ಸರಕಾರದಿಂದ ಭಯೋತ್ಪಾದಕ ಮಹಮದ ಆರಿಫ ಶೇಖನ ಅನಧಿಕೃತ ಮನೆಯ ಧ್ವಂಸ

ಸರಕಾರದಿಂದ ಭಯೋತ್ಪಾದಕ ಮಹಮದ ಆರಿಫ ಶೇಖನ ಅನಧಿಕೃತ ಮನೆಯ ಧ್ವಂಸ

ಶ್ರೀನಗರ – ರಿಯಾಸಿ ಜಿಲ್ಲೆಯ ಬರನಸಾಲನಲ್ಲಿ ಶಿಕ್ಷಕನಾಗಿದ್ದ, ಬಳಿಕ ಭಯೋತ್ಪಾದಕನಾಗಿರುವ ಮಹಮದ ಆರಿಫ್ ಶೇಖನ ಅನಧಿಕೃತ ಮನೆಯನ್ನು ಸರಕಾರ ಧ್ವಂಸಗೊಳಿಸಿದೆ. (ಇಂತಹ ಭಯೋತ್ಪಾದಕನು ವಿದ್ಯಾರ್ಥಿಗಳಿಗೆ ಯಾವ ಪಾಠವನ್ನು ಕಲಿಸುತ್ತಿರಬಹುದು ಎನ್ನುವ ವಿಚಾರವನ್ನು ಮಾಡದಿರುವುದೇ ಸರಿ – ಸಂಪಾದಕರು) ಅವನು ಸರಕಾರಿ ಭೂಮಿಯ ಮೇಲೆ ಮನೆಯನ್ನು ನಿರ್ಮಿಸಿದ್ದನು. (ಸರಕಾರಿ ಭೂಮಿಯ ಮೇಲೆ ಮನೆಯನ್ನು ನಿರ್ಮಾಣ ಮಾಡುವವರೆಗೆ ಸರಕಾರ ಮಲಗಿತ್ತೇ ? – ಸಂಪಾದಕರು)

ಕಟರಾದಲ್ಲಿನ ಕಡಮಾಲನಲ್ಲಿ ನಡೆದ ಬಾಂಬ ಸ್ಫೋಟದಲ್ಲಿ ಹಾಗೂ ಜಮ್ಮೂವಿನ ನರವಾಲದಲ್ಲಿ ನಡೆದ ಬಾಂಬಸ್ಫೋಟದ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿತ್ತು. ಕಡಮಾಲನಲ್ಲಿ ಬಸ್ಸಿನಲ್ಲಿ ನಡೆದ ಬಾಂಬ ಸ್ಫೋಟದಲ್ಲಿ 5 ಜನರು ಮೃತರಾಗಿದ್ದರು, ಹಾಗೆಯೇ ನರವಾಲದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ 9 ಜನರು ಗಾಯಗೊಂಡಿದ್ದರು. ಈ ಬಾಂಬ್ ಸ್ಫೋಟದ ತನಿಖೆಯ ಬಳಿಕ ಮಹಮದ್ ಆರಿಫ್ ಶೇಖನ ಹೆಸರು ಬಯಲಾಗಿತ್ತು. ಅವನನ್ನು ಬಂಧಿಸಿದ ಬಳಿಕ ಶಾಲೆಯ ಆಡಳಿತ ಮಂಡಳಿಯು ಅವನನ್ನು ನೌಕರಿಯಿಂದ ತೆಗೆದು ಹಾಕಿತ್ತು.