ವಿಶೇಷ ಸಂವಾದ : ಸಲಿಂಗಕಾಮಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಇಷ್ಟೊಂದು ಪ್ರಾಮುಖ್ಯತೆ ಏಕೆ ?

ಇದು ಒಂದು ಸುನಿಯೋಜಿತ ಷಡ್ಯಂತ್ರದ ಮೂಲಕ ಸಲಿಂಗಕಾಮಿ ವಿವಾಹಕ್ಕೆ ಕಾನೂನು ರೀತಿಯಲ್ಲಿ ಮಾನ್ಯತೆ ನೀಡುವ ಪ್ರಯತ್ನ ! – ನ್ಯಾಯವಾದಿ ಸುಭಾಷ ಝಾ, ಸರ್ವೋಚ್ಚ ನ್ಯಾಯಾಲಯ

ನ್ಯಾಯವಾದಿ ಸುಭಾಷ ಝಾ, ಸರ್ವೋಚ್ಚ ನ್ಯಾಯಾಲಯ

ಭಾ. ದಂ. ಸಂ. ಕಲಂ 377 ತೆರವುಗೊಳಿಸಿದ ನಂತರ ಭಾರತದಲ್ಲಿ ಸಲಿಂಗಕಾಮಕ್ಕೆ ಕಾನೂನುರೀತಿ ಮಾನ್ಯತೆ ದೊರೆತ ನಂತರ ಈಗ ಸಲಿಂಗಕಾಮಿ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವುದಕ್ಕಾಗಿ ಯಾಚಿಕೆ ಸಲ್ಲಿಸಲಾಗಿದೆ. ಈ ಯಾಚಿಕೆ ನಿರಂತರ ವಿಚಾರಣೆ ನಡೆಸಿ ಈಗ ಅದು ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠದ ಬಳಿ ವರ್ಗಾಯಿಸಲಾಗಿದೆ. ಇದು ಒಂದು ಸುನಿಯೋಜಿತ ಷಡ್ಯಂತ್ರದ ಮೂಲಕ ಸಲಿಂಗಕಾಮ ವಿವಾಹಕ್ಕೆ ಕಾನೂನು ರೀತಿಯಲ್ಲಿ ಮಾನ್ಯತೆ ನೀಡುವ ಪ್ರಯತ್ನ ನಡೆಯುತ್ತಿದೆ. ಸಾಮಾನ್ಯವಾಗಿ ನಿಯಮಿತ ಮೊಕ್ಕದಮೆ, ಬಾಕಿ ಉಳಿದಿರುವ ಮೊಕ್ಕದಮೆ ಇವುಗಳ ತೀರ್ಪು ನೀಡಲು ಸರ್ವೋಚ್ಚ ನ್ಯಾಯಾಲಯದ ಬಳಿ ಸಮಯವಿಲ್ಲ; ಆದರೆ ಸಲಿಂಗಕಾಮದ ವಿಷಯದ ಬಗ್ಗೆ ನ್ಯಾಯಾಲಯದ ಬಳಿ ಸಮಯವಿದೆ. ಯಾವುದೋ ತಪ್ಪು ಕಾನೂನು ತಂದು ಪತಿ-ಪತ್ನಿಯರ ಪವಿತ್ರ ವಿವಾಹಬಂಧನಕ್ಕೆ ಧಕ್ಕೆ ತರಲಾಗುತ್ತಿದೆ. ಸಲಿಂಗಕಾಮದ ವಿವಾಹಕ್ಕೆ ಮಾನ್ಯತೆ ನೀಡಿ ಈ ದೇಶ ಇನ್ನೊಮ್ಮೆ ಅಧೋಗತಿಯ ಕಡೆಗೆ ನಡೆಯುತ್ತಿದೆ, ಇದರ ಬಗ್ಗೆ ಸರಕಾರ ಮತ್ತು ಸಮಾಜವು ಗಾಂಭೀರತೆಯಿಂದ ವಿಚಾರ ಮಾಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಸುಭಾಷ ಝಾ ಇವರು ಪ್ರತಿಪಾದಿಸಿದರು. ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಸಲಿಂಗಕಾಮಕ್ಕೆ “ಸರ್ವೋಚ್ಚ ನ್ಯಾಯಾಲಯದಲ್ಲಿ ಇಷ್ಟೊಂದು ಪ್ರಾಮುಖ್ಯತೆ ಏಕೆ ?’ ಈ ಆನ್ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ನ್ಯಾಯವಾದಿ ಝಾ ಮುಂದೆ ಮಾತನಾಡಿ, ಮೂಲತಃ ಸಲಿಂಗಕಾಮ ಇದು ಚರ್ಚೆಯ ವಿಷಯವೇ ಅಲ್ಲ; ಏಕೆಂದರೆ ಸಲಿಂಗಕಾಮವು ಸಮಾಜದ ಕೆಲವು ವರ್ಗಕ್ಕೆ ಅಂಟಿರುವ ರೋಗವಾಗಿದೆ. ಯಾವ ರೀತಿ ಕೊರೋನಾಗೆ ಸರಕಾರ ಲಸಿಕೆ ತಯಾರಿಸಿದೆಯೋ, ಅದೇ ರೀತಿ ಈ ರೋಗದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವುದು ಅವಶ್ಯಕವಾಗಿದೆ .
ನಾಳೆ ದೇಶದಲ್ಲಿ ಲಕ್ಷಾಂತರ ಕಳ್ಳರು ಕಳ್ಳತನ ಮಾಡುವುದು ನಮ್ಮ ಸಾಂವಿಧಾನಿಕ ಅಧಿಕಾರವಾಗಿದೆ ಎಂದು ಹೇಳಿದರೆ, ಅದು ಅವರ ಸಾಂವಿಧಾನಿಕ ಅಧಿಕಾರವಾಗಲು ಸಾಧ್ಯವಿಲ್ಲ. ಹಾಗೆಯೇ ಸಲಿಂಗಕಾಮದ ವಿಷಯವೂ ಆಗಿದೆ. ಸಲಿಂಗಕಾಮದ ಸಮರ್ಥನೆ ಮಾಡಿ ನ್ಯಾಯಾಲಯದಲ್ಲಿ ಯಾಚಿಕೆ ಸಲ್ಲಿಸುವವರು ಯಾರು, ಇದನ್ನು ಸರಕಾರ ಹುಡುಕಬೇಕು.

ಇತಿಹಾಸದ ಅಧ್ಯಯನಕಾರರಾಗಿರುವ ಮೀನಾಕ್ಷಿ ಶರಣ ಇವರು, ಸಲಿಂಗ ಕಾಮ ಇದು ರೋಮ್ ಮತ್ತು ಗ್ರೀಸ್ ದೇಶಗಳಿಂದ ಬಂದಿರುವ ವಿಕೃತಿಯಾಗಿದೆ. ಇದರಿಂದಲೆ ಏಡ್ಸ್ ರೋಗದ ಉತ್ಪತ್ತಿಯಾಯಿತು. ಸಲಿಂಗ ಕಾಮಕ್ಕೆ ಮಾನ್ಯತೆ ನೀಡಿ ಪವಿತ್ರ ವಿವಾಹಬಂಧನ ಮತ್ತು ಕುಟುಂಬ ವ್ಯವಸ್ಥೆಯ ಮೇಲೆ ನಾಲ್ಕು ದಿಕ್ಕಿನಿಂದಲೂ ಆಘಾತ ಮಾಡಲಾಗುತ್ತಿದೆ. ಹಿಂದೂ ಧರ್ಮದಲ್ಲಿ ವಿವಾಹದ ಸಮಯದಲ್ಲಿ ಪುರುಷ ಮತ್ತು ಸ್ತ್ರೀಯ ಮಿಲನಕ್ಕೆ ಶಿವ ಶಕ್ತಿಯ ಮಿಲನ ಎಂದು ನಂಬಲಾಗಿದೆ. ಧರ್ಮದಲ್ಲಿ ಹೇಳಿರುವ ನಾಲ್ಕು ಋಣಗಳಲ್ಲಿನ ಪಿತೃ ಋಣ ತೀರಿಸಲು ಸಂತತಿಯ ಅವಶ್ಯಕತೆ ಇರುತ್ತದೆ. ಅದು ಕೇವಲ ವಿವಾಹದ ಮಾಧ್ಯಮದಿಂದ ಸಾಧ್ಯವಾಗುತ್ತದೆ. ಧರ್ಮದ ಯೋಗ್ಯ ಪಾಲನೆಯಾಗಲು ಸಾಧ್ಯವಾಗುತ್ತದೆ. ಪ್ರಸ್ತುತ ದಾರಿ ತಪ್ಪಿರುವ ಯುವ ಪೀಳಿಗೆಗೆ ಸಲಿಂಗಕಾಮದ ಮಾಧ್ಯಮದಿಂದ ದಿಶಾಹಿನನಾಗಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಸಮಾಜ ಇಂತಹ ಅನೈಸರ್ಗಿಕ ಮತ್ತು ತಪ್ಪು ವಿಷಯದ ವಿರುದ್ಧ ಹೋರಾಡುವುದು ಅವಶ್ಯಕವಾಗಿದೆ ಎಂದೂ ಶರಣ ಇವರು ಹೇಳಿದರು.