|
ಬೆಂಗಳೂರು – ಇಲ್ಲಿಯ ಪ್ರೇಜರ್ ಉಪನಗರದಲ್ಲಿನ ನಿವಾಸಿಗಳು ಬೆಂಗಳೂರು ಮಹಾನಗರಪಾಲಿಕೆಗೆ ಪತ್ರ ಬರೆದು ಪ್ರತಿವರ್ಷ ರಂಜಾನ ತಿಂಗಳಲ್ಲಿ ಇಲ್ಲಿಯ ಮಸೀದಿ ಮಾರ್ಗದಲ್ಲಿ ನಡೆಯುವ ‘ರಂಜಾನ ಫುಡ್ ಮೇಳ’ ರದ್ದು ಪಡಿಸಲು ಆಗ್ರಹಿಸಿದ್ದಾರೆ. ಫ್ರೇಜರ್ ಉಪನಗರದಲ್ಲಿ ಮಸೀದಿಯ ಮಾರ್ಗದಲ್ಲಿ ರಂಜಾನನಲ್ಲಿ ಪ್ರತಿದಿನ ಸಂಜೆ ಕಬಾಬ್ ಮತ್ತು ಬಿರಿಯಾನಿ ಮಾರಾಟಕ್ಕಾಗಿ ಕಾನೂನು ಬಾಹಿರಾದ ಅಂಗಡಿ ತೆರದಿರುತ್ತರೆ. ಆದ್ದರಿಂದ ಸಂಚಾರ ದಟ್ಟಣೆ ಮತ್ತು ಕಸದ ರಾಶಿಯಿಂದ ಸ್ಥಳೀಯ ಜನರು ಬೇಸತ್ತಿದ್ದಾರೆ. (ಕಾನೂನು ಬಾಹಿರಾದ ಅಂಗಡಿಗಳಿಂದ ಸಂಚಾರ ದಟ್ಟಣೆ ಮತ್ತು ಕಸದ ರಾಶಿ ಹಾಕುವವರ ವಿರುದ್ಧ ಸ್ಥಳೀಯ ಜನರಿಗೆ ಸರಕಾರ ಬಳಿ ಹೋಗ ಬೇಕಾಗುವುದು, ಇದು ಪೊಲೀಸರಿಗೆ ನಾಚಿಕೆಗೇಡು ! – ಸಂಪಾದಕರು)
೧. ‘ಹೊರಗಿನ ಜನರು ‘ನಮ್ಮ ಓಣಿಯಲ್ಲಿ ‘ರಂಜಾನ ಫುಡ್ ಮೇಳ ‘ ದ ನೆಪದಲ್ಲಿ ಅಂಗಡಿಗಳನ್ನು ತೆರೆಯುತ್ತಾರೆ ಮತ್ತು ಹೊರಗಿನ ಜನರು ತಿನ್ನಲು ಬರುತ್ತಾರೆ. ಇದರಿಂದ ನಮ್ಮ ಪ್ರದೇಶದಲ್ಲಿನ ಶಾಂತತೆ ಭಂಗವಾಗುತ್ತದೆ. ಆದ್ದರಿಂದ ‘ರಂಜಾನ್ ಫುಡ್ ಮೇಳ’ ತಕ್ಷಣ ನಿಲ್ಲಿಸಬೇಕು’. ಎಂದು ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
೨. ಇದರ ಜೊತೆಗೆ ಸ್ಥಳೀಯ ನಿವಾಸಿಗಳು, ಈ ಅಂಗಡಿಗಳು ತೆರೆಯುವುದರಿಂದ ಬಹಳ ಧ್ವನಿ ಉಂಟಾಗುತ್ತದೆ ಮತ್ತು ಎಲ್ಲಾ ಕಡೆ ವಾಹನ ದಟ್ಟಣೆ ಆಗುವುದರಿಂದ ಪರಿಸರದಲ್ಲಿ ಸಂಚಾರದಟ್ಟಣೆ ನಿರ್ಮಾಣವಾಗುತ್ತದೆ. ರಸ್ತೆಯ ಮೇಲೆ ಆಹಾರ ಪದಾರ್ಥ ಬೆಯಿಸುವುದರಿಂದ ದುರ್ಬಂಧ ಹರಡುತ್ತದೆ ಮತ್ತು ಅಡಿಗೆ ಮಾಡುವ ಹೊಗೆಯಿಂದ ವಾಯು ಮಾಲಿನ್ಯ ಆಗುತ್ತದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಜನಸಾಮಾನ್ಯರಿಗೆ ತೊಂದರೆ ಆಗುವ ಅಂಶಗಳ ಕುರಿತು ಕ್ರಮ ಕೈಗೊಳ್ಳುವುದಕ್ಕೆ ಏಕೆ ಒತ್ತಾಯಿಸಬೇಕು ? ಪೊಲೀಸರು ಮತ್ತು ಸರಕಾರ ಸ್ವತಃ ಇದರ ಮೇಲೆ ಕ್ರಮ ಏಕೆ ಕೈಗೊಳ್ಳುವುದಿಲ್ಲ ? |