ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆ ಕೇಳುವ ಕಾಂಗ್ರೆಸ್ ಚುನಾವಣೆ ಬಂದಾಕ್ಷಣ ಅವರ ಅಭ್ಯರ್ಥಿಗಳ ಈ ದೇವಸ್ಥಾನ ಭೇಟಿಗೆ ಮುಂದಾಗುತ್ತಾರೆ ಎಂಬುದು ವಿಪರ್ಯಾಸ
ಬೆಂಗಳೂರು – ಮಾಜಿ ಮುಖ್ಯಮಂತ್ರಿ ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯನವರು ನಾಮಪತ್ರ ಸಲ್ಲಿಕೆಗೂ ಮುನ್ನ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಅದೇ ರೀತಿ, ಅವರ ಹುಟ್ಟೂರಾದ ಸಿದ್ದರಾಮನ ಹುಂಡಿಯ ಸಿದ್ದರಾಮೇಶ್ವರ ದೇವಾಲಯ ಹಾಗೂ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
(ಸೌಜನ್ಯ : Zee Kannada News)
ಈ ಟ್ವೀಟ್ಗೆ ಪ್ರತಿಕ್ರಿಯೆಗಳ ವ್ಯಕ್ತವಾಗಿದ್ದು `ದೇವರ ನಂಬಿಕೆ ಅಂದ್ರೆ ಮೂಢ ನಂಬಿಕೆ ಅಂತಿದ್ರಿ ಆದ್ರೆ ಈಗ ಅಂತೂ ಇಂತೂ ಕೊನೆಗೆ ಶ್ರೀರಾಮನ ಪಾದವೆ ಗತಿ ಆಯ್ತು ಎಂದು ಮೀನಾಬಿಜಿ ಎಂಬವರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಪ್ರಶಾಂತ ಎಂಬವರು `ದೇವರು, ಮೌಡ್ಯ, ಹಣೆಯಲ್ಲಿ ಕುಂಕುಮ…ಇತ್ಯಾದಿ ಬಗ್ಗೆ ಜಾಸ್ತಿ ಮಾತನಾಡುವವರು ನೀವೇ ತಾನೇ?.. ನಿಮಗೆ ಇವೆಲ್ಲ ಆಗಿ ಬರಲ್ಲ ಅಲ್ಲವೇ?..ಮತ್ಯಾಕೆ ಈಗ ಬೇಕು ಇವೆಲ್ಲ?.’, ಎಂದು ಪ್ರಶ್ನಿಸಿದ್ದಾರೆ.
ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ನನ್ನ ಹುಟ್ಟೂರಾದ ಸಿದ್ದರಾಮನ ಹುಂಡಿಯ ಸಿದ್ದರಾಮೇಶ್ವರ ದೇವಾಲಯ ಹಾಗೂ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ. pic.twitter.com/ady4mBPSAR
— Siddaramaiah (@siddaramaiah) April 19, 2023