ರಾಜಸ್ಥಾನದಲ್ಲಿ ಸೈನ್ಯದ `ಮಿಗ್-೨೧’ ವಿಮಾನ ಕುಸಿದಿದೆ – ೨ ಮಹಿಳೆಯರ ಸಾವು

ಮಿಗ್-೨೧

ಜೋಧಪುರ – ಭಾರತೀಯ ವಾಯುದಳದ `ಮಿಗ್-೨೧’ ವಿಮಾನವು ರಾಜಸ್ಥಾನದಲ್ಲಿನ ಒಂದು ಮನೆಯ ಮೇಲೆ ಕುಸಿದಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ಮನೆಯಲ್ಲಿದ್ದ ೨ ಮಹಿಳೆಯರು ಸಾವನ್ನಪ್ಪಿದ್ದು ಒಬ್ಬರು ಗಾಯಗೊಂಡಿದ್ದಾರೆ. ಹನುಮಾನಗಡ ಊರಿನಲ್ಲಿರುವ ಬಹಲೋಲನಗರದಲ್ಲಿ ಈ ದುರ್ಘಟನೆ ನಡೆದಿದೆ. ವಿಮಾನ ಚಾಲಕ ಹಾಗೂ ಸಹಚಾಲಕರು ಸಮಯಕ್ಕೆ ವಿಮಾನದಿಂದ ಹಾರಿದ್ದರಿಂದ ಅವರ ಪ್ರಾಣ ಉಳಿದಿದೆ. `ಈ ಅಪಘಾತದ ತನಿಖೆ ನಡೆಸಲಾಗುವುದು’ ಎಂದು ಭಾರತೀಯ ವಾಯುದಳವು ಹೇಳಿದೆ.

ಸಂಪಾದಕೀಯ ನಿಲುವು

  • ವಿಶ್ವದಾಖಲೆಯಾಗುವಷ್ಟು ಪ್ರಮಾಣದಲ್ಲಿ `ಮಿಗ್-೨೧’ ವಿಮಾನಗಳ ಅಪಘಾತಗಳಾಗುತ್ತಿರುವಾಗಲೂ ಈ ವಿಮಾನಗಳನ್ನು ಇನ್ನೂ ಏಕೆ ಅಸಮ್ಮತಿಸಲಿಲ್ಲ ?
  • ಇಂತಹ ದೋಷ ಪೂರಿತ ವಿಮಾನಗಳು ಹೇಗೆ ಸಕ್ಷಮ ಯುದ್ಧಸನ್ನದ್ಧತೆಯ ಲಕ್ಷಣವಾಗಬಹುದು ?