ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಅಪರಾಧವನ್ನು ನಿರ್ಲಕ್ಷಿಸಲಾಗುವುದಿಲ್ಲ ! – ಉತ್ತರಾಖಂಡ ಉಚ್ಚ ನ್ಯಾಯಾಲಯ

ಉತ್ತರಾಖಂಡ ಉಚ್ಚ ನ್ಯಾಯಾಲಯ

ಡೆಹ್ರಾಡೂನ್ (ಉತ್ತರಾಖಂಡ) – ಭಾರತವು ಒಂದು ಜಾತ್ಯತೀತ ದೇಶವಾಗಿದೆ. ಇಲ್ಲಿ ಯಾವುದೇ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಉತ್ತರಾಖಂಡ್ ಉಚ್ಚ ನ್ಯಾಯಾಲಯ ನಿರೀಕ್ಷಣೆಯನ್ನು ಮಾಡಿದೆ. ಭಾರತೀಯ ದಂಡ ಸಂಹಿತೆ ೨೯೫ ಅ ರ ಅಡಿಯಲ್ಲಿ ಆರೋಪಿಗಳ ವಿರುದ್ಧ ದಾಖಲಾಗಿರುವ ಅಪರಾಧವನ್ನು ರದ್ದುಗೊಳಿಸುವ ಮನವಿಯನ್ನು ತಿರಸ್ಕರಿಸುತ್ತಾ ನ್ಯಾಯಾಲಯವು ಈ ಸೂಚನೆ ನೀಡಿದೆ.

ನ್ಯಾಯಾಲಯವು, ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯೂ ಇತರ ಧರ್ಮಗಳನ್ನು ಗೌರವಿಸಬೇಕು. ಇದರ ಕೊರತೆ ಇದ್ದರೇ ಮತ್ತು ಇತರ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾದರೆ, ಇಂತಹ ಘಟನೆಗಳು ಸಮಾಜವನ್ನು ಕುಂಠಿತಗೊಳಿಸುತ್ತದೆ ಮತ್ತು ಇದರಿಂದ ಅಶಾಂತಿ ಹಾಗೂ ಅನಗತ್ಯ ದ್ವೇಷವನ್ನು ಉಂಟುಮಾಡುತ್ತದೆ ಎಂದು ಹೇಳಿದೆ.