ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮಾರ್ಗ’ದ ಅನಾವರಣ
ನಾಗೋಠಣೆ (ರಾಯಗಡ ಜಿಲ್ಲೆ) ಮೇ ೧೩ (ವಾರ್ತೆ.) – ಸಂಪೂರ್ಣ ಜಗತ್ತಿನಲ್ಲಿ ಸನಾತನ ಧರ್ಮದ ಪ್ರಚಾರ ಮಾಡುವ ಮತ್ತು ವಿಶ್ವಕಲ್ಯಾಣಕ್ಕಾಗಿ ನಿರಂತರ ಶ್ರಮಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ನಾಗೊಠಣೆ (ರಾಯಗಡ) ಇಲ್ಲಿಯ ಜನ್ಮಸ್ಥಾನಕ್ಕೆ ಹೋಗುವ ಮಾರ್ಗಕ್ಕೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮಾರ್ಗ’ ಎಂದು ನಾಮಕರಣ ಮಾಡಿ ಗ್ರಾಮಸ್ಥರು ಅವರ ಕಾರ್ಯಕ್ಕೆ ಗೌರವ ನೀಡಿದ್ದಾರೆ.
ಸನಾತನದ ಧರ್ಮ ಪ್ರಚಾರಕ ಸದ್ಗುರು ಅನುರಾಧಾ ವಾಡೇಕರ ಮತ್ತು ಗಣ್ಯರ ಹಸ್ತದಿಂದ ಮೇ ೧೨ ರಂದು ಈ ಮಾರ್ಗದ ನಾಮಫಲಕದ ಅನಾವರಣ ಮಾಡಲಾಯಿತು. ಶಿವಸೇನೆಯ ರಾಯಗಡ ಜಿಲ್ಲೆಯ ಸಹ ಸಂಘಟಕ ಸಂಪರ್ಕ ಪ್ರಮುಖ ಶ್ರೀ. ಕಿಶೋರಶೇಠ ಜೈನ, ನಾಗೋಠಣೆ ಇಲ್ಲಿಯ ಸರಪಂಚ ಡಾ. ಮಿಲಿಂದ ಧಾತ್ರಕ, ಉಪಸರಪಂಚ ಸೌ. ರಂಜನ ರವೀಂದ್ರ ರಾವುತ್, ಸನಾತನದ ಸಾಧಕೀ ಸೌ. ವರ್ಷ ರಾವಕರ ಇವರ ಜೊತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಸೋದರ ಸಂಬಂಧಿ ಶ್ರೀಮತಿ ಶಕುಂತಲಾ ಓಕ, ಗ್ರಾಮಸ್ಥರು ಮತ್ತು ಸನಾತನದ ಸಾಧಕರು ಈ ಮಂಗಳ ಸಮಾರಂಭದ ಲಾಭ ಪಡೆದರು. ಈ ಸಮಾರಂಭಕ್ಕೆ ಪೂ.( ಸೌ.) ಸಂಗೀತ ಜಾಧವ್ ಮತ್ತು ಹ.ಭ.ಪ. ಬಾಪು ರಾವಕರ ಇವರು ಉಪಸ್ಥಿತರಿದ್ದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ೮೧ ನೇ ಜನ್ಮದಿನದ ಅಂಗವಾಗಿ ಸಮಾರಂಭ ನಡೆಯಿತು. ಮೇ ೧೨, ೧೯೪೨ ರಂದು (ವೈಶಾಖ ಕೃಷ್ಣ ಸಪ್ತಮಿ) ರಾಯಗಡ ಜಿಲ್ಲೆಯಲ್ಲಿನ ನಾಗೋಠಣೆ ಇಲ್ಲಿ ‘ಬ್ರಾಹ್ಮಣ ಗಲ್ಲಿ’ಯಲ್ಲಿ ‘ವರ್ತಕವಾಡ’ ಈ ವಾಸ್ತುವಿನಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಜನನವಾಯಿತು. ಈ ವಾಸ್ತುವಿನ ಕಡೆಗೆ ಹೋಗುವ ಮಾರ್ಗಕ್ಕೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮಾರ್ಗ’ ಎಂದು ನಾಮಕರಣ ಮಾಡುವಂತೆ ನಾಗೋಠಣೆ ಗ್ರಾಮ ಪಂಚಾಯತಿಯಲ್ಲಿ ಒಮ್ಮತದಿಂದ ಠರಾವನ್ನು ಅಂಗೀಕರಿಸಲಾಯಿತು.