ಸಿನೆಮಾಗೆ ವಿರೋಧದಿಂದ ಚಿತ್ರಮಂದಿರದ ಮಾಲೀಕರಿಂದ ಹಿನ್ನಡೆ !
ಕೊಚ್ಚಿ (ಕೇರಳ) – ‘ದಿ ಕೇರಳ ಸ್ಟೋರಿ’ ಸಿನೆಮಾ ಮೇ ೫ ರಂದು ರಾಷ್ಟ್ರಾದ್ಯಂತ ಬಿಡುಗಡೆಯಾದ ನಂತರ ಅದಕ್ಕೆ ಭರ್ಜರಿ ಪ್ರತಿಕ್ರಿ ಸಿಕ್ಕಿದೆ; ಆದರೆ ಕೇರಳದ ಕೊಚ್ಚಿ ನಗರದ ಹಲವು ಚಿತ್ರಮಂದಿರಗಳಲ್ಲಿ ಮಾತ್ರ ಮಾಲೀಕರು ಸಿನೆಮಾವನ್ನು ಪ್ರದರ್ಶಿಸದಿರಲು ನಿರ್ಧರಿಸಿದ್ದಾರೆ. ಕೇರಳದಲ್ಲಿ ಚಿತ್ರಕ್ಕೆ ವಿರೋಧವ್ಯಕ್ತವಾದ ಕಾರಣ ಕೆಲವು ಚಿತ್ರಮಂದಿರಗಳು ಸಿನೆಮಾದ ಪ್ರದರ್ಶನವನ್ನು ರದ್ದುಗೊಳಿಸಿವೆ. ನಗರದ ೫೦ ಸ್ಥಳಗಳಲ್ಲಿ ಸಿನೆಮಾ ಪ್ರದರ್ಶನಗೊಳ್ಳಬೇಕಿತ್ತು; ಆದರೆ ಪ್ರತ್ಯಕ್ಷವಾಗಿ ಸಿನೆಮಾ ೧೭ ಸ್ಥಳಗಳಲ್ಲಿ ಮಾತ್ರ ಪ್ರದರ್ಶನಗೊಂಡಿದೆ.
ನಗರದ ‘ಲುಲು’ ಮಾಲ್‌ನಲ್ಲಿ (ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್) ಪಿವಿಆರ್‌ಗಳು ಮತ್ತು ಒಬೆರಾನ್ ಮಾಲ್ ಮತ್ತು ಸೆಂಟರ್ ಸ್ಕ್ವೇರ್ ಮಾಲ್‌ನಲ್ಲಿರುವ ‘ಸಿನೆಪೊಲಿಸ್’ ಚಿತ್ರಮಂದಿರಗಳು ಸಿನೆಮಾವನ್ನು ಪ್ರದರ್ಶಿಸಲು ನಿರಾಕರಿಸಿವೆ. ಇದಕ್ಕೆ ಕಾರಣವನ್ನು ಅವರು ನೀಡಿಲ್ಲ. ಏಕಾಏಕಿ ಶೋ ರದ್ದು ಮಾಡಿದ್ದರಿಂದ ವೀಕ್ಷಕರು ಅಸಮಾಧಾನಗೊಂಡಿದ್ದಾರೆ.
ಸಂಪಾದಕೀಯ ನಿಲುವುಕೇರಳದಲ್ಲಿ ಕಾನೂನಿನ ರಾಜ್ಯ ಇದೆಯೇ ? ಚಿತ್ರಮಂದಿರ ಮಾಲೀಕರಿಗೆ ಹೆದರಿಕೆಯಾಗುತ್ತಿದ್ದರೆ, ಅದು ರಾಜ್ಯದ ಕಮ್ಯುನಿಸ್ಟ್ ಮೈತ್ರಿ ಸರಕಾರದ ವೈಫಲ್ಯವಾಗಿದೆ. ಸರಕಾರ ಇಂತಹವರಿಗೆ ರಕ್ಷಣೆ ಕೊಡಬೇಕಾಗಿದೆ ! |