‘ನಮ್ಮ ಸರಕಾರ ಬಂದರೆ ಭಜರಂಗದಳ ಮತ್ತು ‘ಪಿ.ಎಫ್.ಐ’ವನ್ನು ನಿಷೇಧಿಸುತ್ತಾರಂತೆ !’

ಕರ್ನಾಟಕ ಕಾಂಗ್ರೆಸ್ ನ ಖೇದಕರ ಆಶ್ವಾಸನೆ !

ಬೆಂಗಳೂರು – ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಭಜರಂಗ ದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ)ವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಘೋಷಣಾವಳಿಯ ಮೂಲಕ ಸಾರ್ವಜನಿಕರಿಗೆ ಭರವಸೆ ನೀಡಿದೆ.

೧. ರಾಜ್ಯದ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಎಲ್ಲಾ ರಾಜಕೀಯ ಪಕ್ಷಗಳು ನಾನಾ ಭರವಸೆಗಳನ್ನು ನೀಡಿ ಜನರನ್ನು ಓಲೈಸಲು ಯತ್ನಿಸುತ್ತಿವೆ.

೨. ಕಾಂಗ್ರೆಸ್ ಪ್ರತಿ ಕುಟುಂಬಕ್ಕೆ ೨೦೦ ಯೂನಿಟ್ ಉಚಿತ ವಿದ್ಯುತ್ ಜೊತೆಗೆ ನಿರುದ್ಯೋಗಿ ಪದವೀಧರರಿಗೆ ಮಾಸಿಕ ೩೦೦೦ ರೂಪಾಯಿ ಮತ್ತು ೨ ವರ್ಷಗಳ ಕಾಲ ಪದವೀಧರರಿಗೆ ಮಾಸಿಕ ೧೫೦೦ ರೂಪಾಯಿಗಳನ್ನು ಕಾಂಗ್ರೆಸ್ ಘೋಷಿಸಿದೆ.

೩. ಇನ್ನೊಂದೆಡೆ ‘ನಮ್ಮನ್ನು ಮತ್ತೆ ಆರಿಸಿದರೇ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆ’ ಎಂದು ಭಾಜಪವು ಭರವಸೆ ನೀಡಿದೆ. ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ 3 ಗ್ಯಾಸ್ ಸಿಲಿಂಡರ್ ನೀಡುವುದಾಗಿಯೂ ಭಾಜಪ ಹೇಳುತ್ತಿದೆ.

(ಸೌಜನ್ಯ : Tv9 Kannada)

ಸಂಪಾದಕೀಯ ನಿಲುವು

ಕಾಂಗ್ರೆಸ್ ಭಯೋತ್ಪಾದಕ ಸಂಘಟನೆ ಸಿಮಿಯನ್ನು ನಿಷೇಧಿಸಿಲ್ಲ, ಅದರದೇ ಪ್ರತಿರೂಪವಾದ ಪಿ.ಎಫ್.ಐ.ಯನ್ನು ಎಂದಿಗೂ ನಿಷೇಧಿಸುವುದಿಲ್ಲ ಎಂಬುದು ಬಹಿರಂಗ ಸತ್ಯವಾಗಿದೆ. ಆದ್ದರಿಂದ ಜನರು ಇಂತಹ ಕಾಂಗ್ರೇಸ್‌ವನ್ನು ಅರಿತುಕೊಂಡಿದೆ !

ದೇಶಪ್ರೇಮಿ ಭಜರಂಗದಳ ಮತ್ತು ದೇಶದ್ರೋಹಿ ‘ಪಿ.ಎಫ್.ಐ’.ವನ್ನು ಒಂದೇ ಅಳತೆಯಲ್ಲಿ ತೂಗಿದ ಕಾಂಗ್ರೆಸ್ ಗೆ ಖಂಡನೆ !