ಬೆಂಗಳೂರಿನಲ್ಲಿ ಚುನಾವಣಾ ಆಯೋಗವು ಬಜರಂಗದಳ ಮತ್ತು ವಿಹಿಂಪಗೆ ಹನುಮಾನ್ ಚಾಲೀಸಾ ಪಠಿಸುವುದನ್ನು ತಡೆಯಿತು !

ಸೆಕ್ಷನ್ ೧೪೪ ಕಾರಣ ನೀಡಿದರು!

ಬೆಂಗಳೂರು – ಹನುಮಾನ್ ಚಾಲೀಸಾ ಪಠಿಸಲು ಜಮಾಯಿಸಿದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರನ್ನು ತಡೆಯಲಾಯಿತು. ರಾಜ್ಯದಲ್ಲಿ ೧೪೪ ಸೆಕ್ಷನ್ ಜಾರಿಯಿಂದಾಗಿ ಚುನಾವಣಾ ಆಯೋಗವು ಅವರನ್ನು ತಡೆಯಿತು. ಮೇ ೮ ರಂದು ಈ ಸಂಘಟನೆಗಳು ಮೇ ೯ ರಂದು ದೇಶದ ಪ್ರಮುಖ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದವು. ಈ ಸಂಘಟನೆಗಳು ಅದಕ್ಕೆ ‘ಹನುಮಂತ್ ಶಕ್ತಿ ಜಾಗರಣ ಅಭಿಯಾನ’ ಎಂದು ಹೆಸರಿಟ್ಟಿವೆ. ರಾಜ್ಯ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಾಗ ಭಜರಂಗದಳವನ್ನು ನಿಷೇಧಿಸುವ ಭರವಸೆ ನೀಡಿದ ನಂತರ ಕಾಂಗ್ರೆಸ್ ಗೆ ಬಜರಂಗದಳ, ವಿಹಿಂಪ ಮತ್ತು ಭಾಜಪ ವಿರೋಧಿಸುತ್ತಿದೆ.