ಲಂಡನ – ಬ್ರಿಟನ್ ನ ಜೈಲಿನಲ್ಲಿರುವ ಮುಸ್ಲಿಂ ಕೈದಿಗಳು ತಮ್ಮೊಂದಿಗಿರುವ ಕೈದಿಗಳನ್ನು ಇಸ್ಲಾಂ ಧರ್ಮ ಸ್ವೀಕರಿಸುವದಕ್ಕಾಗಿ ಒತ್ತಾಯಿಸಲಾಗುತ್ತಿದೆ. ಮುಸಲ್ಮಾನೇತರ ಕೈದಿಗಳ ಮಂಚದ ಮೇಲೆ ಕುರಾನ್ ಇಡಲಾಗುತ್ತದೆ ಮತ್ತು ಅವರಿಗೆ ಇಸ್ಲಾಂ ಸ್ವೀಕಾರ ಅಥವಾ ವೇದನೆ ಸಹಿಸಲು ಪರ್ಯಾಯ ನೀಡಲಾಗುತ್ತದೆ, ಎಂದು ಬ್ರಿಟನ್ ನ ಸರಕಾರ ನೇಮಿಸಿರುವ ಶ್ರದ್ದೆಯ ವಿಷಯದ ವಿಭಾಗದ ಸಲಹೆಗಾರ ಕಾಲಿನ್ ಬ್ಲೂಮ ಇವರು ತಮ್ಮ ವರದಿಯಲ್ಲಿ ಹೇಳಿದ್ದಾರೆ.
‘Muslims constitute 30% of male prisoners in Britain, Muslim gangs in prisons are forcing conversion and radicalisation’: Reporthttps://t.co/ex9wqetpoJ
— OpIndia.com (@OpIndia_com) April 27, 2023
೧. ಬ್ಲೂಮ ಇವರ ವರದಿಯ ಪ್ರಕಾರ, ಜೈಲಿನಲ್ಲಿ ಯಾರೇ ಮುಸಲ್ಮಾನೇತರ ಕೈದಿ ಕಂಡರೆ ಮುಸಲ್ಮಾನರ ಗುಂಪು ಅವರಿಗೆ ಯಾವುದೇ ರಕ್ಷಣೆ ನೀಡುವುದಿಲ್ಲ .ಆ ಕೈದಿಗಳು ಮುಸಲ್ಮಾನ ಗುಂಪಿನ ಹಿಂಸಾಚಾರದ ಮತ್ತು ಬೆದರಿಕೆಗೆ ಬಲಿಯಾಗುತ್ತಾರೆ.
೨. ಲಂಡನ್ ಜೈಲಿನಲ್ಲಿ ಮುಸ್ಲಿಂ ಪುರುಷ ಕೈದಿಗಳ ಸಂಖ್ಯೆ ಸುಮಾರು ಶೇಕಡಾ ೩೦ ರಷ್ಟು ಇದೆ. (ಅಲ್ಪಸಂಖ್ಯಾತ ಇರುವ ಮುಸಲ್ಮಾನರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ. ಭಾರತದಲ್ಲಿ ಕೂಡ ಇದೇ ಚಿತ್ರಣ ಇರುವುದು ! – ಸಂಪಾದಕರು) ಈ ಕಟ್ಟರವಾದಿ ಮುಸಲ್ಮಾನ ಕೈದಿಗಳಿಂದ ಇತರ ಕೈದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತದೆ, ಎಂದು ವರದಿಯಲ್ಲಿ ಹೇಳಲಾಗಿದೆ.
೩. ಈ ಮತಾಂತರದ ಆಧಾರದ ಮೇಲೆ ಕಟ್ಟರವಾದಿ ಗುಂಪಿಗೆ ಸಂಬಂಧಿತ ಅಂಶಗಳು ಇರುವುದರಿಂದ ತ್ವರಿತ ಕ್ರಮ ಕೈಗೊಳ್ಳಬೇಕು, ಎಂದು ಕಾಲಿಂನ್ ಇವರು ತಮ್ಮ ವರದಿಯಲ್ಲಿ ಹೇಳಿದ್ದಾರೆ. ಯಾವುದೇ ಧರ್ಮದ ಕೈದಿಯ ತುಲನೆಯಲ್ಲಿ ಜೈಲಿನಲ್ಲಿ ಹಿಂದೂ ಕೈದಿಗಳ ಸಂಖ್ಯೆ ಕಡಿಮೆ ಇದೆ; ಆದರೆ ಉದ್ಯೋಗ ಕ್ಷೇತ್ರದಲ್ಲಿ ಅವರು ಎಲ್ಲಕ್ಕಿಂತ ಹೆಚ್ಚಾಗಿದ್ದಾರೆ, ಎಂದು ಕೂಡ ವರದಿಯಲ್ಲಿ ಹೇಳಿದ್ದಾರೆ. (ಹಿಂದೂ ವ್ಯಕ್ತಿ ಸಂಸ್ಕಾರವುಳ್ಳವನಾಗಿರುತ್ತಾನೆ. ಹೆಚ್ಚಿನ ಹಿಂದೂಗಳು ಜಗತ್ತಿನ ಯಾವುದೇ ಸ್ಥಳದಲ್ಲಿ ಇದ್ದರೂ ಕೂಡ ಅವರು ಅವರ ಮೇಲೆ ಪ್ರೀತಿ, ಪ್ರಾಮಾಣಿಕತೆ ಇದು ಹಿಂದೂ ಧರ್ಮದಲ್ಲಿನ ಸಂಸ್ಕಾರ ಅವರಿಗೆ ಕಾಣುತ್ತದೆ ! – ಸಂಪಾದಕರು)
೪. ಈ ವರದಿಯಲ್ಲಿ ಕಾಲಿಂಗ್ ಇವರು ಬ್ರಿಟನಿನಲ್ಲಿ ಖಲಿಸ್ತಾನಿ ಬೆಂಬಲಿಗರ ಹೆಚ್ಚುತ್ತಿರುವ ಸಮಸ್ಯೆಗಳ ವಿಷಯ ಕೂಡ ಸರಕಾರದ ಗಮನಕ್ಕೆ ತಂದಿದ್ದಾರೆ.
ಸಂಪಾದಕೀಯ ನಿಲುವುಜೈಲುಗಳನ್ನೂ ಸಹ ಮತಾಂತರದ ಕೇಂದ್ರ ಮಾಡಿಕೊಂಡಿರುವ ಕಟ್ಟರವಾದಿ ಮುಸಲ್ಮಾನ ಕೈದಿ ! ತನ್ನನ್ನು ಮುಂದುವರೆದ ಮತ್ತು ಜಾತ್ಯತೀತ ಎಂದು ಹೇಳಿಕೊಳ್ಳುವ ಬ್ರಿಟನ್ ನಲ್ಲಿ ಇಸ್ಲಾಂ ಹೇಗೆ ಬೇರು ಬಿಡುತ್ತಿದೆ, ಇದೇ ಇದರಿಂದ ತಿಳಿದು ಬರುತ್ತದೆ ! |