ಪಾಟಲೀಪುತ್ರ (ಬಿಹಾರ) – ಬಿಹಾರದಲ್ಲಿ ನಡೆಯಲಿದ್ದ ಜಾತಿ ಆಧಾರಿತ ಜನಗಣತಿಯನ್ನು ಪಾಟಲೀಪುತ್ರ ಉಚ್ಚ ನ್ಯಾಯಾಲಯ ತಡೆದಿದೆ. ನ್ಯಾಯಾಲಯವು `ಜುಲೈ ೩ ರಂದು ಮುಂದಿನ ಆಲಿಕೆ ನಡೆಯಲಿದೆ, ಅಲ್ಲಿಯವರೆಗೆ ಈ ವಿಷಯದಲ್ಲಿ ಯಾವುದೇ ವರದಿಯನ್ನು ತಯಾರಿಸಬಾರದು’ ಎಂದು ಹೇಳಿದೆ.
ಆಲಿಕೆಯ ಸಮಯದಲ್ಲಿ ಮುಖ್ಯ ನ್ಯಾಯಾಧೀಶರು ಪ್ರಮುಖ ನ್ಯಾಯವಾದಿಗಳಿಗೆ `ಸರಕಾರಕ್ಕೆ ಇಂತಹ ಜನಗಣತಿಯನ್ನು ಮಾಡಬೇಕಿದ್ದರೆ ಈ ವಿಷಯದಲ್ಲಿನ ಕಾನೂನನ್ನು ಏಕೆ ಸಮ್ಮತಿಸಲಿಲ್ಲ ?’ ಎಂದು ಕೇಳಿದರು. ಆಗ ನ್ಯಾಯವಾದಿಗಳು ರಾಜ್ಯಪಾಲರ ಭಾಷಣದಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸಲಾಗಿತ್ತು. ಆ ಭಾಷಣದಲ್ಲಿ ಯಾವ ಆಧಾರದಲ್ಲಿ ಜನಗಣತಿ ಮಾಡಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ಇದರ ಉದ್ದೇಶವು ಜನತೆಗಾಗಿ ಯೋಜನೆಗಳನ್ನು ರೂಪಿಸುವುದು ಹಾಗೂ ಅದನ್ನು ಕಾರ್ಯಾಚರಣೆಗೆ ತರುವುದಾಗಿದೆ’ ಎಂದು ಹೇಳಿದರು.
#WATCH | It is unfortunate that the Bihar government did not put this issue properly in front of the High Court. Their (Bihar Govt) intention regarding the caste-based census was wrong: Former Deputy CM of Bihar, Tarkishore Prasad on Patna HC’s stay on Caste-based census pic.twitter.com/a7hxeCTrw1
— ANI (@ANI) May 4, 2023