ದುರ್ಗ (ಛತ್ತೀಸಗಡ)ದಲ್ಲಿ ೨೫೦ ಕ್ರೈಸ್ತರಿಂದ ಪುನಃ ಹಿಂದೂ ಧರ್ಮದಲ್ಲಿ ಘರವಾಪಸಿ !

(ಘರವಾಪಸಿ ಅಂದರೆ ಹಿಂದೂ ಧರ್ಮವನ್ನು ತ್ಯಜಿಸಿ ಇತರ ಪಂಥವನ್ನು ಸೇರಿದ ಹಿಂದೂಗಳನ್ನು ಪುನಃ ಹಿಂದೂ ಧರ್ಮದಲ್ಲಿ ಸೇರಿಸಿಕೊಳ್ಳುವುದು)

ದುರ್ಗ (ಛತ್ತೀಸಗಡ) – `ರಾಷ್ಟ್ರ ರಕ್ಷಾ ಮಹಾಸಮ್ಮೇಲನ ಮತ್ತು ಘರವಾಪಸಿ ೨೦೨೩’ರ ಅನ್ವಯ ೨೫೦ ಜನರ (೧೦೦ ಕುಟುಂಬಗಳ) ಘರವಾಪಸಿ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಛತ್ತೀಸಗಡದ ಭಾಜಪದ ನಾಯಕರು ಹಾಗೂ `ಅಖಿಲ ಭಾರತೀಯ ಘರ ವಾಪಸಿ’ ಉಪಕ್ರಮದ ಪ್ರಮುಖರಾದ ಪ್ರಬಲ ಪ್ರತಾಪ ಸಿಂಹ ಜೂದೇವರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಇವರ ಕೈಯಿಂದ ಘರಾವಾಪಸಿ ಮಾಡಿದ ಹಿಂದೂಗಳಿಗೆ ಹಿಂದೂಧರ್ಮದಲ್ಲಿ ಅಧಿಕೃತ ಸ್ವಾಗತವನ್ನು ಕೋರಲಾಯಿತು. ಈ ಕಾರ್ಯಕ್ರಮವನ್ನು `ಸರ್ವಹಿತಕಾರಿಣಿ ಮಾನವ ಸೇವಾ ಸಂಸ್ಥಾನ’ ಹಾಗೂ ಇತರ ಹಿಂದೂ ಸಂಘಟನೆಗಳು ಸಂಯುಕ್ತವಾಗಿ ಆಯೋಜಿಸಿದ್ದವು. ಕಳೆದ ವರ್ಷ ಜೂದೇವರವರ ನೇತೃತ್ವದಲ್ಲಿ ೩ ಸಾವಿರ ಜನರ ಘರವಾಪಸಿ ಮಾಡಿಸಲಾಯಿತು.

ಜನವರಿ ೨೦೨೩ – ಛತ್ತೀಸಗಡದ ಮಹಾಸುಮಂದ ಜಿಲ್ಲೆಯಲ್ಲಿ ಸುಮಾರು ೧೧೦೦ ಕ್ರೈಸ್ತರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.

ಅಕ್ಟೊಬರ್ ೨೦೨೨ – ಒಡಿಶಾ ರಾಜ್ಯದಲ್ಲಿನ ಸುಂದರಗಡ ಜಿಲ್ಲೆಯಲ್ಲಿನ ೧೭೩ ಕ್ರೈಸ್ತ ಕುಟುಂಬಗಳ ಸುಮಾರು ೫೦೦ ಜನರು ಘರವಾಪಸಿ ಮಾಡಿದರು.

ಮಾರ್ಚ ೨೦೨೨ – ಛತ್ತೀಸಗಡದ ಮಹಾಸುಮಂದ ಜಿಲ್ಲೆಯಲ್ಲಿ ಸುಮಾರು ೧೨೫೦ ಕ್ರೈಸ್ತರು ಹಿಂದೂ ಧರ್ಮವನ್ನು ಸ್ವೀಕರಿಸಿದರು.

ಪ್ರಾಣವಿರುವ ವರೆಗೆ ಘರವಾಪಸಿ ಮಾಡಿಸಿ ಸನಾತನ ಧರ್ಮದ ರಕ್ಷಣೆ ಮಾಡುವೆನು ! – ಪ್ರಖರ ಹಿಂದುತ್ವನಿಷ್ಠ ಹಾಗೂ ಭಾಜಪದ ನಾಯಕ ಪ್ರಬಲ ಪ್ರತಾಪ ಸಿಂಹ ಜೂದೇವ

ದುರ್ಗದಲ್ಲಿ ನಡೆದ ಘರವಾಪಸಿಯ ಕಾರ್ಯಕ್ರಮವನ್ನು ಸಂಬೋಧಿಸುವಾಗ ಪ್ರಬಲ ಪ್ರತಾಪ ಸಿಂಹ ಜೂದೇವರವರು ಮಾತನಾಡುತ್ತ, ಹಿಂದೂಗಳ ಮತಾಂತರವೂ ದೇಶವನ್ನು ಒಡೆಯುವ ಎಲ್ಲಕ್ಕಿಂತ ದೊಡ್ಡ ಷದ್ಯಂತ್ರವಾಗಿದೆ. ಇದರಿಂದಾಗಿ ಘರವಾಪಸಿ ಕಾರ್ಯಕ್ರಮವನ್ನು ನಡೆಸುವುದು ಆವಶ್ಯಕವಾಗಿದೆ. ದೇಹದಲ್ಲಿ ಪ್ರಾಣವಿರುವ ವರೆಗೆ ಘರವಾಪಸಿಯ ಕಾರ್ಯಕ್ರಮಗಳ ಮಾಧ್ಯಮದಿಂದ ಸನಾತನ ಧರ್ಮದ ರಕ್ಷಣೆ ಮಾಡುತ್ತಿರುವೆನು. ಛತ್ತೀಸಗಡದಲ್ಲಿನ ಕಾಂಗ್ರೆಸ್ ಸರಕಾರವು ಯಾವಾಗಲೂ ಕ್ರೈಸ್ತ ಮಿಶಿನರಿಗಳ ಹಿಂದೂಗಳ ಮತಾಂತರದ ಕಾರ್ಯಾಚರಣೆಗಳ ವಿಷಯದಲ್ಲಿ ಕುರುಡಾಗಿದೆ, ಎಂದು ಹೇಳಿದರು.

ಸಂಪಾದಕರ ನಿಲುವು

ಈಗ ಹಿಂತಿರುಗಿರುವ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಅವರಲ್ಲಿ ಧರ್ಮಾಭಿಮಾನವನ್ನು ಜಾಗೃತಗೊಳಿಸುವುದು ಆವಶ್ಯಕವಾಗಿದೆ !