ರಾಜ್ಯದಲ್ಲಿ ಅಧಿಕಾರ ಬದಲಾವಣೆ

ರಾಜ್ಯದ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದೆ. ರಾಜ್ಯದಲ್ಲಿ ಭಾಜಪದಿಂದ ಮೊದಲು ಸರಕಾರ ಸ್ಥಾಪನೆ ಆಗಿತ್ತು, ಆಗ ಅದನ್ನು ‘ದಕ್ಷಿಣ ದಿಗ್ವಿಜಯದ ಪ್ರವೇಶ ದ್ವಾರ ‘ ಎಂದು ಉಲ್ಲೇಖಿಸಲಾಗಿತ್ತು. ೨೦೧೮ ರಲ್ಲಿ ನಡೆದಿರುವ ಚುನಾವಣೆ ನಂತರ ವರ್ಷದಲ್ಲಿ ಕಾಂಗ್ರೆಸ್ ಮತ್ತು ಜನತಾದಳ (ಜಾತ್ಯಾತೀತ) ಈ ಎರಡು ಪಕ್ಷದ ಶಾಸಕರನ್ನು ವಿಭಜಿಸಿ ಭಾಜಪ ಸರಕಾರ ರಚಿಸಿತು; ಆದರೆ ಆ ಅಧಿಕಾರ ಉಳಿಸಿಕೊಳ್ಳುವಲ್ಲಿ ವಿಫಲರಾದರು. ವಿಧಾನಸಭಾ ಚುನಾವಣೆಯ ಮುಂಚೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರಗೃಹ ಸಚಿವರಾದ ಅಮಿತ ಶಹಾ ಇವರು ಕರ್ನಾಟಕದಲ್ಲಿ ಅನೇಕ ಸಭೆಗಳನ್ನು ನಡೆಸಿದರು, ಆದರೆ ಅದರ ಪರಿಣಾಮ ಕಂಡು ಬರಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಶಾಸಕರು ನಡೆಸಿರುವ ಶಾಸನದಿಂದ ಜನರು ಉದಾಸೀನರಾದರು. ಅದರ ಪರಿಣಾಮ ಈ ಚುನಾವಣೆಯಲ್ಲಿ ಕಂಡು ಬಂದಿತು. ಮುಂದಿನ ವರ್ಷ ಲೋಕಸಭೆಯ ಚುನಾವಣೆ ನಡೆಯುವುದು. ಕೇಂದ್ರದಲ್ಲಿ ಮತ್ತೆ ಅಧಿಕಾರ ಪಡೆಯಬೇಕೆಂದರೆ ಭಾಜಪಕ್ಕೆ ಜನರ ಮತಪ್ರವಾಹದ ಬಗ್ಗೆ ತಿಳಿದುಕೊಳ್ಳಬೇಕು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಅದಕ್ಕಿಂತಲೂ ‘ಭಾಜಪ ಸೋತಿದೆ’, ಈ ಅಂಶಗಳು ತಿಳಿದುಕೊಳ್ಳಬೇಕು. ಕಳೆದ ಚುನಾವಣೆಯಲ್ಲಿ ಹಿಂದೂಗಳು ಭಾಜಪಕ್ಕೆ ಯಾವ ವಿಶ್ವಾಸದಿಂದ ಮತ ನೀಡಿದರು, ಆ ವಿಶ್ವಾಸ ಭಾಜಪ ಉಳಿಸಿಕೊಳ್ಳಲಿಲ್ಲ. ಆದ್ದರಿಂದ ಹಿಂದೂಗಳ ಮತ ವಿಭಜನೆ ಆಯಿತು ಹಾಗೂ ಹಿಜಾಬ್ ಮತ್ತು ಇತರ ಅಂಶಗಳಿಂದ ಭಾಜಪವನ್ನು ‘ಖಳನಾಯಕ’ ಎಂದು ಬಣ್ಣಿಸಿ ಕಾಂಗ್ರೆಸ್ ಮುಸಲ್ಮಾನರ ಮತ ಗಳಿಸುವಲ್ಲಿ ಯಶಸ್ವಿ ಆದರು. ಕರ್ನಾಟಕ ಅಲ್ಲದೆ, ದೇಶದಲ್ಲಿನ ಯಾವುದೇ ರಾಜ್ಯದ ಮುಸಲ್ಮಾನರ ಮತಗಂಟು ಭಾಜಪಕ್ಕೆ ದೊರೆಯುವುದಿಲ್ಲ. ಭಾಜಪಗೆ ಚುನಾವಣೆ ಗೆಲ್ಲುವುದಿದ್ದರೆ, ಆಗ ಹಿಂದೂಗಳ ಒಟ್ಟು ಮತಕ್ಕಾಗಿ ಅವರು ಪ್ರಯತ್ನ ಮಾಡಬೇಕು.

ವಿಸ್ತೃತ ಆತ್ಮಚಿಂತನೆ ನಡೆಯಬೇಕು !

ಅಸ್ಸಾಂ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಭಾಜಪ ಮತ್ತೆ ಅಧಿಕಾರ ಹಿಡಿಯಯಿತು. ಅಸ್ಸಾಂನಲ್ಲಿ ಹಿಮಂತ ಬಿಸ್ವ ಸರಮಾ ಮತ್ತು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಇವರಂತಹ ಸಕ್ಷಮ ನೆತೃತ್ವ ಭಾಜಪಕ್ಕೆ ದೊರೆಯಿತು. ಅದು ಕರ್ನಾಟಕದಲ್ಲಿ ಲಭಿಸಲಿಲ್ಲ, ಇದು ವಿಷಾದ ಸಂಗತಿಯಾಗಿದೆ. ಕಳೆದ ೧೦ ವರ್ಷಗಳಲ್ಲಿ ಭಾಜಪದ ಪ್ರಚಾರ ಉಪಕ್ರಮ ‘ಮೋದಿ ಮತ್ತು ಮೋದಿ’ ಎಂಬ ಅಂಶದಲ್ಲಿಯೇ ನಡೆಯುತ್ತದೆ. ಹಿಂದುತ್ವ ಮತ್ತು ವಿಕಾಸದ ಹೊಂದಾಣಿಕೆ ಭಾಜಪಕ್ಕೆ ರಾಜ್ಯದಲ್ಲಿನ ಚುನಾವಣೆ ಗೆಲ್ಲುವುದಿದ್ದರೆ ಇಂತಹ ಅನೇಕ ‘ಮೋದಿ’ಗಳ ಅವಶ್ಯಕತೆ ಇದೆ. ರಾಜ್ಯಮಟ್ಟದಲ್ಲಿ ಅಂತಹ ಸಕ್ಷಮ ನೇತೃತ್ವ ಸಿದ್ಧಪಡಿಸುವ ಪ್ರಯತ್ನ ಮಾಡಬೇಕು. ಪಂಜಾಬ ಮತ್ತು ದೆಹಲಿಯ ಚುನಾವಣೆಯಲ್ಲಿ ಭಾಜಪದ ಪ್ರಭಾವ ಬೀರಲಿಲ್ಲ, ಇದರ ಕಾರಣ ಸ್ಥಳೀಯ ಮಟ್ಟದಲ್ಲಿ ನೇತೃತ್ವದ ಅಭಾವವಾಗಿದೆ. ಕರ್ನಾಟಕದಲ್ಲಿ ಕೂಡ ಇದು ಮತ್ತೊಮ್ಮೆ ಕಂಡು ಬಂದಿದೆ. ಇಲ್ಲಿಯ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪಗಳಿದ್ದವು. ಕರ್ನಾಟಕದಲ್ಲಿ ಹಿಂದೂತ್ವನಿಷ್ಠ ನಾಯಕರ ಹತ್ಯೆಗಳನ್ನು ನಿರ್ಲಕ್ಷಿಸಲಾಯಿತು. ಆದ್ದರಿಂದ ಹಿಂದೂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಸಮಾಧಾನವಿತ್ತು. ಇತ್ತೀಚಿಗೆ ಮಾಡಲ ವಿರೂಪಾಕ್ಷಪ್ಪ ಈ ಶಾಸಕರ ಬಳಿ ಸಿಕ್ಕಿರುವ ಕೋಟ್ಯಾಂತರ ನಗದು ಇದರಿಂದ ‘ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪಕ್ಷ’, ಎಂದು ಭಾಜಪದ ಪ್ರತಿಮೆಗೆ ಬಿರುಕು ಮೂಡಿತು. ಕರ್ನಾಟಕದಲ್ಲಿ ಭಾಜಪ ಅಧಿಕಾರಕ್ಕೆ ತರುವ ಮಹತ್ವದ ಪಾತ್ರ ವಹಿಸುವ ಲಿಂಗಾಯತ ಜನಾಂಗ, ಕಳೆದ ವರ್ಷ ಅವರ ಪ್ರಭಾವಿ ನಾಯಕ ಬಿ.ಎಸ್. ಯಡಿಯೂರಪ್ಪ ಇವರನ್ನು ಆ ಸ್ಥಾನದಿಂದ ತೆಗೆದಿದ್ದಕ್ಕಾಗಿ ಅಸಮಾಧಾನಗೊಂಡಿದ್ದು, ಇದು ಕೂಡ ಮರೆಯುವ ಹಾಗೆ ಇಲ್ಲ. ಮೇಲಿನ ಎಲ್ಲಾ ವಿಷಯಗಳು ಭಾಜಪದಿಂದ ಆತ್ಮಚಿಂತನೆ ಆಗುವುದು ಅವಶ್ಯಕವಿದೆ. ‘ಈ ಸೋಲು ಎಂದರೆ ಹಿಂದುತ್ವದ ಸೋಲು, ಎಂದು ಯಾರೂ ನೋಡಬಾರದು ಹಾಗೆ ಇದ್ದರೆ ಆಗ ಅಸ್ಸಾಂ ಮತ್ತು ಉತ್ತರ ಪ್ರದೇಶ ರಾಜ್ಯಗಳ ಚಿತ್ರಾಣ ಕೂಡ ಬೇರೆ ಆಗುತ್ತಿತ್ತು. ಹಿಂದೂ ಸಮಾಜಕ್ಕೆ ಹಿಂದುತ್ವದ ಆಧಾರವಾಗಿ ವಿಕಾಸ ಬೇಕಾಗಿದೆ; ಆದರೆ ಅವಕಾಶ ನೀಡಿದರು ಕೂಡ ಆ ವಿಷಯವಾಗಿ ಯಾವುದೇ ರಾಜಕೀಯ ಪಕ್ಷ ಮುನ್ನಡೆಯಲಿಲ್ಲ ಎಂದರೆ ಹಿಂದೂ ಮತದಾನದ ಮೂಲಕ ಅಸಮಾಧಾನ ಪ್ರಕಟಗೊಳಿಸುತ್ತಾರೆ. ಕರ್ನಾಟಕದಲ್ಲಿನ ತೀರ್ಪು ಇದೆ ಸೂಚಿಸುತ್ತದೆ. ಆದ್ದರಿಂದ ಅಧಿಕಾರದ ಪ್ರಾಪ್ತಿಯ ನಂತರ ಹಿಂದುತ್ವದ ಆಧಾರಿತ ವಿಕಾಸ ಮಾಡುವುದರಲ್ಲಿ ನಾವು ಎಲ್ಲಿ ಕಡಿಮೆ ಬಿದ್ದೆವು ? ಇದನ್ನು ಭಾಜಪ ವಿಸ್ತೃತ ಆತ್ಮಪರೀಕ್ಷಣೆ ಮಾಡಬೇಕು, ಆಗಲೇ ಭಾಜಪಕ್ಕೆ ಯೋಗ್ಯ ದಿಕ್ಕು ಸಿಗುವುದು.

ರಾಜ್ಯದ ಹಿಂದೂಗಳ ಪರೀಕ್ಷೆ !

ರಾಜ್ಯದಲ್ಲಿ ಭಾಜಪ ಸರಕಾರದ ಸಮಯದಲ್ಲಿ ಹಿಜಾಬ್, ಹಲಾಲ್ ಮತ್ತು ಅಜಾನ್ ನಿಷೇಧದಲ್ಲಿನ ಒತ್ತಾಯಕ್ಕೆ ಯಶಸ್ಸು ದೊರೆತಿತ್ತು. ಕೆಲವು ಮಹಾವಿದ್ಯಾಲಯಗಳಲ್ಲಿ ಹುಡುಗಿಯರಿಗೆ ಹಿಜಾಬ್ ಧರಿಸಿವುದು ನಿಷೇಧಿಸಿದ ಬಗ್ಗೆ ಸಂಪೂರ್ಣ ರಾಜ್ಯದಲ್ಲಿ ರಾಜಕೀಯವಾಗಿ ಕಾವೇರಿತ್ತು. ಈ ಪ್ರಕರಣ ನ್ಯಾಯಾಲಯಕ್ಕೆ ತಲುಪಿದ ನಂತರ ಮತ್ತು ನ್ಯಾಯಾಲಯವು ಶಾಲೆ ಮಹಾವಿದ್ಯಾಲಯಗಳಲ್ಲಿ ಹಿಜಾಬ್ ನಿಷೇಧ ಖಾಯಂಗೊಳಿಸಿತು. ಕರ್ನಾಟಕದಲ್ಲಿ ಹಲಾಲ್ ಮಾಂಸ ನಿಶೇಧಿಸಲು ಒತ್ತಾಯ ಜೋರಾಯಿತು. ಅದರ ಜೊತೆಗೆ ದೇವಸ್ಥಾನದ ಹೊರಗೆ ಮುಸಲ್ಮಾನ ಮಾರಾಟಗಾರರಿಂದ ಮಾರಾಟದ ಮೇಲೆ ನಿಷೇಧ ಹೇರಲಾಯಿತು. ಸರಕಾರದಿಂದ ಅನೇಕ ದೇವಸ್ಥಾನಗಳು, ಮಸೀದಿ ಮತ್ತು ಚರ್ಚ್ ಇವರಿಗೆ ಸೀಮಿತ ಧ್ವನಿವರ್ಧಕದ ಉಪಯೋಗದ ಬಗ್ಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಹಿಂದೆ ೨೦೨೧ ರಲ್ಲಿ ಕರ್ನಾಟಕ ವಿಧಾನ ಸಭೆಯಲ್ಲಿ ಮತಾಂತರ ವಿರೋಧಿ ವಿಧೇಯಕ ಅಂಗೀಕರಿಸಲಾಯಿತು. ಇದೆಲ್ಲಾ ಭಾಜಪ ಸರಕಾರದ ಸಮಯದಲ್ಲಿ ನಡೆಯಿತು. ಈಗ ಕಾಂಗ್ರೆಸ್ ಸರಕಾರ ಬಂದಿರುವುದರಿಂದ ಹಿಜಾಬ್ ಹಲಾಲ್ ಮತ್ತು ಅಜಾನ್ ಇದರ ಮೇಲಿನ ಕ್ರಮ ನಿಲ್ಲಿಸಲಾಗುವುದು. ಕಾಂಗ್ರೆಸ್ ಅಧಿಕಾರದಲ್ಲಿ ಮತಾಂಧದಿಂದ ಹಿಂದೂಗಳ ಮೇಲಿನ ಹೆಚ್ಚಿನ ದೌರ್ಜನ್ಯ ನಿರಾಕರಿಸಲಾಗದು.

ವಿಧಾನಸಭಾ ಚುನಾವಣೆಯ ಘೋಷಣಾ ಪತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಜರಂಗದಳ ಮತ್ತು ಪಿಎಫ್ಐ ನಿಷೇಧಿಸಲಾಗುವುದು ಎಂದು ಹೇಳಿದೆ. ಕಾಂಗ್ರೆಸ್ಸಿನ ಗೆಲುವಿನಿಂದ ಬಜರಂಗದಳದ ಸಹಿತ ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ತೂಗು ಕತ್ತಿ ಇರುವುದು, ಕಾರಣ ಮುಸಲ್ಮಾನರ ಒಟ್ಟು ಮತಕ್ಕಾಗಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಹುದು. ೨೦೦೬ ರಿಂದ ೨೦೧೭ ರ ವರೆಗೆ ಕರ್ನಾಟಕದಲ್ಲಿ ಭಾಜಪದ ಕಾರ್ಯಕರ್ತರು ಮತ್ತು ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಹೀಗೆ ಒಟ್ಟು ೨೪ ಜನರ ಹತ್ಯೆ ನಡೆದಿದೆ. ಫೆಬ್ರುವರಿ ೨೦೨೨ ರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಯುವ ಶಾಖೆ ಭಜರಂಗದಳದ ಕಾರ್ಯಕರ್ತ ಹರ್ಷ (೨೬ ವರ್ಷ) ಇವರ ಹತ್ಯೆ ಮತಾಂಧರಿಂದ ನಡೆಯಿತು. ಕಳೆದ ೬೦ ವರ್ಷಗಳಲ್ಲಿ ಅನೇಕ ಹಿಂದುತ್ವನಿಷ್ಠರ ಹತ್ಯೆ ನಡೆದಿದೆ, ಆದರೆ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಈ ಪ್ರಕರಣಗಳನ್ನು ಗಾಂಭೀರ್ಯತೆಯಿಂದ ತನಿಖೆ ನಡೆಸದೇ ಇರುವುದರಿಂದ ಅನೇಕ ಅಪರಾಧಿಗಳು ಬಿಡುಗಡೆಗೊಂಡರು.

ಆದ್ದರಿಂದ ಇನ್ನು ಮುಂದೆ ಮತಾಂತರದಿಂದ ಹಿಂದುತ್ವನಿಷ್ಠರ ಮೇಲಿನ ದಾಳಿಗಳು ಮತ್ತು ಅವರ ಹತ್ಯೆ ನಡೆಯುವ ಪ್ರಯತ್ನ ನಡೆದರೆ ಮುಸಲ್ಮಾನರನ್ನು ಓಲೈಸುವ ಕಾಂಗ್ರೆಸ್ ಪಕ್ಷ ಹಿಂದುತ್ವನಿಷ್ಠರಿಗೆ ನ್ಯಾಯ ನೀಡುವುದೇ ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ಬರುವ ಸಮಯ ಇದು ಹಿಂದುಗಳಿಗಾಗಿ ಪರೀಕ್ಷೆಯ ಸಮಯವಾಗಿದ್ದು ಅವರ ಪರಿಸ್ಥಿತಿ ತೂಗು ಕತ್ತಿಯಂತಿದ್ದರೇ ಆಶ್ಚರ್ಯವೇನು ಇಲ್ಲ.