ಲಕ್ಷ್ಮಣಪುರಿ (ಉತ್ತರಪ್ರದೇಶ) – ಕೆಲವು ದಿನಗಳ ಹಿಂದೆ ಹತ್ಯೆಯಾಗಿದ್ದ ಕುಖ್ಯಾತ ಗೊಂಡಾ ಅತಿಕ ಅಹಮದನ ಪತ್ನಿ ಶಾಯಿಸ್ತಾ ಪರವೀನಳನ್ನು ಉತ್ತರಪ್ರದೇಶ ಸರಕಾರವು ಮಾಫಿಯಾ ಎಂದು ಘೋಷಿಸಿದೆ. ರಾಜೂ ಪಾಲನ ಹತ್ಯೆಯ ಪ್ರಕರಣದಲ್ಲಿ ಶಾಯಿಸ್ತಾ ಪರವೀನಳು ಆರೋಪಿಯಾಗಿದ್ದು ಈಗ ಪರಾರಿಯಾಗಿದ್ದಾಳೆ. ಪೊಲೀಸರು `ಶಾಯಿಸ್ತಾ ಪರವೀನಳು ತನ್ನೊಂದಿಗೆ ಶೂಟರ್ಸ್ ಗಳನ್ನು ಒಯ್ಯುತ್ತಾಳೆ. ಇದರೊಂದಿಗೆ ಅತಿಕ ಅಹಮದ ಹಾಗೂ ಹತ್ಯೆಗೊಳಗಾದ ಆತನ ತಮ್ಮ ಅಸದನ ಜೊತೆಗಾರರನ್ನು ಸೇರಿಸಿ ಅವಳು ಒಂದು ಗುಂಪು ರಚಿಸಿದ್ದಾಳೆ ಎಂದೂ ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಪರವೀನಳು ಅಸದನ ಮಿತ್ರನಾದ ಆತಿನ ಜಫರನ ಮನೆಯಲ್ಲಿ ತಂಗಿದ್ದಳು. ಜಫರನು ಆಕೆಯೊಂದಿಗೆ ಅವಳೊಂದಿಗೆ ಬಂದಂತಹ ಶೂಟರ್ಸ್ ಗಳಿಗೂ ಆಶ್ರಯ ನೀಡಿದ್ದನು. ಈ ಬಗ್ಗೆ ಮಾಹಿತಿ ದೊರೆಯುತ್ತಲೇ ಪೊಲೀಸರು ಅಲ್ಲಿ ದಾಳಿ ಮಾಡಿದರು; ಆದರೆ ಅದಕ್ಕೂ ಮೊದಲೇ ಪರವೀನಳು ಅಲ್ಲಿಂದ ಪರಾರಿಯಾಗಿದ್ದಳು’ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಜಫರನನ್ನು ಮೇ ೨ ರಂದು ಬಂಧಿಸಿದ್ದಾರೆ.
Atiq Ahmed’s fugitive wife Shaista Parveen declared ‘mafia’ by Uttar Pradesh police, reveals fresh FIR: Full detailshttps://t.co/boSrDoF38k
— OpIndia.com (@OpIndia_com) May 8, 2023
ಸಂಪಾದಕೀಯ ನಿಲುವುಇಷ್ಟು ದಿನಗಳಾದರೂ ಓರ್ವ ಮಹಿಳಾ ಮಾಫಿಯಾಳನ್ನು ಹಿಡಿಯಲು ಸಾಧ್ಯವಾಗದಿರುವುದು ಪೊಲೀಸರಿಗೆ ಲಜ್ಜಾಸ್ಪದವಾಗಿದೆ ! |