ಮಣಿಪುರದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಮೊದಲು ಆದಿವಾಸಿ ಕ್ರೈಸ್ತರಿಂದ ವಿಧ್ವಂಸ !

  • ಕಾನೂನು ಬಾಹಿರ ಚರ್ಚನ್ನು ಕೆಡವಿದ್ದಕ್ಕಾಗಿ ಆಂದೋಲನ ಮಾಡುತ್ತಿದ್ದರು !

  • ವಿಧ್ವಂಸ ಮಾಡುತ್ತಿದ್ದ ಆದಿವಾಸಿಗಳು ಮತಾಂತರಿತ ಕ್ರೈಸ್ತರಾಗಿದ್ದರು ಎಂದು ಹೇಳಲಾಗುತ್ತಿದೆ !

ಇಂಫಾಲ (ಮಣಿಪುರ) – ಮಣಿಪುರದ ಚೂರಾಚಂದಪುರದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಮೊದಲನೇ ದಿನ ಅವರ ಸಭೆ ನಡೆಯುವ ಜಾಗದಲ್ಲಿ ಆದಿವಾಸಿ ಆಂದೋಲನಕಾರರು ವಿಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ. ಸ್ಥಳೀಯ ನಾಯಕರು ಹಿಂಸಾಚಾರ ಮಾಡಿದ ಆದಿವಾಸಿಗಳ ನೇತೃತ್ವ ವಹಿಸಿದ್ದರು. ಈ ಆದಿವಾಸಿಗಳು ಮತಾಂತರಗೊಂಡ ಕ್ರೈಸ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಭಾಜಪದ ನೇತೃತ್ವದಲ್ಲಿರುವ ಮಣಿಪುರ ಸರಕಾರದ ನಿರ್ಣಯದ ಅನುಸಾರ ಆದಿವಾಸಿಗಳಿಗಾಗಿ ಮೀಸಲು ಮತ್ತು ಸಂರಕ್ಷಿತ ವನ್ಯ ಕ್ಷೇತ್ರದ ಸಮೀಕ್ಷೆ ಮಾಡಲಾಗುವುದು. ಈ ಆದೇಶದ ನೆಪದಿಂದ ಚರ್ಚನ್ನು ಕೆಡವುತ್ತಿರುವುದಾಗಿ ಆದಿವಾಸಿ ಮಂಚ್ ಆರೋಪಿಸುತ್ತಿದ್ದು ಮತಾಂತರಗೊಂಡ ಆದಿವಾಸಿಗಳು ಇದರ ವಿರುದ್ಧ ಆಂದೋಲನ ಮಾಡುತ್ತಿದ್ದಾರೆ. ಈ ಆಂದೋಲನದಿಂದಾಗಿ ಅವರು ಈ ವಿಧ್ವಂಸವನ್ನು ಮಾಡಿದ್ದಾರೆ. ಪೊಲೀಸರು ಅವರ ಮೇಲೆ ಲಾಠಿಚಾರ್ಜ್ ಮಾಡಿದರು. ಈಗ ಅಲ್ಲಿ ಗುಂಪು ಸೇರುವಿಕೆಯ ಮೇಲೆ ನಿರ್ಬಂಧ ಹೇರಲಾಗಿದೆ. ಕಾನೂನು ಬಾಹಿರವೆಂಬ ಆರೋಪದಿಂದಾಗಿ ಮಣಿಪುರ ಸರಕಾರವು ಇಂಫಾಲಿನಲ್ಲಿ ೩ ಚರ್ಚಗಳನ್ನು ಕೆಡವಿತ್ತು. ಚರ್ಚನ್ನು ಬೀಳಿಸುವ ಆದೇಶವನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಗಿತ್ತು. ಆದರೆ ನ್ಯಾಯಾಲಯವು ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಸಂಪಾದಕೀಯ ನಿಲುವು

ಮೊದಲಿಗೆ ಕಾನೂನುಬಾಹಿರವಾಗಿ ಚರ್ಚನ್ನು ಕಟ್ಟುವುದು ಮತ್ತು ಅದರ ಮೇಲೆ ಕಾರ್ಯಾಚರಣೆ ಮಾಡಿದಾಗ ಕಾನೂನನ್ನು ಕೈಗೆತ್ತಿಕೊಂಡು ನೇರವಾಗಿ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ವಿಧ್ವಂಸ ಮಾಡುವುದು, ಇವುಗಳಿಂದ ಮತಾಂತರವಾದವರ ಧೈರ್ಯ ಎಷ್ಟು ಹೆಚ್ಚಾಗಿದೆ ಎಂಬುದು ಗಮನಕ್ಕೆ ಬರುತ್ತದೆ ! ಈ ಕಾನೂನು ವಿರೋಧಿ ಮಾನಸಿಕತೆಯನ್ನು ಬುಡಸಹಿತ ನಾಶಮಾಡಲು ಮಣಿಪುರ ಸರಕಾರವು ಕಠೋರ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ !