ನಮ್ಮ ಕುಟುಂಬವನ್ನು ಹುತಾತ್ಮರ ಕುಟುಂಬ ಎಂದು ಗುರುತಿಸಲಾಗುವುದು ! – ಹುತಾತ್ಮ ಸೈನಿಕರ ಸಂಬಂಧಿಕರು

ನಕ್ಸಲ್ ದಾಳಿಯಲ್ಲಿ ಮೃತಪಟ್ಟ ೧೦ ಯೋಧರಲ್ಲಿ ೮ ಮಂದಿ ಮಾಜಿ ನಕ್ಸಲೀಯರು

ಜಗದಲಪುರ (ಛತ್ತೀಸ್ಗಢ) – ಏಪ್ರಿಲ್ ೨೬ ರಂದು ನಕ್ಸಲ್ ದಾಳಿಯಲ್ಲಿ ೧೦ ಯೋಧರು ವೀರಮರಣವನ್ನಪ್ಪಿದ್ದರು. ಹತರಾದ ೧೦ ಸೈನಿಕರಲ್ಲಿ ೮ ಮಂದಿ ಮಾಜಿ ನಕ್ಸಲೀಯರಾಗಿದ್ದರು; ಆದರೆ ಅವರು ಶರಣಾಗಿ ಮುಖ್ಯವಾಹಿನಿಗೆ ಸೇರಿದರು. ಇದರಲ್ಲಿ ಒಬ್ಬ ಯೋಧನ ಸಂಬಂಧಿಯೊಬ್ಬರು, ‘ಇನ್ನು ಮುಂದೆ ನಮ್ಮ ಕುಟುಂಬವನ್ನು ಹುತಾತ್ಮರ ಕುಟುಂಬ ಎಂದು ಕರೆಯಲಾಗುವುದು. ನಕ್ಸಲ್ ಎಂಬ ಕಳಂಕವನ್ನು ಹಣೆಯ ಮೇಲೆ ಹೊತ್ತು ಸಾಯುವುದಕ್ಕಿಂತ ಸೈನ್ಯದ ವೇಷ ಧರಿಸಿ ಸಾಯುವುದು ಲಕ್ಷ ಪಟ್ಟು ಮೇಲು !’ ಎಂದು ಹೇಳಿದರು.

ನಕ್ಸಲ್ ದಾಳಿಯಲ್ಲಿ ಮಡಿದ ಯೋಧನ ಚಿತೆಯ ಮೇಲೆ ಪತ್ನಿ ಮಲಗಿದರು !

ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಯೋಧರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ. ಇದೇ ಘಟನೆಯಲ್ಲಿ ಯೋಧ ರಾಜು ಕರಟಮ್ ಅವರ ಮೃತ ದೇಹವನ್ನು ಕವಾಸಿಪುರದ ಅವರ ಗ್ರಾಮಕ್ಕ್ನೆತೆಡಗೆದುಕೊಂಡು ಬಂದಾಗ, ಅವರ ಪತ್ನಿ ಅವರ ಅಂತ್ಯಸಂಸ್ಕಾರದ ಸಮಯದಲ್ಲಿ ಮೃತದೇಹವನ್ನು ಅಪ್ಪಿಕೊಂಡರು. ಶವಸಂಸ್ಕಾರ ಆರಂಭವಾದ ಕೂಡಲೇ ಚಿತೆಯ ಮೇಲೆಯೇ ಮಲಗಿ ‘ನನ್ನನ್ನು ನನ್ನ ಗಂಡನೊಂದಿಗೆ ಸುಟ್ಟು ಹಾಕಿ’ ಎಂದು ಹಟ ಹಿಡಿದಳು. ಹಿರಿಯರು ಅವಳನ್ನು ತಿಳಿಸಿ ಹೇಳಿದಾಗ, ಅಂತ್ಯ ವಿಧಿಗಳನ್ನು ಪೂರ್ಣಗೊಳಿಸಲಾಯಿತು.