‘ಸಮಯ ಬಂದಾಗ ಭಾರತಕ್ಕೆ ಯಾವಾಗಲೂ ನೆನಪಿಟ್ಟುಕೊಳ್ಳುವಂತೆ ಉತ್ತರ ನೀಡುತ್ತಾರಂತೆ !’ – ಬಿಲಾವಟ ಭುಟ್ಟೋ

ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಟ ಭುಟ್ಟೋ ಅವರ ಟೊಳ್ಳು ದರ್ಪ !

ನವ ದೆಹಲಿ – ಜಗತ್ತಿನ ಯಾವುದಾದರೊಂದು ಕಾರ್ಯಕ್ರಮವನ್ನು ಶ್ರೀನಗರದಲ್ಲಿ ಆಯೋಜಿಸಿರುವುದು ಭಾರತದ ಅಹಂಕಾರವನ್ನು ತೋರಿಸುತ್ತದೆ. ಸಮಯ ಬಂದಾಗ ನಾವು ಭಾರತಕ್ಕೆ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವಂತಹ ಪಾಠಕಲಿಸುತ್ತೇವೆ, ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ದರ್ಪದಿಂದ ಹೇಳಿದರು. ಜಿ-೨೦ ಯ ಸಭೆಯು ಶ್ರೀನಗರದಲ್ಲಿ ಆಯೋಜಿಸಲಾಗಿದೆ. ಅದಕ್ಕಾಗಿ ಭುಟ್ಟೋ ಈ ಹೇಳಿಕೆ ನೀಡಿದ್ದಾರೆ. ಇದೀಗ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಈ ಹೇಳಿಕೆಗೆ ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದೆ. ಸಚಿವಾಲಯದ ವಕ್ತಾರರು, ವಿದೇಶಾಂಗ ಸಚಿವರ ಹೇಳಿಕೆಯನ್ನು ಬೆದರಿಕೆಯಾಗಿ ನೋಡುವುದು ಬೇಜವಾಬ್ದಾರಿಯಾಗುತ್ತದೆ. ಸೂಕ್ಷ್ಮ ಅಂತಾರಾಷ್ಟ್ರೀಯ ವಿಷಯಗಳ ಕುರಿತು ವರದಿ ಮಾಡುವಾಗ ಪತ್ರಿಕೋದ್ಯಮದ ಮಾನದಂಡಗಳನ್ನು ಗೌರವಿಸಬೇಕು ಎಂದು ಪಾಕಿಸ್ತಾನಿ ಸಚಿವಾಲಯವು ಪತ್ರಕರ್ತರಿಗೆ ಹೇಳಲು ಪ್ರಯತ್ನಿಸಿತು.

ಸಂಪಾದಕೀಯ ನಿಲುವು

  • ಭಾರತಕ್ಕೆ ಉತ್ತರ ನೀಡುವ ಬಗ್ಗೆ ಮಾತನಾಡುವ ಪಾಕಿಸ್ತಾನ ಒಂದು ದೇಶ ಎಂದು ಎಷ್ಟು ದಿನ ಬಲಿಷ್ಠವಾಗಿ ಉಳಿಯುತ್ತದೆ ಎಂಬುದೆ ನಿಜವಾದ ಪ್ರಶ್ನೆ !
  • ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥರು, ಪಾಕಿಸ್ತಾನಕ್ಕೆ ಭಾರತದ ಎದುರು ಹೋರಾಡುವಷ್ಟು ಕ್ಷಮತೆ ಉಳಿದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಇಂತಹ ಹೇಳಿಕೆಗಳನ್ನು ಕೊಟ್ಟರೆ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಆಗುತ್ತದೆ !