ಅಯೋಧ್ಯೆಯಲ್ಲಿ ೯೫ ವರ್ಷದ ಮಹಂತರನ್ನು ಮೃತ ಘೋಷಿಸಿ ಭೂ ಮಾಫಿಯಾರಿಂದ ಅವರ ಕೋಟ್ಯಾಂತರ ರೂಪಾಯಿಯ ಭೂಮಿ ಕಬಳಿಕೆ !

ಮಹಂತ ಜುಗಲ್ ಬಿಹಾರಿ ದಾಸ್

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಹನುಮಾನಗಡಿಯ ೯೫ ವರ್ಷದ ಮಹಂತ ಜುಗಲ ಬಿಹಾರಿ ದಾಸ ಇವರ ಕೋಟ್ಯಾಂತರ ರೂಪಾಯಿ ಭೂಮಿ ಭೂಮಾಫಿಯಾರಿಂದ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಾಂತರು ಮೃತಪಟ್ಟಿದ್ದಾರೆಂದು ಹೇಳಿ ಗೌರಿಶಂಕರ ಇವರು ಈ ಭೂಮಿಯನ್ನು ಕಬಳಿಸಿದ್ದಾರೆ.

೧. ಈ ಬಗ್ಗೆ ಮಾತನಾಡಿದ ಮಹಾಂತ ಜುಗಲ ಬಿಹಾರಿ ದಾಸ ಇವರು, ಆರೋಪಿಗಳು ನನ್ನನ್ನು ನನ್ನ ಭೂಮಿಯಿಂದ ಹೊರದಬ್ಬಿದ್ದಾರೆ. ಬಂದುಕಿನ ಭಯ ತೋರಿಸಿ ನನ್ನನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ. ನಾನು ಕಳೆದ ೧೦ ವರ್ಷಗಳಿಂದ ನಾನು ಜೀವಂತವಿದ್ದೇನೆಂದು ಸಾಬೀತುಪಡಿಸುತ್ತಾ ಭೂಮಿಯನ್ನು ಹಿಂಪಡೆಯಲು ನ್ಯಾಯಾಲಯಕ್ಕೆ ಅಲೆಯುತ್ತಿದ್ದೇನೆ .

೨. ಶ್ರೀರಾಮಮಂದಿರದಿಂದಾಗಿ ಅಯೋಧ್ಯೆಯಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಅಯೋಧ್ಯೆಯಲ್ಲಿನ ಭಾಜಪದ ಶಾಸಕರಾದ ಲಲ್ಲೂ ಸಿಂಹ ಇವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಅಧಿಕಾರಿ ಮತ್ತು ಭೂಮಾಫಿಯಾ ಇವರಲ್ಲಿನ ಸಂಬಂಧದ ಬಗ್ಗೆ ಪತ್ರ ಬರೆದು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಆಗ್ರಹಿಸಿದ್ದರು.

ಸಂಪಾದಕೀಯ ನಿಲುವು

ಇಂತಹ ಭೂಮಾಫಿಯಾಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಅವಶ್ಯಕ !