ಬಿಹಾರ ರಾಷ್ಟ್ರೀಯ ಜನತಾ ದಳದ ಮಾಜಿ ಶಾಸಕನ ವಿಚಿತ್ರ ಸಂಶೋಧನೆ `ಒಬ್ಬನೇ ಒಬ್ಬ ಬ್ರಾಹ್ಮಣ ಭಾರತೀಯನಲ್ಲ, ಅವರೆಲ್ಲರೂ ರಷ್ಯಾದಿಂದ ಬಂದಿದ್ದಾರಂತೆ’.

ಮಿತ್ರ ಪಕ್ಷ ಸಂಯುಕ್ತ ಜನತಾದಳದಿಂದ ವಿರೋಧ !

ರಾಷ್ಟ್ರೀಯ ಜನತಾದಳದ ಮಾಜಿ ಶಾಸಕ ಯದುವಂಶ್ ಕುಮಾರ್ ಯಾದವ್

ಪಾಟಲೀಪುತ್ರ (ಬಿಹಾರ) – ಒಬ್ಬನೇ ಒಬ್ಬ ಬ್ರಾಹ್ಮಣ ಭಾರತೀಯನಲ್ಲ. ನಾವು ಈ ದೇಶದ ಮೂಲ ನಿವಾಸಿಗಳಾಗಿದ್ದೇವೆ. ಬ್ರಾಹ್ಮಣರು ರಷ್ಯಾ ಮೂಲದವರಾಗಿದ್ದಾರೆ. ಈ ಸಂದರ್ಭದಲ್ಲಿ ನಡೆಸಿದ `ಡಿ.ಎನ್.ಎ’ ಪರೀಕ್ಷೆಯಿಂದ ದೃಢಪಟ್ಟಿದೆ, ಎಂದು ಬಿಹಾರ ಆಡಳಿತಾರೂಢ ಸಂಯುಕ್ತ ಪಕ್ಷದ ರಾಷ್ಟ್ರೀಯ ಜನತಾದಳದ ಮಾಜಿ ಶಾಸಕ ಮತ್ತು ರಾಷ್ಟ್ರೀಯ ಕಾರ್ಯಾಧ್ಯಕ್ಷ ಯದುವಂಶಕುಮಾರ ಯಾದವ ಇವರು ಹೇಳಿಕೆ ನೀಡಿದ್ದಾರೆ. (`ಈ ಸಂಶೋಧನೆಯನ್ನು ಯಾರು ನಡೆಸಿದರು?’, `ಅದಕ್ಕಾಗಿ ಯಾವ ಸಂಶೋಧನೆಯನ್ನು ನಡೆಸಲಾಯಿತು?’ ಎನ್ನುವ ಮಾಹಿತಿಯನ್ನು ಯಾದವ ಇವರು ನೀಡಬೇಕು. ಕೇವಲ ಪ್ರಸಿದ್ಧಿಗಾಗಿ ರಾಜಕಾರಣಿಗಳು ಎಷ್ಟು ಕೀಳುಮಟ್ಟದ ಹೇಳಿಕೆಯನ್ನು ನೀಡುತ್ತಾರೆ ಎನ್ನುವುದು ಇದರಿಂದ ಕಂಡು ಬರುತ್ತದೆ ! – ಸಂಪಾದಕರು)

1. ಯಾದವ ತಮ್ಮ ಮಾತನ್ನು ಮುಂದುವರಿಸಿ, ಬ್ರಾಹ್ಮಣರು ನಮ್ಮೊಳಗೆ ಹೊಡೆದಾಡಲು ಬಿಟ್ಟು ಆಡಳಿತ ನಡೆಸುತ್ತಿದ್ದಾರೆ. ಆದ್ದರಿಂದ ಅವರನ್ನು ಯಾವ ರೀತಿ ರಷ್ಯಾದಿಂದ ಓಡಿಸಲಾಯಿತೋ, ಹಾಗೆಯೇ ಅವರನ್ನು ಈಗ ನಾವು ಕೂಡ ಇಲ್ಲಿಂದ ಓಡಿಸಬೇಕು.

2. ಆಡಳಿತಾರೂಢ ಮಿತ್ರಪಕ್ಷವಾಗಿರುವ ಸಂಯುಕ್ತ ಜನತಾದಳದಿಂದ ಯಾದವರನ್ನು ಟೀಕಿಸಲಾಗುತ್ತಿದೆ. ಸಂಯುಕ್ತ ಜನತಾದಳದ ವಕ್ತಾರ ಅಭಿಷೇಕ ಕುಮಾರ ಝಾ ಇವರು ಯಾದವರ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆಯೆಂದು ಹೇಳುತ್ತಾ, ಪರಶುರಾಮ ರಷ್ಯಾದಿಂದ ಬಂದಿದ್ದರೋ ಅಥವಾ ಬೇರೆ ಯಾವ ದೇಶದಿಂದ ? ಕೇವಲ ಚರ್ಚೆಯಲ್ಲಿರಲು ಮತ್ತು ಪ್ರಸಿದ್ಧಿ ಪಡೆಯಲು ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ. ರಾಷ್ಟ್ರೀಯ ಜನತಾ ದಳವು ಇಂತಹ ಮುಖಂಡರ ವಿರುದ್ಧ ಕ್ರಮ ಕೈಕೊಳ್ಳಬೇಕು ಎಂದು ಹೇಳಿದರು.

ಸಂಪಾದಕರ ನಿಲುವು

ರಾಷ್ಟ್ರೀಯ ಜನತಾದಳದ ಮುಖಂಡರು ಬ್ರಾಹ್ಮಣ ದ್ವೇಷದಿಂದ ನೀಡಿರುವ ಹೇಳಿಕೆ ! ಇಂತಹ ಹೇಳಿಕೆಗಳನ್ನು ನೀಡಿ ಹಿಂದೂಗಳಲ್ಲಿ ಒಡಕು ಮೂಡಿಸಲು ಯತ್ನಿಸುವ ರಾಜಕಾರಣಿಗಳನ್ನು ಹಿಂದೂಗಳು ಸಿಕ್ಕಸಿಕ್ಕಲ್ಲಿ ಪ್ರಶ್ನಿಸಬೇಕು !