ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿಯ ಸ್ಪಷ್ಠೀಕರಣ !
ಬೆಂಗಳೂರು – ಬಜರಂಗದಳವನ್ನು ನಿಷೇಧಿಸುವ ಯಾವದೇ ಉದ್ದೇಶ ಕಾಂಗ್ರೆಸ್‌ಗೆ ಇಲ್ಲ. ಪಕ್ಷದಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲ ಮತ್ತು ರಾಜ್ಯ ಸರಕಾರವು ಈ ರೀತಿ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ಕೈಚೆಲ್ಲಲು ಪ್ರಯತ್ನಿಸಿದ್ದಾರೆ.
ರಾಜ್ಯದ ವಿಧಾನಸಭೆಯ ಚುನಾವಣೆಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಹೀಗಾಗಿ ದೇಶದಾದ್ಯಂತ ಕಾಂಗ್ರೆಸ್‌ಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಘೋಷಣೆಯಿಂದ ಭಾಜಪಗೆ ಲಾಭವಾಗಲು ಪ್ರಾರಂಭಿಸಿದ ನಂತರವೇ ಕಾಂಗ್ರೆಸ್ ತನ್ನ ಹೇಳಿಕೆಯಿಂದ ಹಿಂತುರುಗುತ್ತಿದೆ ಎಂಬುದನ್ನು ಮೊಯ್ಲಿಯವರ ಈ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ.
(ಸೌಜನ್ಯ : Daijiworld Television)
ಮೊಯ್ಲಿ ತಮ್ಮ ಮಾತನ್ನು ಮುಂದುವರೆಸುತ್ತಾ, ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಬಜರಂಗದಳದ ಉಲ್ಲೇಖವಿದ್ದರು ಅದರಲ್ಲಿ ಎಲ್ಲಾ ಕಟ್ಟರವಾದಿ ಸಂಘಟನೆಗಳು ಒಳಗೊಂಡಿವೆ; ಆದರೆ ಯಾವುದೇ ಸಂಘಟನೆಯನ್ನು ನಿಷೇಧಿಸಲು ರಾಜ್ಯ ಸರಕಾರಕ್ಕೆ ಸಾಧ್ಯವಿಲ್ಲ; ಏಕೆಂದರೆ ಈ ಹಕ್ಕು ಕೇಂದ್ರ ಸರಕಾರಕ್ಕೆ ಇದೆ (ಇದು ಕಾಂಗ್ರೆಸ್ಸಿಗರಿಗೆ ಮೊದಲೇ ಗೊತ್ತಿರಲಿಲ್ಲವೇ ? ಅಥವಾ ಈಗ ಅವರು ಎಚ್ಚೆತ್ತುಕೊಂಡಿದ್ದಾರೆ ? ಇಂತಹ ಘೋಷಣೆಗಳನ್ನು ಮಾಡಿ ಮತದಾರರನ್ನು ಮೂರ್ಖರನ್ನಾಗಿಸುವ ಪ್ರಯತ್ನ ನಡೆಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ ! ಇದಕ್ಕೆ ಮತದಾರರು ಕಾಂಗ್ರೆಸ್‌ನ್ನು ಪ್ರಶ್ನಿಸಬೇಕು ! ಕಾಂಗ್ರೇಸ್ ಇಲ್ಲಿಯವರೆಗೆ ಇಂತಹ ಅಸಾಧ್ಯ ಭರವಸೆಗಳನ್ನು ನೀಡಿ ಮತದಾರರನ್ನು ಮೂರ್ಖರನ್ನಾಗಿಸುವ ಕಾರಣದಿಂದಲೆ ಈಗ ಅದರ ಅಸ್ತಿತ್ವದ ಮೇಲೆ ಪ್ರಶ್ನೆ ಉದ್ಭವಿಸಿದೆ ! – ಸಂಪಾದಕರು) ಆದ್ದರಿಂದ ಕರ್ನಾಟಕ ಸರಕಾರಕ್ಕೆ ಭಜರಂಗ ದಳವನ್ನು ನಿಷೇಧಿಸಲು ಅಸಾಧ್ಯವಾಗಿದೆ.
ಬಜರಂಗದಳ ನಿಷೇಧ ಪ್ರಸ್ತಾವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಲ್ಲ; ವೀರಪ್ಪ ಮೊಯ್ಲಿ#VeerappaMoily #Udupi #BajrangDal #Congresshttps://t.co/8hEcpiNkGU
— TV9 Kannada (@tv9kannada) May 4, 2023
ಸಂಪಾದಕೀಯ ನಿಲುವುಕರ್ನಾಟಕದಲ್ಲಿ ಬಜರಂಗದಳ ನಿಷೇಧದ ವಿಷಯವು ಕಾಂಗ್ರೆಸ್‌ನಲ್ಲಿ ಬೇರುರಿದ್ದರಿಂದ, ಕಾಂಗ್ರೆಸ್ ಈಗ ಈ ಸ್ಪಷ್ಠೀಕರಣ ನೀಡುತ್ತಿದೆ ಆದರೆ ಇದರಿಂದ ಕಾಂಗ್ರೆಸ್ಸಿಗೆ ಯಾವುದೇ ಲಾಭವಾಗುವುದಿಲ್ಲ, ಹಿಂದೂಗಳು ಇದನ್ನು ಚುನಾವಣೆಯಲ್ಲಿ ತೋರಿಸುವವರಿದ್ದಾರೆ ! |