` ಮುಸಲ್ಮಾನರ ವಿಷಯದಲ್ಲಿ ಇಷ್ಟು ದ್ವೇಷವಿದ್ದರೆ, ಎದುರು-ಬದುರು ಹೋರಾಡಿ’ (ಅಂತೆ) – ಮೌಲಾನಾ ತೌಕೀರ ರಝಾ

  • `ಇತ್ತೆಹಾದೆ ಮಿಲ್ಲತ್ ಕೌನ್ಸಿಲ್’ ಮುಖಂಡ ಮೌಲಾನಾ ತೌಕೀರ ರಝಾ ಇವರ ಪ್ರಚೋದನಾತ್ಮಕ ಹೇಳಿಕೆ

  • ಭಾರತವನ್ನು ಹಿಂದೂ ರಾಷ್ಟ್ರ ಮಾಡುವಷ್ಟು ಧೈರ್ಯ ಯಾರಲ್ಲಿಯೂ ಇಲ್ಲವೆಂದು ಹೇಳಿಕೆ

ಮೌಲಾನಾ ತೌಕೀರ ರಝಾ

ಬರೇಲಿ(ಉತ್ತರಪ್ರದೇಶ)- ಇಲ್ಲಿಯ ಸ್ಥಳೀಯ ಸ್ವರಾಜ್ಯ ಸಂಸ್ಥೆಯ ಚುನಾವಣೆಯ ಪ್ರಚಾರದ ಸಮಯದಲ್ಲಿ `ಇತ್ತೆಹಾದೆ ಮಿಲ್ಲತ್ ಕೌನ್ಸಿಲ್’ ಮುಖಂಡ ಮೌಲಾನಾ ತೌಕಿರ ರಝಾ ಇವರು ಕುಖ್ಯಾತ ಗೂಂಡಾ ಅತಿಕ ಅಹ್ಮದನ ಹತ್ಯೆಯ, ಹಾಗೂ ಸಮಾಜವಾದಿ ಪಕ್ಷದ ಶಾಸಕ ಆಝಂ ಖಾನ ಇವರ ಮೇಲಿನ ಅತ್ಯಾಚಾರಗಳ ಸೇಡನ್ನು ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ. (ಈ ರೀತಿ ಹೇಳಿಕೆ ನೀಡಿದ್ದರೂ ಭಾರತದಲ್ಲಿರುವ ತಥಾಕಥಿತ ಪ್ರಜಾಪ್ರಭುತ್ವ ಪ್ರೇಮಿ ಮತ್ತು ಕಾನೂನು ಪ್ರೇಮಿ ರಾಜಕೀಯ ಪಕ್ಷಗಳು ಮಾತ್ರ ಸುಮ್ಮನಿವೆಯೆನ್ನುವುದನ್ನು ಗಮನದಲ್ಲಿಡಿ – ಸಂಪಾದಕರು) ಇಷ್ಟೇ ಅಲ್ಲ, `ಯಾರಲ್ಲಿಯೂ ಭಾರತವನ್ನು ಹಿಂದೂ ರಾಷ್ಟ್ರ ಮಾಡುವಷ್ಟು ಧೈರ್ಯವಿಲ್ಲ. ಮುಸಲ್ಮಾನರ ವಿಷಯದಲ್ಲಿ ಇಷ್ಟು ದ್ವೇಷವಿದ್ದರೆ, ಎದುರು-ಬದುರು ಹೋರಾಡೋಣ’ ಎನ್ನುವ ಪ್ರಚೋದನಕಾರಿ ಕರೆ ನೀಡಿದ್ದಾರೆ.

ಮೌಲಾನಾ ರಝಾ ಮಾತು ಮುಂದುವರಿಸಿ ಈಗ ಯಾವ ಸ್ಥಿತಿಯಿದೆಯೋ, ಅದು ಮುಂದೆ ಮತ್ತಷ್ಟು ಕೆಟ್ಟದಾಗಲಿದೆ. ನಿಮ್ಮ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸೇಡು ತೀರಿಸಿಕೊಳ್ಳಿರಿ. ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಇಂತಹ ಪೊಳ್ಳು ಬೆದರಿಕೆಗಳನ್ನು ನೀಡಿ ರಝಾರಂತಹ ಮೌಲಾನಾರು ಮುಸಲ್ಮಾನರ ನಾಯಕನಾಗಲು ನೋಡುತ್ತಿದ್ದಾರೆ. ಇಂತಹವರ ಮೇಲೆ ಉತ್ತರಪ್ರದೇಶ ಸರಕಾರ ಕ್ರಮ ಜರುಗಿಸಿ ಅವರನ್ನು ಆಜನ್ಮ ಕಾರಾಗೃಹಕ್ಕೆ ಅಟ್ಟಬೇಕು
  • ಅಕ್ಬರುದ್ದೀನ ಓವೈಸಿ ‘ಪೊಲೀಸರನ್ನು  15 ನಿಮಿಷಗಳ ಕಾಲ ಪಕ್ಕಕ್ಕೆ ಸರಿಸಿರಿ, 75 ಕೋಟಿ ಹಿಂದೂಗಳಿಗೆ ತಕ್ಕ ಪಾಠ ಕಲಿಸುತ್ತೇವೆ’, ಎನ್ನುತ್ತಾರೆ, ಅದೇ ರೀತಿ ಮೌಲಾನಾ ಕೂಡ ಹಿಂದೂಗಳೊಂದಿಗೆ ಹೊಡೆದಾಡುವ ಪ್ರಚೋದನಾತ್ಮಕ ಕರೆ ನೀಡುತ್ತಾರೆ. ಇದನ್ನು ಗಮನಿಸಿದಾಗ,` ಇಂತಹ ಮುಸಲ್ಮಾನರ ಮನಸ್ಸಿನಲ್ಲಿ ಏನು ನಡೆದಿದೆ, ಎನ್ನುವುದನ್ನು ಹಿಂದೂಗಳು ಗಮನಕ್ಕೆ ತೆಗೆದುಕೊಂಡು ಜಾಗರೂಕರಾಗಿರಬೇಕಾಗಿದೆ.