೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಅನುಮಾನದ ಮೇಲೆ ನಯೀಮ್ ನ ಬಂಧನ !

ಬುಲಂದಶಹರ (ಉತ್ತರಪ್ರದೇಶ ) – ಇಲ್ಲಿಯ ಜಹಾಂಗೀರಬಾದ ಪ್ರದೇಶದಲ್ಲಿನ ೫ ವರ್ಷದ ಓರ್ವ ಹುಡುಗಿ ಆಕೆಯ ಪಕ್ಕದ ಮನೆಯಲ್ಲಿ ಮೃತ ಅವಸ್ಥೆಯಲ್ಲಿ ಕಂಡಿದೆ. ಆಕೆ ಕುಟುಂಬದವರು ಆಕೆಯ ಮೇಲೆ ಬಲತ್ಕಾರ ಆಗಿರುವ ಆರೋಪ ಮಾಡಿದ್ದು ಅವರು ಅವರ ಮನೆಯ ಪಕ್ಕದಲ್ಲಿರುವ ನಯಿಮ್ ಮೇಲೆ ಅನುಮಾನ ಪಟ್ಟಿದ್ದಾರೆ. ನಯಿಮ್ ನನ್ನು ಬಂಧಿಸಲಾಗಿದೆ.

ಎಪ್ರಿಲ್ ೨೪ ರಂದು ಹುಡುಗಿ ಮನೆಯ ಹೊರಗೆ ಆಡುತ್ತಿರುವಾಗ ಅನಿರೀಕ್ಷಿತವಾಗಿ ಕಣ್ಮರೆಯಾಗಿದ್ದಳು. ಎರಡು ಗಂಟೆ ಆದರೂ ಆಕೆಯ ಸುಳಿವು ಸಿಗಲಿಲ್ಲ; ಆದ್ದರಿಂದ ಕುಟುಂಬದವರು ಆಕೆಯನ್ನು ಹುಡುಕಲು ಆರಂಭಿಸಿದರು. ಆ ಸಮಯದಲ್ಲಿ ಪಕ್ಕದಲ್ಲಿ ಇರುವ ನಯಿಮ್ ಮನೆಯಲ್ಲಿ ಆಕೆಯ ಶವ ಪತ್ತೆ ಆಯಿತು. ನಯಿಮ್ ನಶೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿರುವುದು ಕೂಡ ಬೆಳಕಿಗೆ ಬಂದಿದೆ. ನಯಿಮ್ ಹುಡುಗಿಯ ಮೇಲೆ ಬಲಾತ್ಕಾರ ನಡೆಸಿದ್ದಾನೆಂದು ಕುಟುಂಬದವರು ಆರೋಪ ಮಾಡಿದ್ದು, ಈ ಹಿಂದೆ ಕೂಡ ಅವನು ಈ ರೀತಿ ಮಾಡುವ ಪ್ರಯತ್ನ ಮಾಡಿದ್ದನು ಎಂದು ಕುಟುಂಬದವರ ಹೇಳಿಕೆಯಾಗಿದೆ.

ಸಂಪಾದಕೀಯ ನಿಲುವು

ಇಂತಹ ಕಾಮುಕರಿಗೆ ಕಠಿಣ ಶಿಕ್ಷೆ ಆಗಲು ಪ್ರಯತ್ನ ಆಗಬೇಕು !