ನಿನ್ನೆಯಷ್ಟೇ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಬಿಡುಗಡೆಯಾಗಿದೆ. ಈ ಚಲನಚಿತ್ರದಲ್ಲಿ ಕೇರಳ ರಾಜ್ಯದಲ್ಲಿ 32,000 ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಧ್ಯಮದಿಂದ ಕಪಟ, ವಂಚನೆ, ಮೋಸದಿಂದ ಹೇಗೆ ಐಎಸ್‌ಐಎಸ್ ಭಯೋತ್ಪಾದಕರನ್ನಾಗಿ ಮಾಡಲಾಗಿದೆ ಎಂಬ ಸತ್ಯ ಘಟನೆಯನ್ನು ಚಿತ್ರಿಸಲಾಗಿದೆ. ಇಂದು ಕರ್ನಾಟಕ ರಾಜ್ಯದಲ್ಲಿಯೂ ಸಾವಿರಾರು ಹಿಂದೂ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ. ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು, ದಕ್ಷಿಣ ಕನ್ನಡ ಈ ಜಿಲ್ಲೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಈ ಜಿಹಾದ್ ನಡೆಯುತ್ತಿರುವುದು ಎನ್‌ಐಎ ತನಿಖೆಯಲ್ಲೂ ಬೆಳಕಿಗೆ ಬಂದಿದೆ. ಆದ್ದರಿಂದ ರಾಜ್ಯದ ಯುವಕರು, ಹಿಂದೂ ಯುವತಿಯರು ಈ ಜಿಹಾದ್‌ನ ಬಗ್ಗೆ ಜಾಗೃತರಾಗಿ ಲವ್ ಜಿಹಾದ್ ತಡೆಯಲು ಪ್ರಯತ್ನಿಸುವುದು ಅತ್ಯಾವಶ್ಯಕವಾಗಿದೆ.
To save hindu girls from love jihad , we demand @BSBommai
To “TaxFree TheKeralaStory” in Karnataka.This film is based true facts of love jihad terrorism, Isis terrorm in kerala and thousands of hindu girls are also victims in karnataka.@BSYBJP @mepratap @CTRavi_BJP @AmitShah pic.twitter.com/Y2xaiDfDxX
— 🚩Mohan gowda🇮🇳 (@Mohan_HJS) May 6, 2023
ಈಗಾಗಲೇ ಮಧ್ಯಪ್ರದೇಶ ಸರಕಾರವು ‘ದಿ ಕೇರಳಾ ಸ್ಟೋರಿ’ ಚಿತ್ರವನ್ನು ಟ್ಯಾಕ್ಸ್ ಫ್ರೀ ಮಾಡಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿಯೂ ಸಾವಿರಾರು ಹಿಂದೂ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ಅದಕ್ಕಾಗಿ ಕರ್ನಾಟಕದಲ್ಲಿಯೂ ಈ ಚಿತ್ರವನ್ನು ಸರಕಾರವು ‘ಟ್ಯಾಕ್ಸ್ ಫ್ರೀ’ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.