ಜಗತ್ತಿನಲ್ಲಿನ ನಡೆಯುವ ಹೆಚ್ಚಿನ ವಿವಾಹಗಳ ಪೈಕಿ ಭಾರತದಲ್ಲಿನ ವಿವಾಹಗಳು ಮಾತ್ರ ಸ್ಥಿರವಾಗಿ ಉಳಿಯುತ್ತದೆ !

ಪೋರ್ಚುಗೀಸ್ ನಲ್ಲಿ ಶೇ. 94 ರಷ್ಟು ವಿವಾಹಗಳು ವಿಚ್ಛೇದನದಲ್ಲಿ ಅಂತ್ಯ !

ನವ ದೆಹಲಿ – ಸಂಪೂರ್ಣ ಜಗತ್ತಿನಲ್ಲಿ ಕೇವಲ ಭಾರತದಲ್ಲಿ ಮಾತ್ರ ವಿವಾಹ ವಿಚ್ಛೇದನಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ನಡೆಯುತ್ತವೆ. ವಿವಾಹ ವಿಚ್ಛೇದನದ ಸಂದರ್ಭದಲ್ಲಿ ಇತ್ತೀಚೆಗೆ ಘೋಷಿಸಲಾಗಿರುವ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ವಿವಾಹ ವಿಚ್ಛೇದನದ ಪ್ರಮಾಣ ಕೇವಲ ಶೇ. 1 ರಷ್ಟು ಇದ್ದರೇ ಯುರೋಪಿಯನ್ ಪೋರ್ಚುಗೀಸ್ ದೇಶದಲ್ಲಿ ಈ ಪ್ರಮಾಣ ಶೇ. 94 ರಷ್ಟು ಇದೆ. `ವರ್ಲ್ಡ ಆಫ್ ಸ್ಟ್ಯಾಟಿಸ್ಟಿಕ್ಸ’ ನೀಡಿರುವ ಮಾಹಿತಿಯನುಸಾರ, ಏಷ್ಯಾ ಖಂಡದ ದೇಶಗಳಲ್ಲಿ ವಿವಾಹ ಮುರಿದು ಬೀಳುವ ಪ್ರಮಾಣ ಅಲ್ಪವಿದೆ, ಆದರೆ ಯುರೋಪ ಮತ್ತು ಅಮೇರಿಕಾ ಖಂಡದಲ್ಲಿ ಈ ಪ್ರಮಾಣ ಅತ್ಯಧಿಕವಿದೆ.

1. ಭಾರತದ ಬಳಿಕ ವಿಯೆಟ್ನಾಮ್ ದೇಶದಲ್ಲಿ ಅತ್ಯಂತ ಕಡಿಮೆ ಎಂದರೆ ಶೇ. 7 ರಷ್ಟು ವಿವಾಹ ವಿಚ್ಛೇದನ ನಡೆಯುತ್ತವೆ. ಹಾಗೆಯೇ ತಜಕಿಸ್ತಾನದಲ್ಲಿ ಶೇ. 10 ರಷ್ಟು, ಇರಾನ್ ದೇಶದಲ್ಲಿ ಶೇ. 14 ರಷ್ಟು, ಮೆಕ್ಸಿಕೋದಲ್ಲಿ ಶೇ. 17 ರಷ್ಟು ವಿವಾಹ ವಿಚ್ಛೇದನಗಳು ನಡೆಯುತ್ತವೆ.

2. ಜಪಾನ್ ನಲ್ಲಿ ಈ ಪ್ರಮಾಣ ಶೇ. 35 ರಷ್ಟು, ಜರ್ಮನಿಯಲ್ಲಿ ಶೇ. 38 ರಷ್ಟು ಇದೆ. ಬ್ರಿಟನ್ ನಲ್ಲಿ ಶೇ. 41 ರಷ್ಟು ವಿವಾಹ ವಿಚ್ಛೇದನ ನಡೆಯುತ್ತವೆ. ಚೀನಾದಲ್ಲಿ ವಿವಾಹ ವಿಚ್ಛೇದನಗಳ ಪ್ರಮಾಣ ಶೇ. 41 ರಷ್ಟಿದೆ. ಅಮೇರಿಕಾದಲ್ಲಿ ಈ ಅಂಕಿ ಅಂಶ ಶೇ. 45 ರಷ್ಟು ಇದ್ದು, ಡೆನ್ಮಾರ್ಕ, ದಕ್ಷಿಣ ಕೊರಿಯಾ ಮತ್ತು ಇಟಲಿ ದೇಶಗಳಲ್ಲಿ ಶೇ. 47 ರಷ್ಟು ವಿವಾಹಗಳು ವಿಚ್ಛೇದನಗಳಲ್ಲಿ ಅಂತ್ಯಗೊಳ್ಳುತ್ತವೆ.

3. ವಿವಾಹ ವಿಚ್ಛೇದನಗಳ ಅತ್ಯಧಿಕ ಪ್ರಮಾಣ ಪೋರ್ಚುಗೀಸ್ ನಲ್ಲಿ ನಡೆಯುತ್ತವೆ. ಇಲ್ಲಿ ಶೇ. 94 ರಷ್ಟು ವಿವಾಹ ವಿಚ್ಛೇದನಗಳು ನಡೆಯುತ್ತವೆ. ಸ್ಪೇನ ದೇಶದಲ್ಲಿ ಶೇ. 85 ರಷ್ಟು ವಿವಾಹ ವಿಚ್ಛೇದನಗಳು ನಡೆಯುತ್ತವೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಸನಾತನ ಹಿಂದೂ ಧರ್ಮದ ಶಿಕ್ಷಣವಿರುವುದರಿಂದಲೇ ಇದು ಸಾಧ್ಯವಿದೆ. ಹೀಗಿದ್ದರೂ, ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವ ಮತ್ತು ಪಾಶ್ಚಿಮಾತ್ಯರ ಅಂಧಾನುಕರಣೆಯಿಂದ ಅನೇಕ ಹಿಂದೂಗಳು ಅಧೋಗತಿಯ ಕಡೆಗೆ ಚಲಿಸುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯವಾಗಿದೆ ! ಇದನ್ನು ತಡೆಯಲು ಅವರಿಗೆ ಧರ್ಮಶಿಕ್ಷಣ ನೀಡುವ ಆವಶ್ಯಕತೆಯಿದೆ !