ಮತಾಂತರ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ ಸೋರೆನ ಇವರು ಸಿಬಿಐದ ಸಾಕ್ಷಿದಾರ ಎಂದು ಉಪಸ್ಥಿತ ಇರಲು ನೋಟಿಸ್

ಮುಖ್ಯಮಂತ್ರಿ ಹೇಮಂತ ಸೋರೆನ

ರಾಂಚಿ (ಜಾರ್ಖಂಡ್) – ಜಾರ್ಖಂಡಿನ ಮುಖ್ಯಮಂತ್ರಿ ಹೇಮಂತ ಸೋರೇನ್ ಇವರು ಕೇಂದ್ರ ತನಿಖಾ ದಳದ (ಸಿಬಿಐದ) ವಿಶೇಷ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ. ಮಾಜಿ ರಾಷ್ಟ್ರೀಯ ಶೂಟರ್ ತಾರಾ ಸಹದೇವ ಮತ್ತು ರಕೀಬುಲ್ ಹಸನ್ ಅಲಿಯಾಸ್ ರಣಜಿತ್ ಕೊಹಲಿ ಇವರ ಪ್ರಕರಣದಲ್ಲಿ ಸಿಬಿಐಯಿಂದ ಸೋರೇನ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಮತಾಂತರ, ಲೈಂಗಿಕ ಕಿರುಕುಳ ಮತ್ತು ವರದಕ್ಷಿಣೆಯ ಮೊಕ್ಕಾದಮೆ ಆಗಿದ್ದು ಅದರಲ್ಲಿ ಮುಖ್ಯಮಂತ್ರಿ ಸೋರೆನ ಇವರನ್ನು ಸಾಕ್ಷಿದಾರರನ್ನಾಗಿ ಮಾಡಲಾಗಿದೆ. ರಕೀಬುಲ್ ಅನೇಕ ದಿನದಿಂದ ಬಂಧನದಲ್ಲಿದ್ದಾನೆ. ಅವನು ನ್ಯಾಯಾಲಯದಲ್ಲಿ ನೀಡಿರುವ ಸಾಕ್ಷಿದಾರರ ಸೂಚಿಯಲ್ಲಿ ಮುಖ್ಯಮಂತ್ರಿ ಹೇಮಂತ ಸೊರೇನ್ ಇವರ ಹೆಸರು ಇದೆ. ಅವರು ರಕೀಬುಲ್ ಹಸನ್ ಇವರ ಮನೆಯ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಎಂದು ಹೇಳಲಾಗಿದೆ. ಆ ಸಮಯದಲ್ಲಿ ಅವರು ವಿರೋಧಿ ಪಕ್ಷದ ನಾಯಕರಾಗಿದ್ದರು.

ರಣಜಿತ ಕೋಹಲಿ ಮತ್ತು ತಾರಾ ಸಹದೇವ ಇವರು ಜುಲೈ ೭, ೨೦೧೪ ರಲ್ಲಿ ವಿವಾಹವಾಗಿದ್ದರು. ತಾರಾ ಸಹದೇವ ಇವರು, ‘ನಾನು ಯಾವ ವ್ಯಕ್ತಿಯನ್ನು ರಣಜಿತ ಎಂದು ತಿಳಿದುಕೊಂಡಿದ್ದೆ ವಾಸ್ತವದಲ್ಲಿ ಅವನು ರಕೀಬುಲ್ ಹಸನ್ ಆಗಿದ್ದನು. ವಿವಾಹದ ನಂತರ ಅವನು ವರದಕ್ಷಿಣೆ ಕೇಳಿದನು ಮತ್ತು ಮತಾಂತರಕ್ಕಾಗಿ ನನಗೆ ಕಿರುಕುಳ ನೀಡುತ್ತಿದ್ದನು’, ಎಂದು ದೂರ ನೀಡಲಾಗಿತ್ತು.