ಜ್ಞಾನವಾಪಿಯಲ್ಲಿ ಶಿವಲಿಂಗ ಇರುವ ಸ್ಥಳದಲ್ಲಿ ವಜು ಮಾಡುವ ಅವಕಾಶ ನೀಡಲಾಗುವುದಿಲ್ಲ !

ಸವರ್ವೋಚ್ಚ ನ್ಯಾಯಾಲಯದಲ್ಲಿ ಉತ್ತರ ಪ್ರದೇಶದ ಭಾಜಪ ಸರಕಾರದ ನಿಲುವು

(ವಜು ಎಂದರೆ ನಮಾಜ್ ಮಾಡುವ ಮೊದಲು ಕೈಕಾಲು ತೊಳೆಯುವುದು)

ವಾರಣಾಸಿ (ಉತ್ತರ ಪ್ರದೇಶ) – ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಬಳಿ ವಜು ಮಾಡಲು ಮುಸ್ಲಿಂ ಪಕ್ಷದ ಬೇಡಿಕೆಗೆ ಉತ್ತರ ಪ್ರದೇಶ ಸರಕಾರವು ಸವರ್ವೋಚ್ಚ ನ್ಯಾಯಾಲಯದಲ್ಲಿ ವಿರೋಧಿಸಿದೆ. ಈ ಬಗ್ಗೆ ನ್ಯಾಯಾಲಯವು ಮಸೀದಿ ಮತ್ತು ದೇವಸ್ಥಾನದ ಕಕ್ಷಿದಾರರಿಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿತ್ತು; ಆದರೆ ಈ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಾಗಲಿಲ್ಲ. ಹೀಗಾಗಿ ನಮಾಜ್‌ ಮಾಡುವವರಿಗೆ ನೀರು ಮತ್ತು ಶೌಚಾಲಯದ ವ್ಯವಸ್ಥೆ ಮಾಡುವಂತೆ ವಾರಣಾಸಿ ಜಿಲ್ಲಾಧಿಕಾರಿಗೆ ನ್ಯಾಯಾಲಯವು ಆದೇಶ ನೀಡಿದೆ.