಅಭಿಪ್ರಾಯದ ಮೇಲೆ ದೃಢವಾಗಿದ್ದರು. ‘ಅರೆ ಅಜ್ಜ, ಇದು ಇವರ ತಪ್ಪಲ್ಲ. ಇವರಿಗೆ ಶಾಲೆಯಲ್ಲಿ ಎಲ್ಲ ವಿದೇಶಿಶಾಸ್ತ್ರವನ್ನು ಕಲಿಸುತ್ತಾರೆ, ಆದುದರಿಂದ ಇವರ ವಿಚಾರ ಮಾಡುವ ಪದ್ಧತಿಯೇ ಬದಲಾಗಿದೆ; ಎಂದು ನಾನು ಹೇಳಿದೆನು.

೪. ವಿದೇಶಗಳಲ್ಲಿನ ಜನರು ಮಾಂಸಾಹಾರವನ್ನು ಮಾಡುವುದರಿಂದ ಅವರಿಗೆ ಸೊಪ್ಪು ತಿನ್ನಲು ಸಲಹೆ ನೀಡುವುದು ಯೋಗ್ಯವಾಗಿದೆ

ಪಾಶ್ಚಾತ್ಯ ದೇಶಗಳಲ್ಲಿ ಜನರು ಮುಖ್ಯವಾಗಿ ಮಾಂಸಾಹಾರವನ್ನು ಮಾಡುತ್ತಾರೆ, ಅಂದರೆ ೧೨ ತಿಂಗಳು, ಮೂರೂ ಹೊತ್ತೂ ಮಾಂಸವನ್ನೇ ತಿನ್ನುತ್ತಾರೆ. ಅವರ ಆಹಾರದಲ್ಲಿ ಸಸ್ಯಾಹಾರಿ ಪದಾರ್ಥಗಳು ನಗಣ್ಯವಾಗಿರುತ್ತವೆ. ಇದ್ದರೂ ಅದು ಪಾವ್ (ಬನ್) ಮಾತ್ರ. ಮಾಂಸವನ್ನೂ ಅವರು ಕೇವಲ ಹಬೆ (ಉಗಿ) ತೋರಿಸಿ (ಬೇಯಿಸಿ) ಉಪ್ಪು ಹಾಕಿ ತಿನ್ನುತ್ತಾರೆ. ರುಚಿಗೆ ‘ಸಾಸ್ಗಳನ್ನು ಉಪಯೋಗಿಸುತ್ತಾರೆ. ಜೊತೆಗೆ ನೀರಿನ ಬದಲು ಮದ್ಯ ಕುಡಿಯುತ್ತಾರೆ. ಇವೆಲ್ಲ ಪದಾರ್ಥಗಳು ಬಹಳ ಒಣ ಇರುತ್ತವೆ ಮತ್ತು ಫೈಬರ್(ತಂತು) ಕಡಿಮೆ ಇರುತ್ತದೆ. ಆದುದರಿಂದ ‘ಮಲಬದ್ಧತೆ ಅವರ ಮುಖ್ಯ ಸಮಸ್ಯೆಯಾಗಿದೆ. ಅದಕ್ಕಾಗಿ ಅವರಿಗೆ ಸೊಪ್ಪು ತಿನ್ನಲು ಸಲಹೆಯನ್ನು ಕೊಡಲಾಗುತ್ತದೆ. ನಮ್ಮಲ್ಲಿ ಪರಿಸ್ಥಿತಿ ಬೇರೆ ಇದೆ. ನಮ್ಮಲ್ಲಿ ಮಾಂಸಾಹಾರಿ ಜನರು ಪ್ರತಿದಿನ ಮಾಂಸಾಹಾರವನ್ನು ಸೇವಿಸದೇ ವಾರದಲ್ಲಿ ೨-೩ ದಿನ ಮಾಡುತ್ತಾರೆ. ಅದರಲ್ಲಿಯೂ ಮನೆಯಲ್ಲಿ ಊಟ ಮಾಡುವವರಿದ್ದರೆ, ಮಾಂಸಾ ಹಾರವನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದರೊಂದಿಗೆ ರೊಟ್ಟಿ, ಅನ್ನ ಅಥವಾ ಚಪಾತಿ ಹೀಗೆ ತಂತುಮಯ (ಫೈಬರ್) ಪದಾರ್ಥಗಳು ಇದ್ದೇ ಇರುತ್ತವೆ. ಮಾಂಸವನ್ನು ಬೇಯಿಸುವಾಗ ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಹೀಗೆ ಸಸ್ಯಾಹಾರಿ ಘಟಕಗಳನ್ನು ಹಾಕುತ್ತಾರೆ. ನಾವು ನೀರನ್ನೂ ಸಹ ಸಾಕಷ್ಟು ಕುಡಿಯುತ್ತೇವೆ. ಆದುದರಿಂದ ಸೊಪ್ಪುಗಳನ್ನು ನಮಗೆ ಉದ್ದೇಶಪೂರ್ವಕವಾಗಿ ಮತ್ತು ಬಹಳಷ್ಟು ಅಥವಾ ಪ್ರತಿದಿನ ತಿನ್ನುವ ಆವಶ್ಯಕತೆ ಇರುವುದಿಲ್ಲ. ‘ತಿನ್ನುವಾಗಲೂ, ಮೊದಲು ಹಬೆ ತೋರಿಸಿ (ಬೇಯಿಸಿ), ಹಿಂಡಿ, ಎಣ್ಣೆ ಅಥವಾ ತುಪ್ಪದ ಒಗ್ಗರಣೆಯನ್ನು ಹಾಕಿಯೇ ತಿನ್ನಬೇಕು, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೆ ನೋಡಿದರೆ ಸೊಪ್ಪುಗಳ ಬಾಳಿಕೆ ಬಹಳ ಕಡಿಮೆ ಇರುತ್ತದೆ ? ಅವು ಶರೀರದಲ್ಲಿ ಹೋಗಿ ತಮ್ಮಂತಹ ಅಲ್ಪಜೀವಿ ಘಟಕಗಳನ್ನೇ ತಯಾರಿಸುತ್ತವೆ.

೫. ಹಸುವಿನ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ ಮತ್ತು ತುಪ್ಪ ಇವು ಜೀವಸತ್ವ ಮತ್ತು ಧಾತುಗಳ ದೊಡ್ಡ ಭಂಡಾರ !

‘ಸೊಪ್ಪುಗಳಲ್ಲಿರುವ ತಂತುಮಯ (ಫೈಬರ್) ಪದಾರ್ಥ, ಖನಿಜ ಮತ್ತು ಜೀವಸತ್ವಗಳು ನಮಗೆ ಹೇಗೆ ಸಿಗುವವು ?, ರೋಹನನ ತಂದೆಯವರು ಸಂದೇಹ ವ್ಯಕ್ತಪಡಿಸಿದರು. ‘ಇತರ ಸಸ್ಯಾಹಾರಿ ಪದಾರ್ಥಗಳಲ್ಲಿನ ನಮ್ಮ ಹಸುವಿನ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ ಮತ್ತು ತುಪ್ಪ, ಅಂದರೆ ಜೀವಸತ್ವಗಳ ಮತ್ತು ಧಾತುಗಳ ಖಜಾನೆಯೇ ಆಗಿದೆ. ಎಲ್ಲ ಧಾನ್ಯಗಳನ್ನು ಅವುಗಳ ಹೊಟ್ಟಿನೊಂದಿಗೆ (‘ಪಾಲೀಶ ಮಾಡದೇ ಇರುವ ಧಾನ್ಯಗಳು) ಮತ್ತು ಕಾಳುಗಳನ್ನು ಸಿಪ್ಪೆಗಳೊಂದಿಗೆ ತಿಂದರೆ, ಸಾಕಷ್ಟು ತಂತು (ಫೈಬರ್) ಹೊಟ್ಟೆಯಲ್ಲಿ ಹೋಗುತ್ತದೆ. ಈ ಎಲ್ಲ ಪದಾರ್ಥ ಗಳಿಂದ ಸೊಪ್ಪುಗಳಂತೆ ಯಾವುದೇ ಹಾನಿ ಆಗುವುದಿಲ್ಲ.

‘ತಂತುಮಯ ಪದಾರ್ಥಗಳ (ಫೈಬರ್) ನ್ಯೂನ್ಯತೆ ಇದು ಮಲಬದ್ಧತೆಗೆ ಏಕೈಕ ಕಾರಣವಾಗಿರುವುದಿಲ್ಲ. ವ್ಯಾಯಾಮ ಮತ್ತು ಕೊಬ್ಬಿನ ಆಹಾರಗಳ ಕೊರತೆ, ಹಾಗೆಯೇ ತುಂಬಾ ಉಪವಾಸ ಮಾಡುವುದು ಇಂತಹ ಇತರ ಎಷ್ಟೋ ಕಾರಣಗಳಿರುತ್ತವೆ, ಎಂದೆನು. “ಹಾಗಾದರೆ ಸೊಪ್ಪುಗಳನ್ನು ತಿನ್ನಲೇಬಾರದೇ ?, ಎಂದು ರೋಹನನ ತಂದೆಯವರು ಈಗ ಈ ಕೊನೆಯ ಪ್ರಶ್ನೆ ! “ಪ್ರತಿದಿನವಂತೂ ನಿಶ್ಚಿತ ತಿನ್ನಬಾರದು. ಪ್ರತಿದಿನ ತಿಂದರೂ ನಡೆಯುತ್ತದೆ, ಇಂತಹ ಆಹಾರದ ಪದಾರ್ಥಗಳು ಬೆರಳೆಣಿಕೆಯಷ್ಟಿವೆ ಯಾವ ಋತುಗಳಲ್ಲಿ ಯಾವ ತರಕಾರಿಗಳು ಬೆಳೆಯುತ್ತವೆಯೋ, ಅವುಗಳನ್ನು ಇಷ್ಟಕ್ಕನುಸಾರ ಅವಶ್ಯ ತಿನ್ನಬೇಕು. ಅದನ್ನೂ ಆಯುರ್ವೇದವು ಹೇಳಿದ ಪದ್ಧತಿಯಲ್ಲಿ ತಿನ್ನಬೇಕು. ಕೊನೆಗೆ ಯಾವುದೇ ವಿಷಯದ ಅತಿರೇಕ ಕೆಟ್ಟದ್ದೇ. ಮನವರಿಕೆಯಾಗಲು ಕಠಿಣವಿದೆ; ಆದರೆ ಹಿತದ ವಿಷಯವಾಗಿರುವುದರಿಂದ ನಾನು ಅದನ್ನು ಹೇಳುತ್ತಿರುತ್ತೇನೆ.

– ವೈದ್ಯೆ ಸುಚಿತ್ರಾ ಕುಲಕರ್ಣಿ, ಆಹಾರತಜ್ಞರು

(ಆಧಾರ : ದೈನಿಕ ‘ತರುಣ ಭಾರತ, ೨೧.೮.೨೦೧೦)