ಸುರಕ್ಷೆಯ ಸಂಬಂಧ ಪಟ್ಟ ಗುಪ್ತಚರ ವರದಿ ಬಹಿರಂಗ !
ಕೊಚ್ಚಿ (ಕೇರಳ) – ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 24 ರಿಂದ ೨ ದಿನದ ಕೇರಳ ಪ್ರವಾಸಕ್ಕೆ ಹೋಗುವರು . ಈ ಪ್ರವಾಸದಲ್ಲಿ ಅವರನ್ನು ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರಂತೆ ಆತ್ಮಾಹುತಿ ಬಾಂಬ್ ನಿಂದ ಮುಗಿಸುವ ಬೆದರಿಕೆಯ ಪತ್ರ ಸಿಕ್ಕಿದೆ ಎಂದು ಕೇರಳದ ಭಾಜಪ ಅಧ್ಯಕ್ಷ ಕೆ. ಸುರೇಂದ್ರನ್ ಇವರು ಮಾಹಿತಿ ನೀಡಿದರು.
೧. ಸುರೇಂದ್ರನ್ ಇವರು, ‘ಪ್ರಧಾನಮಂತ್ರಿ ಇವರಿಗೆ ಬಂದಿರುವ ಬೆದರಿಕೆಯ ಪತ್ರ ಮಲಯಾಳಂ ಭಾಷೆಯಲ್ಲಿ ಬರೆದಿದ್ದು ಪತ್ರದಲ್ಲಿ ಕಳಿಸುವವರ ಹೆಸರು ಕೊಚ್ಚಿಯ ನಿವಾಸಿ ಎನ್ .ಜೇ. ಜಾನಿ ಎಂದು ಉಲ್ಲೇಖವಿದೆ.’ ಎಂದು ಹೇಳಿದರು.
೨. ಪೊಲೀಸರು ತಕ್ಷಣ ಜಾನಿ ಇವರ ಮನೆಯ ಮೇಲೆ ದಾಳಿ ನಡೆಸಿದರು, ಆದರೆ ಪತ್ರದ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಜಾನಿ ಹೇಳಿದರು.
೩. ಮೋದಿ ಇವರ ಭದ್ರತೆಗೆ ಸಂಬಂಧಿಸಿದಂತೆ ಗುಪ್ತಚರ ವರದಿ ಬಹಿರಂಗವಾಗಿದೆ. ಈ ಗಂಭೀರ ಘಟನೆಯಿಂದ ಸುರೇಂದ್ರನ್ ಇವರು, ಪೊಲೀಸರು ಗಂಭೀರವಾದ ತಪ್ಪು ಮಾಡಿದ್ದಾರೆ, ಅದರ ವಿಚಾರಣೆ ನಡೆಯಬೇಕು. ಸಂಬಂಧ ಪಟ್ಟ ವರದಿ ೪೯ ಪುಟಗಳದ್ದಾಗಿದ್ದು ಅದರಲ್ಲಿ ಕಾರ್ಯನಿರತ ಇರುವ ಅಧಿಕಾರಿಗಳ ಹೆಸರು, ಪ್ರಧಾನ ಮಂತ್ರಿಯ ಕಾರ್ಯಕ್ರಮದ ವಿವರಣೆ ಮತ್ತು ಇತರ ಅಂಶಗಳು ಒಳಗೊಂಡಿವೆ.
Death threat to #PMModi; #Keralapolice arrests man for warning suicide bomb attack #Kerala #NarendraModi https://t.co/90TyZzlmXT
— India TV (@indiatvnews) April 23, 2023
ಸಂಪಾದಕರ ನಿಲುವುಬೆದರಿಕೆ ನೀಡುವವರ ಸಹಿತ ಸೂತ್ರಧಾರನ ಹೇಡೆಮುರಿ ಕಾಟ್ಟುವುದಕಾಗಿ ಕಮ್ಯುನಿಸ್ಟ್ ಕೇರಳದ ಪೊಲೀಸರು ಪ್ರಯತ್ನ ಮಾಡುವರೇ, ಇದರ ಬಗ್ಗೆ ಅನುಮಾನವಿದೆ. ಆದ್ದರಿಂದ ಕೇಂದ್ರಗೃಹ ಸಚಿವಾಲಯ ಇದರಲ್ಲಿ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕು ! |