ಕರ್ನಾಟಕ ವಿಧಾನಸಭೆಯ ಚುನಾವಣೆ

ಬೀದರ – ಕಾಂಗ್ರೆಸ್ ನನಗೆ ಎಷ್ಟು ಬಾರಿ ನಿಂದಿಸಿದೆ, ಇದರ ಸೂಚಿ ನನಗೆ ಒಬ್ಬರು ಕಳುಹಿಸಿದ್ದಾರೆ. ಈ ಸೂಚಿಯ ಪ್ರಕಾರ ಕಾಂಗ್ರೆಸ್ ನನ್ನನ್ನು ೯೧ ಬಾರಿ ನಿಂದಿಸಿದೆ. ಇದೇ ಸಮಯ ಕಾಂಗ್ರೆಸ್ ಜನರಿಗೆ ಸೂರಾಜ್ಯ ನೀಡುವದಕ್ಕಾಗಿ ಮತ್ತು ತಮ್ಮ ಕಾರ್ಯಕರ್ತರ ಮನೋಬಲ ಹೆಚ್ಚಿಸುವುದಕ್ಕಾಗಿ ಖರ್ಚು ಮಾಡಿತ್ತಿದ್ದರೆ, ಕಾಂಗ್ರೆಸ್ಸಿಗೆ ಈ ದುಸ್ಥಿತಿ ಬರುತ್ತಿರಲಿಲ್ಲ. ಯಾರು ಸಾಮಾನ್ಯ ಜನರ ಯೋಚನೆ ಮಾಡುತ್ತಾನೆ, ಕಾಂಗ್ರೆಸ್ ಅವರನ್ನು ದ್ವೇಷಿಸುತ್ತದೆ. ಮಹಾಪುರುಷರನ್ನು ಕೂಡ ಕಾಂಗ್ರೆಸ್ ನಿಂದಿಸಿದೆ. ಕಾಂಗ್ರೆಸ್ ನಿಂದಿಸಿದರೂ ನಾನು ಜನರ ಕೆಲಸ ಮಾಡುತ್ತಲೇ ಇರುತ್ತೇನೆ.
(ಸೌಜನ್ಯ : Vijay Karnataka | ವಿಜಯ ಕರ್ನಾಟಕ)
ಜನರ ಬೆಂಬಲ ನನಗೆ ಇರುವುದರಿಂದ ನಿಂದನೆ ಮಣ್ಣು ಪಾಲಾಗುತ್ತಿದೆ. ಕರ್ನಾಟಕದ ಇನ್ನು ಸೇವೆ ಮಾಡುವುದಿದೆ. ಅದಕ್ಕಾಗಿ ಪೂರ್ಣ ಬಹುಮತದ ಸರಕಾರ ಬೇಕಿದೆ, ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರು ಇಲ್ಲಿ ಆಯೋಜಿಸಿರುವ ಪ್ರಚಾರ ಸಭೆಯಲ್ಲಿ ಜನರಿಗೆ ಕರೆ ನೀಡಿದರು. ಕರ್ನಾಟಕದಲ್ಲಿ ಮೇ ೧೦ ರಂದು ವಿಧಾನ ಸಭೆಯ ಚುನಾವಣೆಗಾಗಿ ಮತದಾನ ನಡೆಯುವುದು. ಅದರ ಪ್ರಯುಕ್ತ ಪ್ರಧಾನಮಂತ್ರಿ ಮೋದಿ ಇವರು ಭಾಜಪದ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರು ಪ್ರಧಾನಮಂತ್ರಿ ಮೋದಿ ಅವರನ್ನು ‘ವಿಷ ಸರ್ಪಕ್ಕೆ’ ಹೋಲಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮೋದಿ ಇವರು ಮೇಲಿನ ಹೇಳಿಕೆ ನೀಡಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ