ಸಲಿಂಗಕಾಮಿ ವಿವಾಹ ಪ್ರಕರಣ ನಿರ್ವಹಿಸಲು ನ್ಯಾಯಾಲಯ ಯೋಗ್ಯ ವೇದಿಕೆ ಅಲ್ಲ ! – ಕಿರೆನ್ ರಿಜಿಜೂ

ಕಿರೇನ್ ರಿಜಿಜು

ನವ ದೆಹಲಿ – ಸಂಲಿಂಗಕಾಮಿ ವಿವಾಹಕ್ಕೆ ಮಾನ್ಯತೆ ನೀಡುವ ಅಂಶ ಸಂಸತ್ತಿಗೆ ಬಿಡಬೇಕು, ಇಂತಹ ಪ್ರಕರಣಗಳನ್ನು ನಿರ್ವಹಿಸಲು ನ್ಯಾಯಾಲಯ ಯೋಗ್ಯ ವೇದಿಕೆ ಅಲ್ಲ. ಸರ್ವೋಚ್ಚ ನ್ಯಾಯಾಲಯ ಕೇವಲ ಕೊರತೆ ದೂರ ಮಾಡಬಹುದು; ಆದರೆ ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನಿಗೆ ಪ್ರಭಾವಿತ ಗೊಳಿಸುವ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರ ಕಾರಣ, ಜನರಿಗೆ ಬೇಡವಾದ ವಿಷಯ ಅವರ ಮೇಲೆ ಹೇರಲು ಸಾಧ್ಯವಿಲ್ಲ, ಹೀಗೆ ಕೇಂದ್ರ ಕಾನೂನು ಸಚಿವ ಕಿರೆನ ರಿಜಿಜೂ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಸಲಿಂಗಕಾಮಿ ವಿವಾಹದ ಬಗ್ಗೆ ನಡೆಯುತ್ತಿರುವ ವಿಚಾರಣೆಯ ಹಿನ್ನೆಲೆಯಲ್ಲಿ ಹೇಳಿದರು.