ಭಾಗ್ಯನಗರದ ಮಸೀದಿಯ ಪರಿಸರದಲ್ಲಿ ‘ಜೈ ಶ್ರೀರಾಮ್’ ಎಂದು ರಿಂಗ್ ಟೋನ್ ಶಬ್ದ; ೩ ಮಂದಿಯನ್ನು ಬಂಧಿಸಿದ ಪೊಲೀಸರು !

ಮಕ್ಕಾ ಮಸೀದಿ

ಭಾಗ್ಯನಗರ (ತೆಲಂಗಾಣ) – ಇಲ್ಲಿನ ಚಾರ್ಮಿನಾರ್ ಬಳಿಯ ಮಕ್ಕಾ ಮಸೀದಿ ಪರಿಸರದಲ್ಲಿ ಯುವಕನೊಬ್ಬನ ಮೊಬೈಲ್ ರಿಂಗ್ ಟೋನ್ ಬಾರಿಸಿತು. ಇದು ‘ಜೈ ಶ್ರೀ ರಾಮ್’ ಹಾಡಿನ ರಿಂಗ್‌ಟೋನ್ ಆಗಿತ್ತು. ಇದರಿಂದ ಅಲ್ಲಿದ್ದ ಮುಸ್ಲಿಮರು ಈ ಯುವಕ ಸೇರಿ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ‘ಈ ಮೂವರೂ ಸರಾಯಿ ಕುಡಿದಿದ್ದರು’, ಎನ್ನಲಾಗಿದೆ. ‘ಮೂವರಿಗೂ ಪ್ರಜ್ಞೆ ಬಂದ ನಂತರ ವಿಚಾರಣೆ ನಡೆಸಿ ಮಸೀದಿ ಬಳಿ ಏಕೆ ಹೋಗಿದ್ದರು ಎಂಬ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮೇ ೧೮, ೨೦೦೭ ರಂದು, ಈ ಮಸೀದಿಯಲ್ಲಿ ನಮಾಜ್ ಸಮಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ೯ ಜನರು ಸಾವನ್ನಪ್ಪಿದರು ಮತ್ತು ೫೮ ಜನರು ಗಾಯಗೊಂಡಿದ್ದರು.

ಸಂಪಾದಕರ ನಿಲುವು

  • ಹಿಂದೂಗಳು ತಮ್ಮ ದೇವಸ್ಥಾನಗಳಲ್ಲಿ ನಮಾಜ, ಇಫ್ತಾರ್ ಔತಣಗಳನ್ನು ಮಾಡಲು ಮುಸ್ಲಿಮರನ್ನು ಆಹ್ವಾನಿಸುತ್ತಾರೆ ಮತ್ತು ಅವರ ಆತ್ಮಾಹೂತಿ ಸರ್ವಧರ್ಮ ಸಮಭಾವವನ್ನು ತೋರಿಸುತ್ತಾರೆ, ಆದರೆ ಮುಸ್ಲಿಮರು ಮಸೀದಿಯಲ್ಲಿ ಹಿಂದೂ ದೇವತೆಯ ಹೆಸರನ್ನು ಸಹ ಕೇಳಿದರೂ ವಿರೋಧಿಸುತ್ತಾರೆ ! ಈ ಬಗ್ಗೆ ಕಪಟ ಜಾತ್ಯತೀತವಾದಿ ಮತ್ತು ಪ್ರಗತಿ(ಅಧೋ)ಪರರು ಬಾಯಿ ತೆರೆಯುತ್ತಾರೆಯೇ ?
  • ಹಲವು ದಶಕಗಳಿಂದ ದೇಶಾದ್ಯಂತ ಮಸೀದಿಗಳಿಂದ ೫ ಬಾರಿ ಕೇಳಿಸುತ್ತಿರುವ ಅಜಾನ್ ಅನ್ನು ಹಿಂದೂಗಳು ಕೇಳುತ್ತಿದ್ದಾರೆ, ಆದರೆ ಕೆಲವು ಕ್ಷಣಗಳ ಕಾಲ ‘ಜೈ ಶ್ರೀರಾಮ್’ ಎಂಬ ರಿಂಗ್‌ಟೋನ್ ಅನ್ನು ಮುಸ್ಲಿಮರಿಗೆ ಎಕೆ ಕೇಳಲಾಗುವುದಿಲ್ಲ ?