‘ಬಾರ್ ಕೌನ್ಸಿಲ ಆಫ್ ಇಂಡಿಯಾ’ ದಿಂದ ಸಲಿಂಗಕಾಮಿ ವಿವಾಹದ ವಿರುದ್ಧದ ಪ್ರಸ್ತಾಪಕ್ಕೆ ಅನುಮೋದನೆ !

ಸಲಿಂಗ ವಿವಾಹ: ಬಾರ್ ಕೌನ್ಸಿಲ್ನ ದೊಡ್ಡ ಹೆಜ್ಜೆ, ಸಲಿಂಗ ವಿವಾಹದ ವಿರುದ್ಧ ನೇರವಾಗಿ ಪ್ರಸ್ತಾಪ

ನವ ದೆಹಲಿ – ‘ಬಾರ್ ಕೌನ್ಸಿಲ್ ಆಫ್ ಇಂಡಿಯಾ’ ದಿಂದ ಸಲಿಂಗಕಾಮಿ ವಿವಾಹದ ವಿರುದ್ಧದ ಪ್ರಸ್ತಾಪವನ್ನು ಅನುಮೋದಿಸಿದೆ. ‘ಈ ಪ್ರಕರಣವನ್ನು ನ್ಯಾಯಾಲಯವು ದೇಶದ ಸಂಸತ್ತಿಗೆ ಬಿಡಬೇಕು’, ಎಂದು ಈ ಪ್ರಸ್ತಾಪದ ಮೂಲಕ ಬಾರ ಕೌನ್ಸಿಲ್ ವಿನಂತಿಸಿದೆ. ಹಾಗೂ ಅವರು, ಸಲಿಂಗಕಾಮಿಯ ವಿವಾಹದ ಸಂದರ್ಭದಲ್ಲಿ ದೇಶದಲ್ಲಿನ ಕಾನೂನು ನಿಜವಾದ ಅರ್ಥದಲ್ಲಿ ಜನರ ಇಚ್ಛೆಯ ಪ್ರತಿಬಿಂಬವಾಗಿದೆ. ದೇಶದಲ್ಲಿನ ಶೇಕಡ ೯೯.೯ ನಾಗರೀಕರ ಸಲಿಂಗಕಾಮಿ ವಿವಾಹಕ್ಕೆ ವಿರೋಧವಿದೆ. ದೇಶದಲ್ಲಿನ ಬಹು ಸಂಖ್ಯಾತ ನಾಗರೀಕರ ಅಭಿಪ್ರಾಯ, ‘ಸರ್ವೋಚ್ಚ ನ್ಯಾಯಾಲಯ ಈ ಅಜರ್ಜಿಯ ಪರ ತೀರ್ಪು ನೀಡಿದರೆ ದೇಶದ ಸಂಸ್ಕೃತಿ, ಧಾರ್ಮಿಕ ಮತ್ತು ಪಾರಂಪರಿಕ ವ್ಯವಸ್ಥೆಯ ವಿರುದ್ಧ ಎಂದು ತಿಳಿಯಲಾಗುವುದು.’ ಬಾರ್ ಕೌನ್ಸಿಲ್ ಇದು ಸಾಮಾನ್ಯ ವ್ಯಕ್ತಿಯ ಧ್ವನಿಯಾಗಿದೆ, ಆದ್ದರಿಂದ ನಾವು ಈ ಅಂಶಗಳ ಬಗ್ಗೆ ನಮ್ಮ ಕಳವಳ ವ್ಯಕ್ತಪಡಿಸುತ್ತಿದ್ದೇವೆ ಎಂದು ಹೇಳಿದೆ.

೧. ಪ್ರಸ್ತಾಪದಲ್ಲಿ, ಒಂದುವೇಳೆ ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಸಲಿಂಗಕಾಮಿ ವಿವಾಹದ ಪರವಾಗಿ ಯಾವುದೇ ನಿಲುವು ತಾಳಿದರೆ, ಅದರ ಪರಿಣಾಮ ನೇರ ದೇಶದ ಸಾಮಾಜಿಕ ವ್ಯವಸ್ಥೆಗೆ ಬಿರುಕು ಮೂಡಬಹುದು. ಸರ್ವೋಚ್ಚ ನ್ಯಾಯಾಲಯವು ದೇಶದಲ್ಲಿನ ಬಹುಮತದ, ನಾಗರೀಕರ ಭಾವನೆ ಗೌರವಿಸುವುದು, ಇದನ್ನು ಪರಿಗಣಿಸುವುದು ಅಪೇಕ್ಷಿತವಾಗಿದೆ ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ನಮ್ಮ ವಿನಂತಿ ಕೂಡ ಇದೆ.

೨. ಕಳೆದ ಕೆಲವು ದಿನಗಳಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲಿಂಗಕಾಮಿ ವಿವಾಹ ವಿಷಯದ ಅಜರ್ಜಿಯ ಕುರಿತು ವಿಚಾರಣೆ ನಡೆಯುತ್ತಿದೆ. ಸಲಿಂಗಕಾಮಿ ವಿವಾಹಕ್ಕೆ ಕೇಂದ್ರ ಸರಕಾರದಿಂದ ಕೂಡ ನ್ಯಾಯಾಲಯದಲ್ಲಿ ವಿರೋಧ ವ್ಯಕ್ತವಾಗಿದೆ.