ಮುಂಬಯಿ ಪೊಲೀಸರಿಂದ ಭದ್ರತೆ !
ಮುಂಬಯಿ – ‘ದಿ ಕೇರಳ ಸ್ಟೋರಿ’ ಚಿತ್ರದ ‘ಕ್ರೂ’ ಸದಸ್ಯನಿಗೆ (‘ಕ್ರೂ’ ಸದಸ್ಯ ಎಂದರೆ ಒಟ್ಟಿಗೆ ಕೆಲಸ ಮಾಡುವ ಸದಸ್ಯರಲ್ಲಿ ಒಬ್ಬರು) ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಬಂದಿದೆ. ಈ ಬಗ್ಗೆ ನಿರ್ದೇಶಕ ಸುದೀಪ್ತೋ ಸೇನ್ ಮುಂಬಯಿ ಪೊಲೀಸರಿಗೆ ದೂರು ನೀಡಿದ್ದಾರೆ. “ನೀವು ಚಿತ್ರದ ಕಥೆಯನ್ನು ತೋರಿಸಿ ತಪ್ಪು ಮಾಡಿದ್ದೀರಿ. ಹೀಗಾಗಿ ಒಬ್ಬರೇ ಮನೆಯಿಂದ ಹೊರಗೆ ಹೋಗಬೇಡಿ’ ಎಂದು ಕ್ರೂ ಸದಸ್ಯನಿಗೆ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆಯ ನಂತರ, ಮುಂಬಯಿ ಪೊಲೀಸರು ಆ ಸದಸ್ಯನಿಗೆ ಭದ್ರತೆ ನೀಡಿದ್ದಾರೆ; ಆದರೆ, ಯಾವುದೇ ಲಿಖಿತ ದೂರು ಬಂದಿಲ್ಲದ ಕಾರಣ ಅಪರಿಚಿತ ಬೆದರಿಕೆ ಹಾಕಿದವರ ವಿರುದ್ಧ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. (ಅಪರಾಧ ನಡೆದಿರುವಂತೆ ಕಂಡುಬಂದಾಗ, ಪೊಲೀಸರೇ ಏಕೆ ಅಪರಾಧವನ್ನು ದಾಖಲಿಸಿಕೊಂಡು ತನಿಖೆ ನಡೆಸುವುದಿಲ್ಲ ? ಯಾರಾದರೂ ಲಿಖಿತ ದೂರು ಸಲ್ಲಿಸಲು ಏಕೆ ಕಾಯಬೇಕು ? – ಸಂಪಾದಕರು)
‘The Kerala Story’ crew member receives threat, Mumbai Police provides security
Read @ANI Story | https://t.co/WuzYXtyC5I#TheKeralaStory #MumbaiPolice pic.twitter.com/FpuJYo63Ke
— ANI Digital (@ani_digital) May 9, 2023
ಸಂಪಾದಕೀಯ ನಿಲುವುಸತ್ಯಕ್ಕೆ ವಿರೋಧವಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುವ ಘಟನೆ ! ಸತ್ಯವನ್ನು ತೋರಿಸುವವರು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ ಎಂಬುದನ್ನು ಗಮನಿಸಬೇಕು! |