ಮರ್ಡರ್‌ ರಾಜಧಾನಿಯಾದ ಯುಪಿ ಮಾಡಲ್‌ ಕರ್ನಾಟಕಕ್ಕೆ ಬೇಡವಂತೆ

ಚುನಾವಣೆ ಪ್ರಯುಕ್ತ ಯೋಗಿ ಆದಿತ್ಯನಾಥರ ಚುನಾವಣೆ ಪ್ರಚಾರದ ಬಗ್ಗೆ ಕಾಂಗ್ರೆಸ್‌ನಿಂದ ಟೀಕೆ

ಬೆಂಗಳೂರು – ಕರ್ನಾಟಕದ ಚುನಾವಣೆ ಪ್ರಯುಕ್ತ ರಾಜ್ಯ ಪ್ರಚಾರಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜ್ಯಕ್ಕೆ ಆಗಮಿಸಿದ್ದಾರೆ. ಇದನ್ನು ಟ್ವಿಟರ್‍‌ನಲ್ಲಿ ಟೀಕಿಸಿದ ಕಾಂಗ್ರೆಸ್‌ ‘ಕ್ರೈಮ್ ಕ್ಯಾಪಿಟಲ್” ಎಂದೇ ಕುಖ್ಯಾತಿ ಪಡೆದಿರುವ ರಾಜ್ಯದ ಮುಖ್ಯಮಂತ್ರಿ ಸರ್ವಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಕರ್ನಾಟಕಕ್ಕೆ ಬಂದು ಬಡಾಯಿ ಕೊಚ್ಚಿಕೊಳ್ಳುವುದಕ್ಕಿಂತ ಹಾಸ್ಯ ಬೇರೊಂದಿಲ್ಲ. (2019-2021) 3 ವರ್ಷದಲ್ಲಿ 11 ಸಾವಿರ ಹತ್ಯೆಗಳು ನಡೆದಿದ್ದು ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿದ್ದು ತಮ್ಮ ಅಸಾಮರ್ಥ್ಯದಿಂದ ಅಲ್ಲವೇ?’ ಎಂದು ಪ್ರಶ್ನಿಸಿದೆ. ಅಲ್ಲದೇ ದೇಶದ ಮರ್ಡರ್‌ ರಾಜಧಾನಿಯ ಯುಪಿ ಮಾಡಲ್ ಕರ್ನಾಟಕಕ್ಕೆ ಬೇಡ ಎಂದು ಛಾಯಾಚಿತ್ರ ಪೋಸ್ಟ್‌ ಸಹ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಟ್ವಿಟರ್‍‌ ಖಾತೆದಾರರೊಬ್ಬರು‌ `ಭಾರತದ ಎಲ್ಲ ಜನಗಳಿಗೆ ಗೊತ್ತು ಯೋಗಿಜಿ ಮಾಡೋ ಕೆಲ್ಸ, ನೀವು ಈ ರೀತಿ ಮಾತಾಡಿ ಮಾತಾಡಿನೆ ಮಣ್ಣು ತಿಂತಾ ಇರದು, ಗೂಂಡಾಗಳಿಗೆ ಎನ್ಕೌಂಟರ್ ಮಾಡಿದ್ರೆ ನಿಮಗೆ ಅದು ತಪ್ಪು ಅನ್ಸುತ್ತಾ,?, ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕರ್ನಾಟಕ ಯುಪಿ ತರಹ ಆದ್ರೆ ಕಾಂಗ್ರೆಸ್‌ ಉಳಿಯಲ್ಲ ಎಂಬ ಭಯ ಕಾಡುತ್ತಿದೆಯಾ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಸಂಪಾದಕೀಯ ನಿಲುವು

ದೇಶದ ವಿಭಜನೆಯ ವೇಳೆ ಲಕ್ಷಗಟ್ಟಲೆ ಹಿಂದೂಗಳ ಕಗ್ಗೋಲೆಯಾದಾಗಿನಿಂದ, 1990 ರಲ್ಲಿ ಕಾಶ್ಮೀರದಲ್ಲಿ 4 ಲಕ್ಷ ಕಾಶ್ಮೀರಿ ಹಿಂದೂಗಳ ನರಮೇಧ ನಡೆಯುವ ತನಕ ಯಾವ ಸರಕಾರದ ಮಾಡಲ್‌ ದೇಶದಲ್ಲಿತ್ತು ? ಎಂದೂ ಕಾಂಗ್ರೆಸ್‌ ಹೇಳಬೇಕು