ಪಠ್ಯಕ್ರಮದಿಂದ ಮೊಗಲರ ಇತಿಹಾಸವನ್ನು ತೆಗೆದುಹಾಕಿರುವುದರಿಂದ ಶಾಸಕ ಜಿತೇಂದ್ರ ಆವ್ಹಾಡರಿಗೆ ಹೊಟ್ಟೆಯುರಿ
ಮುಂಬಯಿ, ಎಪ್ರಿಲ್ 22 (ವಾತರ್ತೆ) – ಶಾಲೆಯ ಪಠ್ಯಪುಸ್ತಕದಿಂದ ಮೊಗಲರು ಹೋದರು, ಮೌಲಾನಾ ಆಝಾದ ಹೋದರು, ಮಹಾತ್ಮಾ ಗಾಂಧಿ ಹೋದರು. ಈಗ ಶಾಲೆಯ ಅಭ್ಯಾಸ ಕ್ರಮದಿಂದ ಮಾನವನ ವಿಕಾಸ ಪ್ರಕ್ರಿಯೆಯ ಸಿದ್ಧಾಂತವನ್ನು ಮಂಡಿಸುವ `ಚಾರ್ಲ್ಸ ಡಾರ್ವಿನ’ ಕೂಡ ತೆಗೆಯಲಾಯಿತು. ಕೇವಲ ಮರದ ಕೆಳಗೆ ಶಾಲೆಯನ್ನು ಪ್ರಾರಂಭಿಸುವುದು ಬಾಕಿ ಉಳಿದಿದೆ, ಎಂದು ರಾಷ್ಟ್ರವಾದಿ ಕಾಂಗ್ರೆಸ್ ಶಾಸಕ ಜಿತೇಂದ್ರ ಆವ್ಹಾಡ ಇವರು ಸರಕಾರದ ನಿರ್ಣಯವನ್ನು ಅಪಹಾಸ್ಯ ಮಾಡುತ್ತಾ ಟ್ವೀಟ್ ಮಾಡಿದ್ದಾರೆ. (`ಇಂತಹವರಲ್ಲಿ ಮೊಗಲರ ಮೇಲಿನ ಪ್ರೀತಿ ಜಾಗೃತವಾಗಿದೆ’ ಎಂದು ಹೇಳುವುದಿದೆಯೇ ? – ಸಂಪಾದಕರು)
शालेय पुस्तकातून मुघल गेले, मौलाना आझाद गेले; महात्मा गांधी गेले आता शालेय अभ्यासक्रमातून मानवी उत्क्रांतीचा सिद्धांत मांडणारा चार्ल्स डार्विन सुद्धा काढला.
फक्त झाडाखाली शाळा बसवायच्या राहिल्यात !
— Dr.Jitendra Awhad (@Awhadspeaks) April 22, 2023
ಈ ಹಿಂದೆಯೂ ಅಫಝಲಖಾನನ ಗೋರಿಯನ್ನು ತೆಗೆದುಹಾಕಿರುವ ಬಗ್ಗೆ ಆವ್ಹಾಡರವರು ಸರಕಾರವನ್ನು ಟೀಕಿಸಿದ್ದರು. `ಔರಂಗಜೇಬನು ಕ್ರೂರಿಯಾಗಿರಲಿಲ್ಲ’ ಎನ್ನುವ ಮೊಗಲಪ್ರೇಮಿ ಆವ್ಹಾಡರು ಕೆಲವು ತಿಂಗಳುಗಳ ಹಿಂದೆ ಹೇಳಿಕೆಯನ್ನು ನೀಡಿದ್ದರು. ಕೇಂದ್ರ ಸರಕಾರದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಸಂಸ್ಥೆಯ (ಎನ್.ಸಿ.ಇ.ಆರ್.ಟಿ.) ಪಠ್ಯಪುಸ್ತಕದಿಂದ ಮೊಗಲರ ಇತಿಹಾಸವನ್ನು ತೆಗೆದುಹಾಕಲು ನಿರ್ಣಯಿಸಿದೆ. ಮೊಗಲರ ಇತಿಹಾಸದ ಬದಲಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕದಲ್ಲಿ ಭಾರತದ ರಾಷ್ಟ್ರಪುರುಷರ ಪರಾಕ್ರಮದ ಇತಿಹಾಸವನ್ನು ಸಮಾವೇಶಗೊಳಿಸಲಿದೆ.