ಸಲಿಂಗಕಾಮಿ ವಿವಾಹದಲ್ಲಿ ಪತ್ನಿ ಯಾರು ಇರಬಹುದು ? – ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರಕಾರದ ಪ್ರಶ್ನೆ

ನವ ದೆಹಲಿ – ‘ಸಲಿಂಗಕಾಮಿ ವಿವಾಹಕ್ಕೆ ಮಾನ್ಯತೆ ದೊರೆಯಬೇಕು, ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ೨೦ ಅರ್ಜಿಗಳ ಮೇಲೆ ಆರನೇ ದಿನ ವಿಚಾರಣೆ ನಡೆಯಿತು. ಈ ಸಮಯದಲ್ಲಿ ಕೇಂದ್ರ ಸರಕಾರದ ಅಭಿಪ್ರಾಯ ಮಂಡಿಸುವಾಗ ಸಾಲಿಸಿಟರ್ ಜನರಲ್ ತುಷಾರ ಮೆಹತಾ ಇವರು, ಸಲಿಂಗಕಾಮಿ ವಿವಾಹದಲ್ಲಿ ಪತ್ನಿ ಯಾರು ಇರುವರು ಮತ್ತು ಪಾಲನೆ ಪೋಷಣೆ ಅಧಿಕಾರ ಯಾರಿಗೆ ದೊರೆಯುವುದು ? ‘ಗೆ’ (ಪುರುಷ ಜೋಡಿ) ಅಥವಾ ‘ಲೆಸ್ಬಿಯನ್’ (ಸ್ತ್ರೀ ಜೋಡಿ) ವಿವಾಹದಲ್ಲಿ ಪತ್ನಿ ಎಂದು ಯಾರನ್ನು ಹೇಳುವುದು ? ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಡಿ .ವೈ. ಚಂದ್ರಚೂಡ ಇವರು, ಸಲಿಂಗಕಾಮಿ ವಿವಾಹಕ್ಕಾಗಿ ಅರ್ಜಿ ಸಲ್ಲಿಸುವ ಯೋಚನೆ ಮಾಡಿದರೆ ಆಗ ಇದರ ಅರ್ಥ ಪತ್ನಿ ಪೋಷಣೆಯ ದಾವೆ ಮಾಡಬಹುದು; ಆದರೆ ಈ ನಿಯಮ ಸಿಲಿಂಗಕಾಮಿ ವಿವಾಹಕ್ಕೆ ಅನ್ವಯಿಸುವುದಿಲ್ಲ.

ಸಾಲಿಸಿಟರ್ ಜನರಲ್ ತುಷಾರ ಮೆಹತಾ ಮಾತು ಮುಂದುವರಿಸುತ್ತಾ, ಸಲಿಂಗಕಾಮಿ ವಿವಾಹ ಮಾನ್ಯತೆಗೆ ಒತ್ತಾಯಿಸುವವರ, ‘ವಿಶೇಷ ವಿವಾಹ ಕಾನೂನು ತಿದ್ದುಪಡಿ ಮಾಡಬೇಕು’, ಎಂದು ಅಪೇಕ್ಷೆ ಇದೆ. ಒಂದು ಕಡೆ ಸಾಮಾನ್ಯ ವಿವಾಹ ಕಾನೂನು ಮತ್ತು ಸಲಿಂಗಕಾಮಿ ವಿವಾಹಕ್ಕೆ ಅನ್ವಯಿಸುವ ಕಾನೂನು ಹೇಗೆ ಇರಲು ಸಾಧ್ಯ? ಇದಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.