‘ನೀವು ಬಿಹಾರಕ್ಕೆ ಬಂದು ಹಿಂದೂ-ಮುಸ್ಲಿಂರ ನಡುವೆ ಜಗಳ ಹಚ್ಚುವುದಾದರೆ, ಅದನ್ನು ವಿರೋಧಿಸುತ್ತಾರಂತೆ !’ – ಬಿಹಾರದ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರಿಗೆ ಬಿಹಾರದ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್ ಇವರಿಂದ ಎಚ್ಚರಿಕೆ

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಮತ್ತು ಬಿಹಾರದ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್

ಪಾಟ್ಲಿಪುತ್ರ (ಬಿಹಾರ) – ಬಾಗೇಶ್ವರ ಧಾಮ್ ನ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಮೇ ೧೩ ರಂದು ಪಾಟ್ಲಿಪುತ್ರಕ್ಕೆ ಬರಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನತಾ ದಳದ ನಾಯಕ ಹಾಗೂ ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಅವರು, ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಪಟ್ಲಿಪುತ್ರದಲ್ಲಿ ಹಿಂದೂ-ಮುಸ್ಲಿಮರ ನಡುವೆ ಜಗಳ ಸೃಷ್ಟಿಸಲು ಹೊರಟರೆ ನಾನು ಅವರನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಅವರನ್ನು ವಿಮಾನ ನಿಲ್ದಾಣದಲ್ಲಿ ಸುತ್ತುವರಿಯಲಾಗುವುದು. ಸಹೋದರತ್ವದ ಸಂದೇಶ ನೀಡಿದರೆ ಬಿಹಾರಕ್ಕೆ ಬರಬಹುದು. (ತೇಜ್ ಪ್ರತಾಪ್ ಯಾದವ್ ಅವರು ಕೇವಲ ಹಿಂದೂಗಳು ಸಹೋದರತ್ವವನ್ನು ತೋರಿಸುತ್ತಾರೆ ಮತ್ತು ಮುಸ್ಲಿಂ ಮುಖಂಡರು, ಧರ್ಮಗುರುಗಳು ದ್ವೇಷವನ್ನು ಹಬ್ಬಿಸಬಹುದು ಎಂದು ತೇಜಪ್ರತಾಪ ಯಾದವ ಇವರು ನಿರೀಕ್ಷಿಸಿದರೆ, ಅದು ಆಗುವುದಿಲ್ಲ ಎಂದು ಹಿಂದೂಗಳು ಅವರಿಗೆ ಕಾನೂನಿನ ರೀತಿಯಲ್ಲಿ ಹೇಳಬೇಕಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಮತಾಂಧ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ, ದೇವಸ್ಥಾನಗಳನ್ನು ಧ್ವಂಸಗೊಳಿಸುತ್ತಿದ್ದಾರೆ, ಆಗ ತೇಜ್ ಪ್ರತಾಪ್ ಯಾದವ್ ಬಾಯಿಬಿಡುವುದಿಲ್ಲ ಎಂಬುದನ್ನು ಗಮನಿಸಿ !