‘ದಿ ಕೆರಳ ಸ್ಟೋರಿ’ ಚಲನಚಿತ್ರವನ್ನು ನಿಷೇಧಿಸಬೇಕಂತೆ !’ – ಕಾಂಗ್ರೆಸ್ ಆಗ್ರಹ

ತಿರುವನಂತಪುರಂ (ಕೇರಳ) – ಕಾಂಗ್ರೆಸ್ ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರ ಪ್ರದರ್ಶನದ ಮೇಲೆ ನಿಷೇಧ ಹೇರುವಂತೆ ಆಗ್ರಹಿಸಿದೆ. ಕಾಂಗ್ರೆಸ್, ‘ಈ ಚಲನಚಿತ್ರದಲ್ಲಿ ಮಾಡಲಾದ ದಾವೆ ತಪ್ಪಾಗಿರುವುದು. ಈ ದಾವೆಗಳಿಂದ ಸಮಾಜದಲ್ಲಿನ ಸೌಹಾರ್ದತೆ ಹಾಳಾಗಬಹುದು. ಈ ಚಲನಚಿತ್ರದಲ್ಲಿ ದಕ್ಷಿಣ ಭಾರತದಲ್ಲಿನ ೩೨ ಸಾವಿರ ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು ನಾಪತ್ತೆಯಾಗಿರುವ ನೈಜ ಘಟನೆಯ ಮಾಹಿತಿಯನ್ನು ತೋರಿಸಲಾಗಿದೆ ಈ ಯುವತಿಯರನ್ನು ‘ಲವ್ ಜಿಹಾದ್ ಮೂಲಕ ಮೋಸ ಮಾಡಲಾಗಿದೆ ಮತ್ತು ಅದರಲ್ಲಿನ ಕೆಲವು ಜನರು ಮಧ್ಯಪೂರ್ವ ದೇಶದಲ್ಲಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ ಸ್ಟೇಟ್ ನಲ್ಲಿ ಸೇರಿಸಲಾಗಿದೆ ಎಂದು ತೋರಿಸಲಾಗಿದೆ. ಮೇ ೫ ರಂದು ಈ ಚಲನಚಿತ್ರ ದೇಶದಲ್ಲಿ ಪ್ರದರ್ಶನಗೊಳ್ಳಲಿದೆ.

ಕಾಂಗ್ರೆಸ್ ಮುಖಂಡ ಮತ್ತು ಕೇರಳ ವಿಧಾನಸಭೆಯಲ್ಲಿನ ವಿರೋಧಿ ಪಕ್ಷದ ನಾಯಕ ವಿ.ಡಿ. ಸತೀಶನ್ ಇವರು,

೧. ಈ ಚಲನಚಿತ್ರದ ಉದ್ದೇಶ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪ್ರತಿಷ್ಠೆ ಹಾಳು ಮಾಡುವುದಾಗಿದೆ. `32 ಸಾವಿರ ಯುವತಿಯರನ್ನು ಮತಾಂತರಗೊಳಿಸಿ ಅವರನ್ನು ಮುಸಲ್ಮಾನರನ್ನಾಗಿ ಮಾಡಿ ಇಸ್ಲಾಮಿಕ್ ಸ್ಟೇಟ್ ನಲ್ಲಿ ಸೇರಿಸಲಾಗಿದೆ’, ಎಂದು ಸುಳ್ಳು ಮಾಹಿತಿ ನೀಡುವ ಈ ಚಲನಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡಬಾರದು.

೨. ಈ ಚಲನಚಿತ್ರದ ಟ್ರೈಲರನಲ್ಲಿ (ಚಲನಚಿತ್ರದ ಜಾಹೀರಾತಿನಲ್ಲಿ), ಈ ಚಲನಚಿತ್ರದಲ್ಲಿ ಏನು ಇದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಸೂತ್ರವಲ್ಲ, ಅಲ್ಪಸಂಖ್ಯಾತರನ್ನು ಒಬ್ಬಂಟಿಯಾಗಿ ಮಾಡುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ ಜಾರಿ ಮಾಡುವ ಪ್ರಯತ್ನದ ಒಂದು ಭಾಗವಾಗಿದೆ ಎಂಬುದು ತೋರಿಸಲಾಗಿದೆ. ಆದ್ದರಿಂದ ರಾಜ್ಯಗಳು ಸಂಘಟಿತರಾಗಿ ಎದುರಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ರಾಜ್ಯದ ಪ್ರತಿಷ್ಠೆ ಹಾಳಮಾಡುವ ಪ್ರಯತ್ನ ನಡೆಯುತ್ತಿರುವುದರ ಬಗ್ಗೆ ಹುರುಳಿಲ್ಲದ ದಾವೆ !

ಯಾವಾಗ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ನಡೆದಿರುವ ದಾಳಿ ತೋರಿಸುವ ಪ್ರಯತ್ನ ಆಗುತ್ತದೆ, ಆ ಸಮಯದಲ್ಲಿ ಕಾಂಗ್ರೆಸ್ ಅದಕ್ಕೆ ವಿರೋಧಿಸುತ್ತದೆ ಮತ್ತು ಈಗಲೂ ಕೂಡ ಅದು ಅದನ್ನೇ ಮಾಡುತ್ತಿದೆ ! ಕಾಂಗ್ರೆಸ್ ಎಂದರೆ ಎರಡನೆಯ ಮುಸ್ಲಿಂ ಲೀಗ್, ಎಂಬುದು ಗಮನಕ್ಕೆ ಬರುತ್ತದೆ !

ಸತ್ಯ ಘಟನೆ ತೋರಿಸುವ ಚಲನಚಿತ್ರಕ್ಕೆ ವಿರೋಧಿಸುವ ಕಾಂಗ್ರೆಸ್ ಸತ್ಯಪ್ರೇಮಿ ಅಲ್ಲ ಅಸತ್ಯ ಪ್ರೇಮಿ ಆಗಿರುವುದು, ಇದನ್ನು ತಿಳಿಯಿರಿ !