ಕೇರಳದ ಅನಘಾ ಎಂಬ ಯುವತಿಯ ಅನುಭವ!
ತಿರುವನಂತಪುರಂ (ಕೇರಳ) – ಕೇರಳದಲ್ಲಿ ‘ಲವ್ ಜಿಹಾದ್’ ನ ಭೀಕರತೆ ಮತ್ತು ಜಿಹಾದಿ ಭಯೋತ್ಪಾದನೆಯ ಪಿತೂರಿಯನ್ನು ಬಯಲಿಗೆಳೆದ ‘ದಿ ಕೇರಳ ಸ್ಟೋರಿ’ ಚಿತ್ರದ ನಂತರ ಹಲವು ಸಂತ್ರಸ್ತ ಯುವತಿಯರು ಮುಂದೆ ಬಂದು ತಮ್ಮ ಘಟನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ಪೈಕಿ ಕೇರಳದ ತ್ರಿಶೂರ್‌ನ ಅನಘಾ ಎಂಬ ಯುವತಿಯೂ ಮಾಹಿತಿ ನೀಡಿದ್ದಾರೆ. ಆಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
‘ರಿಪಬ್ಲಿಕ್ ಇಂಡಿಯಾ’ ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅನಘಾಳು,
ನಾನು ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಿ. ನನ್ನ ಹೆತ್ತವರನ್ನು ಹೊರತುಪಡಿಸಿ ನನ್ನ ಕುಟುಂಬದಲ್ಲಿ 2 ಸಹೋದರಿಯರಿದ್ದಾರೆ. ನಾನು ಫಿಸಿಯೋಥೆರಪಿಸ್ಟ್ ಮತ್ತು ‘ಆರ್ಶಾ ವಿದ್ಯಾ ಸಮಾಜ’ದ ಪೂರ್ಣಾವಧಿ ಕಾರ್ಯಕರ್ತಯಾಗಿದ್ದೇನೆ. ಮೇ 5 ರಂದು ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿದೆ. ಸಿನಿಮಾ ನೋಡಿದ ಮೇಲೆ ಅದರ ಕಥೆ ನನ್ನ ಬದುಕಿನಂತೆಯೇ ಇದೆ ಅನ್ನಿಸಿತು. 2020 ರಲ್ಲಿ ಆರ್ಶಾ ವಿದ್ಯಾ ಸಮಾಜಕ್ಕೆ ಬರುವ ಮೊದಲು, ನಾನು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದೆ. ಈ ಸಮಯದಲ್ಲಿ ನಾನು ಮತಾಂತರಗೊಂಡೆ. ಆ ನಂತರ ನಾನು ಆರ್ಶಾ ವಿದ್ಯಾ ಸಮಾಜಕ್ಕೆ ಸೇರಿಕೊಂಡೆ.
ಹಿಂದೂ ಧರ್ಮದ ಬಗ್ಗೆ ಮುಸ್ಲಿಂ ಹುಡುಗಿಯ ಪ್ರಶ್ನೆಗಳಿಗೆ ನನಗೆ ಉತ್ತರಿಸಲು ಆಗಲಿಲ್ಲ !
ಆ ಸಮಯದಲ್ಲಿ ನಾನು ನನ್ನ ಧರ್ಮ, ನೈಜ ಇತಿಹಾಸ ಮತ್ತು ದೇಶದ ಪ್ರಸ್ತುತ ವಿದ್ಯಮಾನಗಳನ್ನು ನಿರ್ಲಕ್ಷಿಸಿ ಇಸ್ಲಾಂಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲು ಪ್ರಾರಂಭಿಸಿದೆ. ಇಸ್ಲಾಂ ಬಗ್ಗೆ ಓದಲು ಆರಂಭಿಸಿದೆ. ನನ್ನ ಕಾಲೇಜು ದಿನಗಳಲ್ಲಿ ನಾನು ಎರ್ನಾಕುಲಂನ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದೆ. ನನ್ನ ಕೋಣೆಯಲ್ಲಿ ಉಳಿದುಕೊಂಡಿದ್ದ ಮುಸ್ಲಿಂ ಹುಡುಗಿಯೊಬ್ಬಳು ನನಗೆ ಹಿಂದೂ ಧರ್ಮದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಳು. ನನ್ನ ಧರ್ಮದ ಬಗ್ಗೆ ಪ್ರಶ್ನೆ ಮೂಡಿಸುತ್ತಿದ್ದರು. ಆ ಸಮಯದಲ್ಲಿ ನಾನು ಅವಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ನನ್ನ ಧರ್ಮದ ಬಗ್ಗೆ ಸರಿಯಾದ ಮಾರ್ಗದರ್ಶನ ಸಿಗದ ಕಾರಣ ಸುಮ್ಮನಿರುತ್ತಿದ್ದೆ.
ನನ್ನ ತಂದೆ ತಾಯಿಗೆ ಧರ್ಮದ ಜ್ಞಾನ ಇರಲಿಲ್ಲ !
ನಾನು ಈ ಪ್ರಶ್ನೆಗಳನ್ನು ನನ್ನ ಹೆತ್ತವರೊಂದಿಗೆ ಚರ್ಚಿಸಿದ್ದೇನೆ; ಆದರೆ ಅವರು ನನಗೆ ಯಾವುದೇ ತೃಪ್ತಿಕರ ಉತ್ತರವನ್ನು ನೀಡಲಿಲ್ಲ. ಇದರ ನಂತರ ನಾನು ಸಾಮಾಜಿಕ ಮಾಧ್ಯಮದಲ್ಲಿ ಹುಡುಕಲು ಪ್ರಾರಂಭಿಸಿದೆ; ಆದರೆ ಅಲ್ಲಿಯೂ ನನಗೆ ತೃಪ್ತಿಕರವಾದದ್ದೇನೂ ಕಾಣಲಿಲ್ಲ. ಆಗ ನನಗೆ ಹಿಂದೂ ಧರ್ಮದ ಮಾನ್ಯತೆಯ ಬಗ್ಗೆ ಅನುಮಾನ ಮೂಡತೊಡಗಿತು. ಮತ್ತೊಂದೆಡೆ ನಾನು ನನ್ನ ಕೋಣೆಯಲ್ಲಿದ್ದ ಮುಸ್ಲಿಂ ಹುಡುಗಿಯನ್ನು ಇಸ್ಲಾಂ ಧರ್ಮದ ಬಗ್ಗೆ ಕೇಳಿದಾಗ, ಅವಳು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದಳು; ಏಕೆಂದರೆ ಆಕೆಗೆ ಬಾಲ್ಯದಿಂದಲೇ ಇಸ್ಲಾಂ ಧರ್ಮವನ್ನು ಕಲಿಸಲಾಗಿತ್ತು. ಅವಳು ಹಿಂದೂ ಧರ್ಮವನ್ನು ಟೀಕಿಸಿದಳು; ಆದರೆ ಅವರ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿರಲಿಲ್ಲ. (ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಅಗತ್ಯವನ್ನು ಹಿಂದೂಗಳ ಸಂಘಟನೆಗಳು ಗಮನಿಸಬೇಕು ! – ಸಂಪಾದಕರು)
ನನಗೆ ಝಾಕಿರ್ ಹುಸೇನ್ ಅವರ ವಿಡಿಯೋ ತೋರಿಸಿ ಮತಾಂತರಕ್ಕೆ ಒತ್ತಾಯಿಸಿದರು !
ಮುಸ್ಲಿಂ ಯುವತಿಯೊಬ್ಬಳು ‘ಅಲ್ಲಾ ಒಬ್ಬನೇ ದೇವರು’ ಎಂದು ಹೇಳಿದ್ದಳು. ‘ದಿ ಕೇರಳ ಸ್ಟೋರಿ’ ಚಿತ್ರದ ಮುಖ್ಯ ಪಾತ್ರದ ಬಗ್ಗೆ ಏನಾಗುತ್ತದೆಯೋ ಅದು ನಿಜ ಜೀವನದಲ್ಲಿ ನನಗೆ ಸಂಭವಿಸಿದೆ. ಕ್ರಮೇಣ ನನ್ನ ಮುಸ್ಲಿಂ ಸ್ನೇಹಿತ ನನ್ನ ಮೇಲೆ ಪ್ರಭಾವ ಬೀರತೊಡಗಿದ. ಅವಳ ಮಾತು ನನಗೆ ಸರಿ ಅನ್ನಿಸಿತು. ಹಾಗಾಗಿ ನಾನು ಅವಳಿಂದ ಇಸ್ಲಾಂ ಕಲಿಯಲು ಪ್ರಾರಂಭಿಸಿದೆ. ಅವರು ನನಗೆ ಅನುವಾದಿತ ಕುರಾನ್ ಅನ್ನು ಸಹ ನೀಡಿದಳು, ಮತ್ತು ಹೆಚ್ಚಿನ ಅಧ್ಯಯನಕ್ಕಾಗಿ ನನಗೆ ಜಾಕಿರ್ ನಾಯಿಕ್, ಎಂ.ಎಂ. ಅಕ್ಬರ್ ಮತ್ತು ಕೆಲವರ ವಿಡಿಯೋಗಳನ್ನು ಸಹ ತೋರಿಸಲಾಯಿತು. ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪದೇ ಪದೇ ಕೇಳುತ್ತಿದ್ದಳು. ಇಡೀ ದೇಹವನ್ನು ಮುಚ್ಚುವ ಬಟ್ಟೆಗಳನ್ನು ಧರಿಸಲು ಸಲಹೆ ನೀಡಿದರು ಮತ್ತು ‘ನೀವು ನಿಮ್ಮ ದೇಹವನ್ನು ತೋರಿಸಿದರೆ ಅಲ್ಲಾಹನು ನಿಮ್ಮನ್ನು ನರಕಕ್ಕೆ ಎಸೆಯುತ್ತಾನೆ. ಬುರ್ಖಾದಲ್ಲಿರುವ ಮಹಿಳೆಯರಿಗೆ ಅಲ್ಲಾ ಯಾವಾಗಲೂ ಸಹಾಯ ಮಾಡುತ್ತಾನೆ ಎಂದು ಹೇಳಿದಳು.
‘जो पर्दा नहीं करते उसे अल्लाह जहन्नुम की आग में डाल देते हैं’: जिसे मुस्लिम रूममेट ने पहनाया ‘बुर्का’, उसने कहा मेरा इस्लामी धर्मांतरण भी ‘द केरल स्टोरी’ जैसी#KeralaStory https://t.co/hqIwNol8o3
— ऑपइंडिया (@OpIndia_in) May 8, 2023
ಶ್ರುತಿ ಎಂಬ ಹುಡುಗಿಯೂ ಅದೇ ರೀತಿ ಮತಾಂತರಗೊಂಡಳು !
ಕೇರಳದ ಶೃತಿ ಎಂಬ ಯುವತಿ ಕೂಡ ಇದೇ ರೀತಿ ಮತಾಂತರಗೊಂಡಿದ್ದಳು. ಆಕೆ, ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ ಮುಸ್ಲಿಂ ಸ್ನೇಹಿತನೊಬ್ಬಳು ತನಗೆ ಬ್ರೈನ್ ವಾಷ್ ಮಾಡಿ ಮತಾಂತರ ಮಾಡಿದರು. ಮತಾಂತರದ ನಂತರ ಆಕೆಗೆ ರೆಹಮತ್ ಎಂಬ ಹೆಸರನ್ನು ನೀಡಲಾಯಿತು ಎಂದು ಹೇಳಿದಳು.