ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ತೆರಿಗೆದಾರರ ಹಣವನ್ನು ಎಲ್ಲಿ ಖರ್ಚು ಮಾಡುತ್ತಾರೆ, ಎಂಬುದರ ಬಗ್ಗೆ ಗಮನವಿಡಿ !

ಭಾರತೀಯ ಸರಕಾರಿ ಸೇವೆಯಲ್ಲಿನ ಅಧಿಕಾರಿ(ಐ.ಎ.ಎಸ್.)ಗಳಿಗೆ ಪ್ರಧಾನಮಂತ್ರಿ ಮೋದಿಯವರ ಕರೆ !

ನವದೆಹಲಿ – ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ ಮೇಲೆ ಗಮನವಿಡಿ. ಅವರು ತೆರಿಗೆದಾರರ ಹಣವನ್ನು ತಮ್ಮ ಪಕ್ಷಕ್ಕಾಗಿ ಮಾಡುತ್ತಿದ್ದಾರೆಯೇ ಅಥವಾ ದೇಶ ಹಿತಕ್ಕಾಗಿ ಮಾಡುತ್ತಿದ್ದಾರೆ ? ಎಂಬುದನ್ನು ನೀವು ನೋಡಬೇಕಿದೆ. ಸರದಾರ ಪಟೇಲರು ಹೇಳುತ್ತಿದ್ದ ‘ಸ್ಟೀಲ್ ಫ್ರೇಮ್ ಆಫ್ ಇಂಡಿಯಾ’ ಎಂಬಂತಹ ಸರಕಾರವನ್ನು ಸಾಕಾರಗೊಳಿಸಬೇಕಿದೆ. ಸರಕಾರದಿಂದ ತಪ್ಪಾದರೆ ದೇಶದ ಸಂಪೂರ್ಣ ಹಣದ ಲೂಟಿಯಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದರು. ಅವರು ೧೬ ನೇ ನಾಗರೀಕ ಸೇವಾ ದಿನದ ಪ್ರಯುಕ್ತ ಇಲ್ಲಿನ ವಿಜ್ಞಾನ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾರತೀಯ ಸರಕಾರಿ ಸೇವೆಯಲ್ಲಿನ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು.

ಪ್ರಧಾನಮಂತ್ರಿ ಮೋದಿಯವರು ಮಾತನಾಡುತ್ತ,

೧. ದೇಶವು ನಿಮ್ಮ ಮೇಲೆ ವಿಶ್ವಾಸವಿಟ್ಟು ನಿಮಗೆ ಬಹುದೊಡ್ಡ ಅವಕಾಶವನ್ನು ನೀಡಿದೆ. ಆ ವಿಶ್ವಾಸವನ್ನು ಸಾರ್ಥಕಗೊಳಿಸುವ ಕೆಲಸ ಮಾಡಿರಿ. ನಿಮ್ಮ ಸೇವೆಯಲ್ಲಿ ಕೇವಲ ದೇಶದ ಹಿತವೇ ನಿಮ್ಮ ನಿರ್ಣಯದ ಕೇಂದ್ರ ಬಿಂದುವಾಗಿರಬೇಕು.

೨. ಇಂದು ನೀವು ಎಷ್ಟು ದಕ್ಷತೆಯಿಂದ ಇರುವಿರಿ? ಎಂಬುದು ಸಮಸ್ಯೆಯಲ್ಲ. ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದು ? ಎಂಬುದನ್ನು ನಿರ್ಧರಿಸಬೇಕು.

೩. ನಮ್ಮ ಯೋಜನೆಗಳು ಎಷ್ಟು ಮಹತ್ತರವಾಗಿವೆ ಎಂಬುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಯೋಜನೆಯು ಕಾಗದದ ಮೇಲೆ ಚೆನ್ನಾಗಿಯೇ ಕಾಣುತ್ತಿದ್ದರೂ ಕೊನೆಯ ವ್ಯಕ್ತಿಯವರೆಗೆ ತಲುಪುವುದು ನಿರ್ಣಾಯಕವಾಗಿದೆ. ಹೀಗೆ ನಡೆಯದಿದ್ದರೆ ನಮಗೆ ಅಪೇಕ್ಷಿತ ಪರಿಣಾಮ ದೊರೆಯುವುದಿಲ್ಲ.

೪. ಕಳೆದ ೨೫ ವರ್ಷಗಳಿಂದ ಸೇವೆಯಲ್ಲಿರುವ ಅಧಿಕಾರಿಗಳು ದೇಶವನ್ನು ಸ್ವಾತಂತ್ರ್ಯದ ಸುವರ್ಣ ಕಾಲದವರೆಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಈಗ ಮುಂದಿನ ೨೫ ವರ್ಷ ಸೇವೆಯನ್ನು ಸಲ್ಲಿಸುವ ಯುವಕರ ಪಾತ್ರ ಎಲ್ಲಕ್ಕಿಂತ ಹಿರಿಯದಾಗುವುದು.

ಅಲ್ಪಸಂಖ್ಯಾತ ಸಚಿವಾಲಯವು ೩೦ ಲಕ್ಷಕ್ಕೂ ಹೆಚ್ಚಿನ ನಕಲಿ ಯುವಕರಿಗೆ ಶಿಷ್ಯವೇತನದ ಲಾಭ ನೀಡುತ್ತಿತ್ತು.

ಇದಕ್ಕೆ ಜವಾಬ್ದಾರರಾಗಿರುವವರ ಮೇಲೆ ಕಠಿಣ ಕ್ರಮ ಜರುಗಲೇಬೇಕು !

ಪ್ರಧಾನಮಂತ್ರಿ ಮೋದಿಯವರು ಮಾತನಾಡುತ್ತ, ದೇಶದಲ್ಲಿ ೪ ಕೋಟಿಗಿಂತಲೂ ಹೆಚ್ಚಿನ ಗ್ಯಾಸ್ ಕನೆಕ್ಷನ್, ನಕಲಿ ಪಡಿತರ ಚೀಟಿಗಳನ್ನು ತಯಾರಿಸಲಾಗಿದೆ. ಅಲ್ಪಸಂಖ್ಯಾತ ಸಚಿವಾಲಯ ೩೦ ಲಕ್ಷಕ್ಕಿಂತಲೂ ಹೆಚ್ಚಿನ ನಕಲಿ ಯುವಕರಿಗೆ ಶಿಷ್ಯವೇತನದ ಲಾಭ ನೀಡುತ್ತಿತ್ತು. ಇಂದು ನಮ್ಮೆಲ್ಲರ ಪ್ರಯತ್ನಗಳಿಂದ ವ್ಯವಸ್ಥೆಯು ಬದಲಾಗಿದೆ. ದೇಶದಲ್ಲಿನ ಸುಮಾರು ೩ ಲಕ್ಷ ಕೋಟಿ ರೂಪಾಯಿಗಳು ಅಪಾತ್ರರ ಕೈ ಸೇರುವುದು ತಪ್ಪಿದೆ. ಇಂದು ಈ ಹಣ ಬಡವರ ಕಾರ್ಯಕ್ಕೆ ಬರುತ್ತಿದೆ. ಅವರ ಜೀವನ ಸುಲಭವಾಗುತ್ತಿದೆ’ ಎಂದು ಹೇಳಿದರು.

(ಸೌಜನ್ಯ: ಇಂಡಿಯಾ ಟುಡೇ)