ನವ ದೆಹಲಿ – ಉತ್ತರ ಪ್ರದೇಶದಲ್ಲಿ ಈಗ ಗಲಭೆಗಳಿಲ್ಲ. ಉತ್ತರ ಪ್ರದೇಶವು ಕಾನೂನಿನ ಆಡಳಿತವನ್ನು ಹೊಂದಿದೆ. ಈಗ ಯಾವುದೇ ಕ್ರಿಮಿನಲ್ ಅಥವಾ ಮಾಫಿಯಾ ಯಾವುದೇ ಉದ್ಯಮಿಗೆ ಬೆದರಿಕೆ ಹಾಕುತ್ತಿಲ್ಲ, ಉತ್ತರ ಪ್ರದೇಶ ಸರಕಾರವು ನಿಮಗೆ ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆಯನ್ನು ಒದಗಿಸುವ ಭರವಸೆ ನೀಡುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಹೇಳಿದ್ದಾರೆ. ಕುಖ್ಯಾತ ಗೂಂಡಾ ಅತಿಕ್ ಮತ್ತು ಅಶ್ರಫ್ ಅಹ್ಮದ್ ಹತ್ಯೆಯ ನಂತರ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಎದ್ದಿರುವಾಗ ಮುಖ್ಯಮಂತ್ರಿ ಯೋಗಿ ಈ ಹೇಳಿಕೆ ನೀಡಿದ್ದಾರೆ.
6 साल में माफिया को पनपने नहीं दिया: मुख्यमंत्री श्री @myogiadityanath जी महाराज pic.twitter.com/P6OuGKo0kv
— Yogi Adityanath Office (@myogioffice) April 10, 2023
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಹಿಂದೆ ರಾಜ್ಯಕ್ಕೆ ತೊಂದರೆಯಾಗಿದ್ದ ಮಾಫಿಯಾ ಈಗ ಅವರೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಒಮ್ಮೆಯೂ ಕರ್ಫ್ಯೂ ಇರಲಿಲ್ಲ. ಯಾವುದೇ ರಸ್ತೆಯಲ್ಲಿ ಹೋಗಲು ಭಯವಾಗುತ್ತಿರಲಿಲ್ಲ. ಉತ್ತರ ಪ್ರದೇಶ ಈಗ ಅಭಿವೃದ್ಧಿಗೆ ಹೆಸರುವಾಸಿಯಾಗಿದೆ. ಮೊದಲು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ದಯನೀಯವಾಗಿತ್ತು ಎಂದು ಹೇಳಿದರು.