ಪಿ.ಎಫ್.ಐ.ನ 55 ಬೆಂಬಲಿಗರ ಬಂಧನ

  • ಉತ್ತರಪ್ರದೇಶದಲ್ಲಿ 30 ಜಿಲ್ಲೆಗಳಲ್ಲಿ ಉಗ್ರ ನಿಗ್ರಹ ದಳದಿಂದ ದಾಳಿ

  • ಸಮಾಜವಾದಿ ಪಕ್ಷದ ನಾಯಕ ಅಬ್ದುಲ್ ಖಾಲಿಕನ ಬಂಧನ

ಮೇರಠ (ಉತ್ತರಪ್ರದೇಶ) – ಉತ್ತರಪ್ರದೇಶದ ಉಗ್ರ ನಿಗ್ರಹ ದಳವು ರಾಜ್ಯದ 30 ಜಿಲ್ಲೆಗಳಲ್ಲಿ ನಡೆಸಿದ ದಾಳಿಯಲ್ಲಿ ಪಾಪ್ಯುಲರ ಫ್ರಂಟ ಆಫ್ ಇಂಡಿಯಾ (ಪಿ.ಎಫ್.ಐ.) ಈ ನಿಷೇಧಿತ ಜಿಹಾದಿ ಸಂಘಟನೆಯ 55 ಬೆಂಬಲಿಗರನ್ನು ಬಂಧಿಸಿದೆ. ಮೇರಠನಲ್ಲಿ ಸಮಾಜವಾದಿ ಪಕ್ಷದ ನಾಯಕ ಅಬ್ದುಲ ಖಾಲಿಕ ಅನ್ಸಾರಿಯನ್ನು ಕೂಡ ಬಂಧಿಸಲಾಗಿದೆ. ಅವನು ಬುಲಂದಶಹರದ ಅಧ್ಯಕ್ಷನಾಗಿದ್ದಾನೆ.

1. ಉಗ್ರ ನಿಗ್ರಹ ದಳವು ಲಕ್ಷ್ಮಣಪುರಿ, ಮೇರಠ, ಮುರಾದಾಬಾದ, ವಾರಣಾಸಿ, ಆಜಂಗಡ, ಸಹಾರನಪುರ, ಗಾಜಿಯಾಬಾದ ಸಹಿತ ಇನ್ನಿತರೆ ನಗರಗಳಲ್ಲಿ ದಾಳಿ ನಡೆಸಿತು.

2. ಈ ಮೊದಲು ಎಪ್ರಿಲ್ 24 ರಂದು ರಾಷ್ಟ್ರೀಯ ತನಿಖಾ ದಳವು 4 ರಾಜ್ಯಗಳಲ್ಲಿ ಇಂತಹ ದಾಳಿ ನಡೆಸಿತ್ತು. ಆ ಸಮಯದಲ್ಲಿ ಪಿ.ಎಫ್.ಐ. ಜಿಹಾದಿ ನಾಯಕ ಮತ್ತು ಕಾರ್ಯಕರ್ತರನ್ನು ಬಂಧಿಸಿತ್ತು. ಈ ಜಿಹಾದಿಗಳ ವಿಚಾರಣೆಯಲ್ಲಿ ಯಾರ ಹೆಸರುಗಳು ಬೆಳಕಿಗೆ ಬರುತ್ತಿದೆಯೋ, ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ.

3. ಪಿ.ಎಫ್.ಐ.ನ ನಾಯಕನನ್ನು ಬಂಧಿಸಿದ ಬಳಿಕ ಈ ಜಿಹಾದಿ ಸಂಘಟನೆಯ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ರಹಸ್ಯವಾಗಿ ಸಂಘಟಿತರಾಗಿ ಪಿಎಫ್.ಐ. ಸಂಘಟನೆಯನ್ನು ಪುನಃ ನಿರ್ಮಾಣ ಮಾಡುವ ಪ್ರಯತ್ನದಲ್ಲಿದ್ದಾರೆ ಎನ್ನುವುದು ತಿಳಿದು ಬಂದಿದೆ.

ಸಂಪಾದಕೀಯ ನಿಲುವು

ಕುಖ್ಯಾತ ಗೂಂಡಾಗಳು ಮತ್ತು ಜಿಹಾದಿಗಳ ಆಶ್ರಯದಾತ ಆಗಿರುವ ಸಮಾಜವಾದಿ ಪಕ್ಷವನ್ನೂ ನಿರ್ಬಂಧಿಸುವ ಆವಶ್ಯಕತೆಯಿದೆ !